ಬೆಂಗಳೂರು : ರಾಜ್ಯದ ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ತನ್ನ ಪಟ್ಟಿಯನ್ನು ಅಂತಿಮ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದ ನಾಲ್ವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದ್ದು, ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯ ಬಿಜೆಪಿ ಹೈಕಮಾಂಡ್ ಗೆ ಕಳುಹಿಸಿಕೊಟ್ಟಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಸಾಕಷ್ಟು ಲಾಭಿ ನಡೆದಿತ್ತು. ಬಿಜೆಪಿಯ ಹಲವು ನಾಯಕರೇ ಟಿಕೆಟ್ ಮೇಲೆ ಕಣ್ಣಿಟ್ಟಿದ್ದರು. ಹೀಗಾಗಿ ಕಾಂಗ್ರೆಸ್ ನಿಂದ ವಲಸೆ ಬಂದಿದ್ದದವರಿಗೆ ಆತಂಕ ಶುರುವಾಗಿತ್ತು. ಆದ್ರೀಗ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿಗೆ ಲಭಿಸುವ 4 ಸ್ಥಾನಗಳಿಗೆ ನಾಲ್ವರ ಹೆಸರನ್ನೇ ಫೈನಲ್ ಮಾಡಿದೆ.

ಎಂಟಿಬಿ ನಾಗರಾಜ್, ಆರ್.ಶಂಕರ್, ಎಚ್.ವಿಶ್ವನಾಥ್ ಹಾಗೂ ಚಿಂಚೋಳಿ ಕ್ಷೇತ್ರದಲ್ಲಿ ಟಿಕೆಟ್ ವಂಚಿತರಾಗಿದ್ದ ಸುನಿಲ್ ವಲ್ಯಾಪುರೆಗೆ ಟಿಕೆಟ್ ಪಕ್ಕಾ ಆಗಿದೆ. ನಾಲ್ವರ ಹೆಸರನ್ನು ಈಗಾಗಲೇ ಬಿಜೆಪಿ ಕೋರ್ ಕಮಿಟಿ ಫೈನಲ್ ಮಾಡಿದ್ದು, ಹೈಕಮಾಂಡ್ ಗೆ ಕಳುಹಿಸಿಕೊಟ್ಟಿದೆ. 4 ಸ್ಥಾನಗಳಿಗೆ 4 ಹೆಸರನ್ನು ಮಾತ್ರವೇ ಕಳುಹಿಸಿರುವುದರಿಂದಾಗಿ ಹೈಕಮಾಂಡ್ ಕೂಡ ಇವರ ಹೆಸರುಗಳನ್ನೇ ಫೈನಲ್ ಮಾಡಲಿದೆ ಎನ್ನಲಾಗುತ್ತಿದೆ.

ಉಳಿದಂತೆ ಬಿಜೆಪಿಯ ಪಕ್ಷದ ನಾಯಕರಿಗೆ ನಾಮನಿರ್ದೇಶನದ ಸಂದರ್ಭದಲ್ಲಿ ಅವಕಾಶವನ್ನು ಕಲ್ಪಿಸುವ ಭರವಸೆಯನ್ನು ರಾಜ್ಯ ನಾಯಕರು ನೀಡಿದ್ದಾರೆ. ಮಾತ್ರವಲ್ಲ ನಾಮ ನಿರ್ದೇಶನದ ಸಂದರ್ಭದಲ್ಲಿ ಪಕ್ಷದ ನಿಷ್ಠಾವಂತರಿಗೆ ಮಣೆಹಾಕುವುದಾಗಿಯೂ ಹೇಳಿದ್ದಾರೆ.