ಮುಂಬೈ : ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಸದ್ಯಕ್ಕೆ ಜಾಮೀನು ಸಿಗದೆ ಶಾರೂಖ್ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವಲ್ಲೇ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿಗಳ ವಿರುದ್ದ ಗಂಭೀರ ಆರೋಪ ಕೇಳಿಬಂದ್ದು, ಆರ್ಯನ್ ಖಾನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣವನ್ನು ಮುಚ್ಚಿ ಹಾಕಲು ಬರೋಬ್ಬರಿ 18 ಕೋಟಿ ರೂಪಾಯಿ ಡೀಲ್ ನಡೆದಿದೆ ಅನ್ನೋ ಆರೋಪ ಕೇಳಿಬಂದಿದೆ.
ಕ್ರೂಸ್‌ನಲ್ಲಿ ನಡೆದಿದ್ದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಕೋಟಿ ರೂಪಾಯಿ ಡೀಲ್ ನಡೆದಿರುವ ಕುರಿತು ಆರೋಪಿ ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ. ಮಾತ್ರವಲ್ಲ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು ಐಷಾರಾಮಿ ಹಡಗಿನಲ್ಲಿ ನಡೆದ ದಾಳಿಯ ವೇಳೆಯಲ್ಲಿ ಸಾಕ್ಷಿದಾರರಿಂದ ಖಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಂಡಿದ್ದರು ಎಂದು ಪ್ರಭಾಕರ್ ಸೈಲ್ ಗಂಭೀರವಾದ ಆರೋಪ ಮಾಡಿದ್ದಾರೆ.
ಡ್ರಗ್ಸ್ ಪಾರ್ಟಿಯ ಮೇಲೆ ದಾಳಿ ನಡೆದ ದಿನದಂದು ರಾತ್ರಿ ಸಮೀರ್ ವಾಂಖೆಡೆ ಅವರು ಗೋಸ್ವಾಮಿ ಅವರ ಜೊತೆಗಿದ್ದರು. ಎನ್‌ಸಿಬಿ ಕಚೇರಿಯ ಬಳಿಯಲ್ಲಿ ಗೋಸ್ವಾಮಿ ಅವರು ಸ್ಯಾಮ್ ಎಂಬರವನ್ನು ಭೇಟಿಯಾಗಿದ್ದರು. ಈ ವೇಳೆಯಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ಶಾರೂಖ್ ಖಾನ್ ಮ್ಯಾನೇಜರ್ ಆಗಮಿಸಿದ್ದರು. ಗೋಸ್ವಾಮಿ ಹಾಗೂ ಸ್ಯಾಮ್ ಅವರು 25 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 18 ಕೋಟಿ ರೂಪಾಯಿಗೆ ಡೀಲ್ ಕುದುರಿತ್ತು. ಇದರಲ್ಲಿ 8 ಕೋಟಿ ರೂಪಾಯಿ ಸಮೀರ್ ವಾಂಖೆಡೆಗೆ ಹೋಗುತ್ತದೆ ಎಂದು ಗೋಸ್ವಾಮಿ ಹೇಳಿದ್ದರು. ಉಳಿದ ಹಣವನ್ನು ಇತರರಿಗೆ ವಿತರಿಸಲಾಗುವುದು ಎಂದು ಗೋಸ್ವಾಮಿ ಹೇಳಿದ್ದರು ಎಂದು ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ.
ಇನ್ನು ಆರ್ಯನ್ ಖಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ ಮಾಡಿರುವ ಲಂಚದ ಬೇಡಿಕೆ ಆರೋಪಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಅಧಿಕಾರಿಗಳು ಸ್ಪಷ್ಟನೆಯನ್ನು ಕೊಟ್ಟಿದೆ. ಸಮೀರ್ ವಾಂಖೆಡೆ ಅವರು ಖಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆಂದು ಸೈಲ್ ಆರೋಪಿಸಿದ್ದು, ಸಾಮಾಜಿಕ ಜಾಲತಾಣಗಳ ಬದಲು ಸೈಲ್ ನ್ಯಾಯಾಲಯದಲ್ಲಿ ವಾದ ಮಂಡಿಸಬೇಕು ಎಂದಿದೆ. ಅಲ್ಲದೇ ಸಮೀರ್ ವಾಂಖೆಡೆ ಅವರು ತಾನು ಎಲ್ಲಾ ಆರೋಪಗಳಿಗೂ ಉತ್ತರವನ್ನು ನೀಡುವುದಾಗಿ ಹೇಳಿದ್ದಾರೆ.
Drug bust case: Made to sign blank papers by NCB, heard of Rs 25 cr deal to let off Aryan Khan, says witness sail