Karnataka SSLC Result 2022 Live : ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟ : 145 ವಿದ್ಯಾರ್ಥಿಗಳಿಗೆ 625 ಅಂಕ

ಬೆಂಗಳೂರು : 2021-22ನೇ ಸಾಲಿನ ಎಸ್​ಎಸ್​ಎಲ್​ಸಿ ಫಲಿತಾಂಶ (Karnataka SSLC Result 2022 Live ) ಪ್ರಕಟವಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು 10ನೇ ತರಗತಿ ಫಲಿತಾಂಶವನ್ನು ಪ್ರಕಟಿಸಿದೆ. ಮಲ್ಲೇಶ್ವರಂನಲ್ಲಿರುವ ಪ್ರೌಢ ಶಿಕ್ಷಣ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ಫಲಿತಾಂಶ ಪ್ರಕಟಿಸಿದ್ದಾರೆ.

ಈ ಬಾರಿ 4,41,099 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು ಈ ಪೂಕಿ 3,58,602 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಈ ಬಾರಿಯೂ ಬಾಲಕಿಯರೇ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಇನ್ನು ಪರೀಕ್ಷೆಗೆ ಹಾಜರಾಗಿದ್ದ 4.12 ಲಕ್ಷ ವಿದ್ಯಾರ್ಥಿಗಳು ಪೈಕಿ 3.72 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರ ಉತ್ತೀರ್ಣರಾದ ಫಲಿತಾಂಶ 90.29 ಪ್ರತಿಶತವಾಗಿದ್ದರೆ 81.30 ಪ್ರತಿಶತ ಫಲಿತಾಂಶವನ್ನು ಬಾಲಕರು ದಾಖಲಿಸಿದ್ದಾರೆ. ಇದು ಕಳೆದ 10 ವರ್ಷಗಳಲ್ಲೇ ದಾಖಲೆಯ ಫಲಿತಾಂಶ ಎಂದು ಬಿ.ಸಿ ನಾಗೇಶ್​ ಹೇಳಿದ್ದಾರೆ.

ಇನ್ನು ಈ ಬಾರಿ ಪ್ರತಿಯೊಂದು ಜಿಲ್ಲೆಗಳಿಗೂ ಗ್ರೇಡ್​ ವ್ಯವಸ್ಥೆ ಮಾಡಲಾಗಿದ್ದು ಯಾದಗಿರಿ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳು ಬಿ ಗ್ರೇಡ್​ ಸಾಧಿಸಿದೆ ಎಂಬುದನ್ನು ಹೊರತುಪಡಿಸಿದರೆ ರಾಜ್ಯದ ಮಿಕ್ಕೆಲ್ಲ ಜಿಲ್ಲೆಗಳು ಎ ಗ್ರೇಡ್​ ಸಾಧಿಸಿವೆ . ಈ ಬಾರಿ 145 ಮಂದಿ ವಿದ್ಯಾರ್ಥಿಗಳು 645ಕ್ಕೆ 645 ಅಂಕಗಳನ್ನು ಸಂಪಾದಿಸಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಜೂನ್​ 27ರಿಂದ ಮರು ಪರೀಕ್ಷೆಗಳು ನಡೆಯಲಿದೆ. ವಿಜಯಪುರದ ಅಮಿತ್‌ ಮಾದರ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ರೆ, ತುಮಕೂರಿನ ಭೂಮಿಕಾ ಬಿ.ಆರ್.‌ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

Karnataka SSLC Result 2022 Live

Karnataka SSLC Results 2022 LIVE ಫಲಿತಾಂಶವನ್ನು ಪರಿಶೀಲಿಸಲು ಹಂತ ಹಂತದ ವಿವರಗಳು :

ಹಂತ 1 – ಕರ್ನಾಟಕ ಬೋರ್ಡ್ ಫಲಿತಾಂಶ ವೆಬ್‌ಸೈಟ್‌ಗೆ ಭೇಟಿ ನೀಡಿ : karresults.nic.in 2022 SSLC ಫಲಿತಾಂಶ.

ಹಂತ 2 – ಇದು 2022 ರ SSLC ವೆಬ್‌ಸೈಟ್‌ನಲ್ಲಿ Karresults nic ನ ಮುಖಪುಟವನ್ನು ತೆರೆಯುತ್ತದೆ.

ಹಂತ 3 – 10 ನೇ ಫಲಿತಾಂಶ ಕರ್ನಾಟಕ 2022 ವೆಬ್‌ಸೈಟ್‌ನಲ್ಲಿ, ಕರ್ನಾಟಕ SSLC ಎಂದು ಹೇಳುವ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 4 – ಇದು KSEEB SSLC ಫಲಿತಾಂಶ 2022 ಲಾಗಿನ್ ವಿಂಡೋಗೆ ಕಾರಣವಾಗುತ್ತದೆ.

ಹಂತ 5 – kseeb.kar.nic.in 2022 ಫಲಿತಾಂಶ ವಿಂಡೋದಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

ಹಂತ 6 – SSLC ಫಲಿತಾಂಶ 2022 ಕರ್ನಾಟಕವು ಪರದೆಯ ಮೇಲೆ ಕಾಣಿಸುತ್ತದೆ.

ಹಂತ 7 – SSLC ಫಲಿತಾಂಶ ಪರಿಶೀಲನೆಯ ನಂತರ ಪ್ರಿಂಟ್‌ಔಟ್ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ ಮತ್ತು ಭವಿಷ್ಯದ ಉಲ್ಲೇಖಗಳಿಗಾಗಿ ಅದನ್ನು ಸುರಕ್ಷಿತವಾಗಿರಿಸಿಕೊಳ್ಳಿ.

ಇದನ್ನು ಓದಿ : Andrew Symonds Dies : ಆಸ್ಟ್ರೇಲಿಯಾದ ಕ್ರಿಕೆಟ್‌ ದಿಗ್ಗQಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ

karnataka sslc result 2022 Declare

Comments are closed.