T20 World Cup 2022: ಬಾಂಗ್ಲಾ ವಿರುದ್ಧ ಗೆದ್ದ ಭಾರತ, ಸೆಮಿಫೈನಲ್‌ಗೆ ರೋಹಿತ್ ಬಳಗ ಮತ್ತಷ್ಟು ಹತ್ತಿರ

ಅಡಿಲೇಡ್: India beat Bangladesh : ರೋಚಕ ಪಂದ್ಯದಲ್ಲಿ ಬಾಂಗ್ಲಾದೇಶ (India Vs Bangladesh) ತಂಡವನ್ನು 5 ರನ್’ಗಳಿಂದ ಸೋಲಿಸಿದ ಭಾರತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್’ಗೆ ಮತ್ತಷ್ಟು ಹತ್ತಿರವಾಯಿತು. ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಸೂಪರ್-12 ಹಂತದ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ, ಡಕ್ವರ್ತ್ ಲೂಯಿಸಿ ನಿಯಮದ ಪ್ರಕಾರ 5 ರನ್’ಗಳ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆಡಿದ ನಾಲ್ಕು ಪಂದ್ಯಗಳಲ್ಲಿ 3 ಗೆಲುವುಗಳೊಂದಿಗೆ 6 ಅಂಕ ಕಲೆ ಹಾಕಿದ ಭಾರತ ಗ್ರೂಪ್-2 ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಭಾರತ ಒಡ್ಡಿದ 185 ರನ್’ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಪವರ್’ಪ್ಲೇನಲ್ಲಿ ಅಕ್ಷರಶಃ ಅಬ್ಬರಿಸಿ ಗೆಲುವಿನತ್ತ ಮುನ್ನುಗ್ಗುತ್ತಿತ್ತು. ಓಪನರ್ ಲಿಟ್ಟನ್ ದಾಸ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಆರ್ಭಟಿಸಿದರು. ಬಾಂಗ್ಲಾದೇಶ 7 ಓವರ್’ಗಳಲ್ಲಿ 66 ರನ್ ಗಳಿಸಿದ್ದಾಗ ಮಳೆ ಸುರಿದ ಕಾರಣ, ನಂತರ ಓವರ್’ಗಳ ಸಂಖ್ಯೆಯನ್ನು 16ಕ್ಕೆ ಇಳಿಸಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾ ಗೆಲುವಿಗೆ 151 ರನ್’ಗಳ ಪರಿಷ್ಕೃತ ಗುರಿ ನಿಗದಿ ಪಡಿಸಲಾಯಿತು. ಅಂದ್ರೆ ಪಂದ್ಯ ಮತ್ತೆ ಆರಂಭಗೊಂಡಾಗ ಬಾಂಗ್ಲಾದೇಶ 9 ಓವರ್’ಗಳಲ್ಲಿ 85 ರನ್ ಗಳಿಸಬೇಕಿತ್ತು.

ಆದರೆ 27 ಎಸೆತಗಳಲ್ಲಿ 60 ರನ್ ಗಳಿಸಿ ಆಡುತ್ತಿದ್ದ ಲಿಟ್ಟನ್ ದಾಸ್ ಅವರನ್ನು 10ನೇ ಓವರ್’ನಲ್ಲಿ ಕೆ.ಎಲ್ ರಾಹುಲ್ ಅದ್ಭುತ ಡೈರೆಕ್ಟ್ ಹಿಟ್ ಮೂಲಕ ಔಟ್ ಮಾಡುತ್ತಿದ್ದಂತೆ ಬಾಂಗ್ಲಾ ಕುಸಿತ ಆರಂಭಗೊಂಡಿತು. 84 ರನ್ನಿಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನತ್ತ ದಾಪುಗಾಲಿಟ್ಟಿದ್ದ ಬಾಂಗ್ಲಾದೇಶ ಕೇವಲ 22 ರನ್’ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು. ಅಂತಿಮ ಕ್ಷಣಗಳಲ್ಲಿ ಭಾರತ ಬೌಲರ್’ಗಳು ಕರಾರುವಾಕ್ ದಾಳಿ ನಡೆಸಿ ತಂಡಕ್ಕೆ 5 ರನ್’ಗಳ ರೋಚಕ ಗೆಲುವು ತಂದುಕೊಟ್ಟರು. ಅಂತಿಮವಾಗಿ 16 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಶಕ್ತವಾದ ಬಾಂಗ್ಲಾದೇಶ ಕೈಯಲ್ಲಿದ್ದ ಪಂದ್ಯವನ್ನು ಭಾರತಕ್ಕೆ ಒಪ್ಪಿಸಿ ನಿರಾಸೆ ಅನುಭವಿಸಿತು,.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್’ಗಳ ಉತ್ತಮ ಮೊತ್ತ ಕಲೆ ಹಾಕಿತು. ಸತತ ಮೂರು ವೈಫಲ್ಯಗಳ ನಂತರ ಫಾರ್ಮ್ ಕಂಡುಕೊಂಡ ಉಪನಾಯಕ ಕೆ.ಎಲ್ ರಾಹುಲ್ 32 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್’ಗಳ ನೆರವಿನಿಂದ 50 ರನ್ ಬಾರಿಸಿದ್ರೆ, ಮಾಜಿ ನಾಯಕ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಒಳಗೊಂಡ ಅಜೇಯ 64 ರನ್ ಸಿಡಿಸಿದ್ರು. 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 16 ಎಸೆತಗಳಲ್ಲಿ 30 ರನ್’ಗಳ ಕಾಣಿಕೆಯಿತ್ತರು. ಕೊನೆಯಲ್ಲಿ ರೋಚಕವಾಗಿ ಪಂದ್ಯ ಗೆದ್ದ ಭಾರತ ಸೆಮಿಫೈನಲ್ ಸ್ಥಾನವನ್ನು ಖಚಿತ ಪಡಿಸಿಕೊಂಡಿತು. ಭಾನುವಾರ (ನವೆಂಬರ್ 6) ನಡೆಯುವ ಸೂಪರ್-12 ಹಂತದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.

ಟಿ20 ವಿಶ್ವಕಪ್ 2022: ಗ್ರೂಪ್-2 ಅಂಕಪಟ್ಟಿ

ತಂಡ ಪಂದ್ಯ ಗೆಲುವು ಸೋಲು ನೋರಿಸಲ್ಟ್ ರನ್’ರೇಟ್ ಪಾಯಿಂಟ್ಸ್
1.ಭಾರತ 04 03 01 00 0.730 06
2.ದಕ್ಷಿಣ ಆಫ್ರಿಕಾ 03 02 00 01 2.772 05
3.ಬಾಂಗ್ಲಾದೇಶ 04 02 02 00 -1.276 04
4.ಜಿಂಬಾಬ್ವೆ 04 01 02 01 -0.313 03
5.ಪಾಕಿಸ್ತಾನ 03 01 02 00 0.765 02
6.ನೆದರ್ಲೆಂಡ್ಸ್ 04 01 03   00 -1.233 02

ಇದನ್ನೂ ಓದಿ : Sehwag criticized Dinesh Karthik: “ಇದೇನು ಬೆಂಗಳೂರು ಪಿಚ್ ಅಲ್ಲ”, ದಿನೇಶ್ ಕಾರ್ತಿಕ್ ವಿರುದ್ಧ ಸೆಹ್ವಾಗ್ ಈ ರೀತಿ ಗುಡುಗಿದ್ದೇಕೆ ?

ಇದನ್ನೂ ಓದಿ : Syed Mushtaq Ali T20 : ಕ್ವಾರ್ಟರ್ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಕರ್ನಾಟಕಕ್ಕೆ ವೀರೋಚಿತ ಸೋಲು

India beat Bangladesh by 5 runs and enter T20 world cup 2022 semi-final

Comments are closed.