ಸೋಮವಾರ, ಏಪ್ರಿಲ್ 28, 2025
HomeNationalNavjot Singh Sidhu : ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು

Navjot Singh Sidhu : ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲು

- Advertisement -

ನವದೆಹಲಿ : ಮಾಜಿ ಕ್ರಿಕೆಟಿಗ, ಪಂಜಾಬ್‌ ಕಾಂಗ್ರೆಸ್‌ ಪಕ್ಷದ ಮಾಜಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು (Navjot Singh Sidhu ) ಅವರು ಒಂದು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. 1988 ರಲ್ಲಿ ನಡೆದಿದ್ದ ರಸ್ತೆ ಅಪಘಾತದ ವೇಳೆಯಲ್ಲಿ ವೃದ್ದರೋರ್ವರ ಮೇಲೆ ಸಿಧು ದಾಂಧಲೆ ನಡೆಸಿದ್ದರು. ಸುಮಾರು ಮೂವತ್ತೈದು ವರ್ಷದ ಹಿಂದಿನ ಪ್ರಕರಣಕ್ಕೆ ಇದೀಗ ಶಿಕ್ಷೆ ಪ್ರಕಟವಾಗಿದೆ.

1988 ರಲ್ಲಿ ನಡೆದಿದ್ದ ಹಲ್ಲೆ, ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನವಜೋತ್ ಸಿಂಗ್ ಸಿಧುಗೆ ಸುಪ್ರೀಂ ಕೋರ್ಟ್ ಶಾಕ್‌ ಕೊಟ್ಟಿದೆ. ಕಾಂಗ್ರೆಸ್ ನಾಯಕನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಪಘಾತದ ವೇಳೆಯಲ್ಲಿ ಹಲ್ಲೆಗೆ ಒಳಗಾಗಿ ಸಾವನ್ನಪ್ಪಿದ್ದ ಮೃತರ ಕುಟುಂಬದವರು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದೆ.

ಸುಪ್ರೀಂ ಕೋರ್ಟ್‌ (Supreme court ) ನ್ಯಾಯಮೂರ್ತಿಗಳಾದ ಜೆ.ಚಲುಮೇಶ್ವರ ಮತ್ತು ಸಂಜಯ್‌ ಕಿಶನ್‌ ಕೌಲ್‌ ಅವರನ್ನು ಒಳಗೊಂಡಿರುವ ನ್ಯಾಯಪೀಠ ಸಿಧು ತಪ್ಪಿತಸ್ಥರೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅಲ್ಲದೇ 1,000 ರೂ. ನಂತರ ಸೆಪ್ಟೆಂಬರ್ 2018 ರಲ್ಲಿ, ಮೃತರ ಕುಟುಂಬ ಸದಸ್ಯರು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತ್ತು.

ಡಿಸೆಂಬರ್ 1988 ರಲ್ಲಿ ಅಪರಾಧದ ಸಮಯದಲ್ಲಿ ಸಿಧು ಅವರ ಉಪಸ್ಥಿತಿಯ ಬಗ್ಗೆ ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಸಿಧು ಅವರ ಸಹಾಯಕ ರೂಪಿಂದರ್ ಸಿಂಗ್ ಸಂಧು ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತ್ತು. ಸಿದ್ದು ಮತ್ತು ಸಂಧು ಅವರು ಡಿಸೆಂಬರ್ 27, 1988 ರಂದು ಪಟಿಯಾಲಾದ ಶೆರನ್‌ವಾಲಾ ಗೇಟ್ ಕ್ರಾಸಿಂಗ್ ಬಳಿ ರಸ್ತೆಯ ಮಧ್ಯದಲ್ಲಿ ನಿಲ್ಲಿಸಲಾದ ಜಿಪ್ಸಿಯಲ್ಲಿದ್ದರು, ಸಂತ್ರಸ್ತೆ ಮತ್ತು ಇತರ ಇಬ್ಬರು ಹಣ ಡ್ರಾ ಮಾಡಲು ಬ್ಯಾಂಕ್‌ಗೆ ತೆರಳುತ್ತಿದ್ದರು.ಅವರು ರಸ್ತೆ ದಾಟುವ ವೇಳೆಯಲ್ಲಿ, ಮಾರುತಿ ಕಾರನ್ನು ಓಡಿಸುತ್ತಿದ್ದ ಗುರ್ನಾಮ್ ಸಿಂಗ್, ರಸ್ತೆಯ ಮಧ್ಯದಲ್ಲಿ ಜಿಪ್ಸಿಯನ್ನು ಕಂಡು ಅದನ್ನು ತೆಗೆಯಲು ಹೇಳಿದ್ದಾರೆ. ಈ ವೇಳೆಯಲ್ಲಿ ಗಲಭೆ ನಡೆದಿತ್ತು.

ಇದನ್ನೂ ಓದಿ : ಕೋವಿಡ್‌ -19 ಪತ್ತೆಯಾಗಿ ಒಂದೇ ವಾರ : ಉತ್ತರ ಕೊರಿಯಾದಲ್ಲಿ 20 ಲಕ್ಷ ಶಂಕಿತ ಕೋವಿಡ್‌ ಪ್ರಕರಣ ಪತ್ತೆ

ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟ : 145 ವಿದ್ಯಾರ್ಥಿಗಳಿಗೆ 625 ಅಂಕ

One year jail for Navjot Singh Sidhu Supreme court Order

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular