ಮುಂಬೈ : diaper changing facility : ಸಾರ್ವಜನಿಕ ಶೌಚಾಲಯಗಳಲ್ಲಿ ಮಹಿಳೆಯರ ವಿಭಾಗದಲ್ಲಿ ಶಿಶುಗಳಿಗೆ ಡೈಪರ್ ಬದಲಾಯಿಸುವ ಸೌಲಭ್ಯ ಇದ್ದೇ ಇರುತ್ತದೆ. ಆದರೆ ಇದೇ ಮೊದಲ ಬಾರಿಗೆ ಮೆಟ್ರೋ ನಿಲ್ದಾಣಗಳಲ್ಲಿನ ಪುರುಷರ ವಾಶ್ರೂಮ್ಗಳಲ್ಲಿ ಶಿಶುಗಳಿಗೆ ಡೈಪರ್ ಬದಲಾಯಿಸುವ ಸೌಲಭ್ಯ ಲಭ್ಯವಾಗಲಿದೆ. ಮುಂಬೈನ ನಿರ್ಮಾಣ ಹಂತದಲ್ಲಿರುವ ಕಫ್ ಪರೇಡ್ – ಬಾಂದ್ರಾ ಮೆಟ್ರೋ ಕಾರಿಡಾರ್ನ ಎಲ್ಲಾ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗುತ್ತಿದೆ.
ಭಾರತದಲ್ಲಿ ಮೊದಲ ಬಾರಿಗೆ ಮೆಟ್ರೋ ನಿಲ್ದಾಣದ ಆವರಣದಲ್ಲಿ ಇಂತಹ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇಲ್ಲಿಯವರೆಗೆ ಭಾರತದ ಯಾವುದೇ ಮೆಟ್ರೋ ನಿಲ್ದಾಣದಲ್ಲಿ ಮಗುವಿನ ಡೈಪರ್ಗಳನ್ನು ಬದಲಾಯಿಸಲು ಪುರುಷರ ವಾಶ್ರೂಮ್ಗಳಲ್ಲಿ ಸೌಲಭ್ಯವನ್ನು ನೀಡಿರಲಿಲ್ಲ. ಆದರೆ ಇನ್ಮುಂದೆ ಈ ಸೌಲಭ್ಯವು ನಮ್ಮಲ್ಲಿ ಸಿಗಲಿದೆ ಎಂದು ಮೆಟ್ರೋ ರೈಲು ನಿಗಮದ ವಕ್ತಾರರು ತಿಳಿಸಿದ್ದಾರೆ .
ಎಲ್ಲಾ ನಿಲ್ದಾಣಗಳಲ್ಲಿ ಟಿಕೆಟ್ ಕೌಂಟರ್ ಒಳಗೆ ವಾಶ್ ರೂಮ್ ಇರುತ್ತದೆ. ಆದರೆ ಸಾಂತಾಕ್ರೂಸ್ ನಿಲ್ದಾಣದಲ್ಲಿ ಮಾತ್ರ ಈ ವಾಶ್ರೂಮ್ ಟಿಕೆಟ್ ಕೌಂಟರ್ನ ಹೊರಗಡೆ ಇರಲಿದೆ. ಪ್ರತಿ ನಿಲ್ದಾಣದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ತಲಾ ಒಂದು ವಾಶ್ರೂಂ ಇರಲಿದೆ. ನಿಲ್ದಾಣಗಳಲ್ಲಿ ಸ್ಥಳಾವಕಾಶ ಲಭ್ಯತೆಗೆ ಅನುಗುಣವಾಗಿ ವಾಶ್ ರೂಮ್ಗಳನ್ನು ಜೋಡಿಸಲಾಗಿದೆ .
ಮಕ್ಕಳನ್ನು ಬೆಳೆಸುವ ಜವಾಬ್ದಾರಿಯು ತಂದೆ ಹಾಗೂ ತಾಯಿಯ ಸಮಾನ ಜವಾಬ್ದಾರಿಯಾಗಿದೆ. ಇದೇ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಸೌಲಭ್ಯವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಮೆಟ್ರೋ ಪ್ರಯಾಣದ ಸಮಯದಲ್ಲಿ ಡೈಪರ್ಗಳನ್ನು ಬದಲಾಯಿಸುವ ಸಮಯದಲ್ಲಿ ಪೋಷಕರಿಗೆ ಅನಾನುಕೂಲವಾಗಬಾರದು ಎಂದು ಮೆಟ್ರೋ ರೈಲು ನಿಗಮದ ವಕ್ತಾರರು ತಿಳಿಸಿದ್ದಾರೆ.
ಒಂದೆರಡು ವರ್ಷಗಳ ಹಿಂದೆ ಪುರುಷರ ವಾಶ್ರೂಮ್ಗಳಲ್ಲಿ ಮಗುವಿನ ಡೈಪರ್ಗಳನ್ನು ಬದಲಾಯಿಸುವ ಸೌಲಭ್ಯದ ಕೊರತೆಯಿದೆ ಎಂಬ ವಿಚಾರವನ್ನು ನಾನು ಅರಿತುಕೊಂಡೆ. ಇದು ತಾಯಿಯಿಲ್ಲದೇ ತಂದೆಯ ಜೊತೆಯಲ್ಲಿ ಪ್ರಯಾಣ ಮಾಡುವ ಮಕ್ಕಳಿಗೆ ಸಾಕಷ್ಟು ಅನಾನುಕೂಲತೆಯನ್ನು ಉಂಟು ಮಾಡುತ್ತಿತ್ತು. ಶಾಪಿಂಗ್ ಮಾಲ್ಗಳಿಂದ ಹಿಡಿದು ರೆಸ್ಟಾರೆಂಟ್ಗಳು ಹಾಗೂ ಸಾರ್ವಜನಿಕ ಸಾರಿಗೆಗಳಲ್ಲಿ ಇಂತಹ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ .
ಇದನ್ನು ಓದಿ : Make Or Brake : ದಿನಕ್ಕೆ 12 ಗಂಟೆ, ವಾರಕ್ಕೆ 7 ದಿನ ಕೆಲಸ : ಎಲನ್ ಮಸ್ಕ್ ಆದೇಶಕ್ಕೆ ಟ್ವೀಟರ್ ಉದ್ಯೋಗಿಗಳು ಸುಸ್ತೋ ಸುಸ್ತು
ಇದನ್ನೂ ಓದಿ : KL Rahul back in form: ಟೀಕಾಕಾರರಿಗೆ ಅಬ್ಬರದ ಅರ್ಧಶತಕದೊಂದಿಗೆ ಉತ್ತರಿಸಿದ ರಾಹುಲ್, ವರ್ಕೌಟ್ ಆಯ್ತು ಕೊಹ್ಲಿ ಟಿಪ್ಸ್
Mumbai Metro to be the first with diaper changing facility in men’s washrooms