Ind vs Pak T20 World Cup : ಕೊಯ್ಲಿ ಅರ್ಧ ಶತಕ, ಪಾಕಿಸ್ತಾನಕ್ಕೆ 152 ರನ್‌ ಟಾರ್ಗೆಟ್‌

ದುಬೈ : T20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ದ ಮೊದಲ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತ ಕಲೆ ಹಾಕಿದೆ. ಟೀಂ ಇಂಡಿಯಾ ನಾಯಕ ವಿರಾಟ್‌ ಕೊಯ್ಲಿ ಆಕರ್ಷಕ ಅರ್ಧ ಶತಕ ಹಾಗೂ ರಿಷಬ್‌ ಪಂತ್‌ ಅದ್ಬುತ ಆಟದ ನೆರವಿನಿಂದ ಭಾರತ 151 ರನ್‌ ಗಳಿಸಿದೆ.

ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿ ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕ ಆಟಗಾರ ರೋಹಿತ್‌ ಶರ್ಮಾ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ರೆ ರಾಹುಲ್‌ ಕೇವಲ 3 ರನ್‌ಗಳಿಸಿ ಔಟಾದ್ರು. ನಂತರ ವಿರಾಟ್‌ ಕೊಯ್ಲಿ ಜೊತೆಯಾದ ಸೂರ್ಯ ಕುಮಾರ್‌ ಯಾದವ್‌ ಉತ್ತಮ ಆಟಕ್ಕೆ ಮುಂದಾದ್ರೂ ಕೂಡ 11 ರನ್‌ಗಳಿಸಿದ್ದಾಗ ಕೆಟ್ಟ ಹೊಡೆತಕ್ಕೆ ಯಾದವ್‌ ವಿಕೆಟ್‌ ಒಪ್ಪಿಸಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ಔಟಾಗುತ್ತಲೇ ಕ್ರೀಸ್‌ಗೆ ಇಳಿದ ರಿಷಬ್‌ ಪಂತ್‌ ಕೊಯ್ಲಿ ಜೊತೆಗೂಡಿ ಉತ್ತಮ ಜೊತೆಯಾಟವಾಡಿದ್ರು. ರಿಷಬ್‌ ಪಂತ್‌ 30 ಎಸೆತಗಳಲ್ಲಿ 39ರನ್‌ ಗಳಿಸಿದ್ರೆ, ವಿರಾಟ್‌ ಕೊಯ್ಲಿ 49 ಎಸೆತಗಳಲ್ಲಿ 57 ರನ್‌ ಬಾರಿಸಿದ್ದಾರೆ. ಅಲ್ಲದೇ ರವೀಂದ್ರ ಜಡೇಜಾ 12, ಹಾರ್ದಿಕ್‌ ಪಾಂಡ್ಯ 11 ರನ್‌ ಗಳಿಸಿದ್ದಾರೆ. ಅಂತಿಮವಾಗಿ ಭಾರತ ತಂಡ 20 ಓವರ್‌ಗಳಲ್ಲಿ 151 ರನ್‌ ಗಳಿಸಿದೆ. ಪಾಕಿಸ್ತಾನ ತಂಡದ ಪರ ಶಾಹೀನ್‌ ಅಫ್ರಿದಿ 31ರನ್‌ ಗೆ 3 ವಿಕೆಟ್‌ ಪಡೆದುಕೊಂಡ್ರೆ, ಹಸನ್‌ ಆಲಿ 44 ರನ್‌ ಗೆ 2 ವಿಕೆಟ್‌ ಪಡೆದಿದ್ದಾರೆ.

ಇದನ್ನೂ ಓದಿ : T20 ವಿಶ್ವಕಪ್‌ನಲ್ಲಿ ಭಾರತ ವಿರುದ್ದ ಒಂದೇ ಒಂದು ಪಂದ್ಯ ಗೆದ್ದಿಲ್ಲ ಪಾಕಿಸ್ತಾನ

ಇದನ್ನೂ ಓದಿ : ಐಪಿಎಲ್‌ ಹೊಸ ತಂಡ ಖರೀದಿಗೆ ಅದಾನಿ, ಮ್ಯಾಂಚೆಸ್ಟರ್‌, ಹಿಂದೂಸ್ತಾನ್‌ ಟೈಮ್ಸ್‌ ಸೇರಿ ಹಲವು ಕಂಪೆನಿಗಳು ಬಿಡ್‌

India vs Pakistan Match Kohli’s half-century, Pakistan’s 152-run target

Comments are closed.