ಚಾರ್ಜಿಂಗ್ ವೇಳೆ ಮೊಬೈಲ್ ಬ್ಯಾಟರಿ ಸ್ಪೋಟ : 12 ವರ್ಷದ ಬಾಲಕ ದಾರುಣ ಸಾವು

ಲಕ್ನೋ : ಚಾರ್ಜಿಂಗ್ ವೇಳೆಯಲ್ಲಿ ಮೊಬೈಲ್ ಬ್ಯಾಟರಿ ಸ್ಪೋಟಗೊಂಡು 12 ವರ್ಷದ ಬಾಲಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದ ಮತ್ವಾರ್ ಗ್ರಾಮದಲ್ಲಿ ನಡೆದಿದೆ.

6 ನೇ ತರಗತಿಯ ವಿದ್ಯಾರ್ಥಿ ಮೋನು ಸಾವನ್ನಪ್ಪಿದ ದುರ್ದೈವಿ ಎಂದು ಗುರುತಿಸಲಾಗಿದೆ. ಬಾಲಕ ಮೊಬೈಲ್ ನ್ನು ಚಾರ್ಜ್ ಗೆ ಹಾಕಿದ್ದ. ಈ ವೇಳೆಯಲ್ಲಿ ಚಾರ್ಜ್ ಆಗಿದೆಯಾ ಎಂದು ಬಾಲಕ ಪರೀಕ್ಷಿಸಲು ಬ್ಯಾಟರಿಯನ್ನು ತನ್ನ ನಾಲಗೆಗೆ ತಾಗಿಸಿದ್ದಾನೆ. ಈ ವೇಳೆಯಲ್ಲಿ ಮೊಬೈಲ್ ಬ್ಯಾಟರಿ ಸ್ಪೋಟಗೊಂಡಿದೆ.

https://kannada.newsnext.live/maharashtra-lockdown-cm-meeting-covid-technical-experts/

ಬ್ಯಾಟರಿ ಸ್ಪೋಟದಿಂದಾಗಿ ಬಾಲಕನ ಮುಖಕ್ಕೆ ಗಂಭೀರ ಗಾಯವಾಗಿದ್ದು, ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ಮನೆಯವರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಬಾಲಕ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದ್ದಾರೆ. ಬಾಲಕನ ಮರಣೋತ್ತರ ಪರೀಕ್ಷೆಯ ನಂತರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

https://kannada.newsnext.live/kerala-viral-photoshoot-bride-drinks-smoke-photos/

Comments are closed.