ಚೆನ್ಮೈ : ಐಪಿಎಸ್ ಅಧಿಕಾರಿಯಾಗಿ ಕನ್ನಡಿಗರ ಮನಗೆದ್ದಿದ್ದ ಅಣ್ಣಾಮಲೈ ಇದೀಗ ಮೇಕೆದಾಟು ವಿಚಾರದಲ್ಲಿ ತಮಿಳುನಾಡಿಗೆ ಜೈ ಎಂದಿದ್ದಾರೆ. ಮಾತ್ರವಲ್ಲ ತಮಿಳುನಾಡು ಬಿಜೆಪಿ ತಮಿಳುನಾಡು ಸರಕಾರ ಹಾಗೂ ರೈತರ ಪರ ನಿಲ್ಲತ್ತದೆ ಅನ್ನುವ ಮೂಲಕ ಕರ್ನಾಟಕದ ವಿರುದ್ದ ಸಮರ ಸಾರಿದ್ದಾರೆ.

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಣ್ಣಾಮಲೈ ಇತ್ತೀಚಿಗಷ್ಟೇ ಆಯ್ಕೆಯಾಗಿದ್ದರು. ಇದೀಗ ಮೇಕೆದಾಟು ವಿಚಾರದಲ್ಲಿಅಣ್ಣಾಮಲೈ ನಾವು ಸಂಪೂರ್ಣವಾಗಿ ಸ್ಪಷ್ಟವಾಗಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ಕೂಡ ತಮಿಳುನಾಡು ಬಿಜೆಪಿ ರೈತರ ಪರ ನಿಲ್ಲುತ್ತದೆ ಎಂದಿದ್ದಾರೆ.
ಇದನ್ನೂ ಓದಿ : ಚೂಡಿದಾರ್ ಧರಿಸಿ ಶಾಲೆಗೆ ಬರುವಂತಿಲ್ಲ ..! ಡ್ರೆಸ್ ಕೋಡ್‌ಗೆ ಶಿಕ್ಷಕಿಯರಿಂದ ಭಾರೀ ಆಕ್ರೋಶ
ಮೇಕೆದಾಟು ಮಾತ್ರವಲ್ಲದೇ ತಮಿಳುನಾಡು ರೈತರು ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನೀರಿನಲ್ಲಿ ತನ್ನ ಪಾಲನ್ನು ಪಡೆಯಲೇ ಬೇಕು.ಇನ್ನು ಮುಖ್ಯಮಂತ್ರಿ ಸ್ಟಾಲಿನ್ ನಡೆಸಿದ ಸರ್ವಪಕ್ಷ ಸಭೆಯಲ್ಲಿಯೂ ಇಬ್ಬರು ಹಿರಿಯ ನಾಯಕರು ಭಾಗವಹಿಸಿದ್ದು, ಮೇಕೆದಾಟು ವಿಚಾರದಲ್ಲಿ ಸರಕಾರದ ಪರವಾಗಿ ಇರುವುದಾಗಿ ಹೇಳಿದ್ದಾರೆ.