ತಲೆನೋವಿಗೆ ಹೆಡ್ ಮಸಾಜ್ ಮಾಡೋ ನೆಪ : ಗೆಳೆಯನ ಪತ್ನಿಯನ್ನೇ ಅತ್ಯಾಚಾರಗೈದ ಅಧಿಕಾರಿ

ಮುಂಬೈ : ಗೆಳೆಯು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಮನೆಗೆ ಬಂದಿದ್ದ ವಾಯುಸೇನೆಯ ಅಧಿಕಾರಿಯೋರ್ವ ಮಹಿಳೆಯ ತಲೆನೋವಿಗೆ ಹೆಡ್ ಮಸಾಜ್ ಮಾಡುವ ನೆಪದಲ್ಲಿ ಅತ್ಯಾಚಾರವೆಸಗಿದ ಘಟನೆ ಮುಂಬೈನ ಕೊಲಾಬಾ ಪ್ರದೇಶದಲ್ಲಿ ನಡೆದಿದೆ.

ಭಾರತೀಯ ನೌಕಾಪಡೆಯ ಸಿಬ್ಬಂದಿಯೋರ್ವ ಪತ್ನಿಯ ಜೊತೆಗೆ ಕಳೆದೊಂದು ವರ್ಷದಿಂದಲೂ ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ ವೊಂದರಲ್ಲಿ ವಾಸವಾಗಿದ್ದರು. ಆದರೆ ಮಹಿಳೆಯ ಪತಿ ತರಬೇತಿಗಾಗಿ ಕೇರಳಕ್ಕೆ ತೆರಳಿದ್ದ ವೇಳೆಯಲ್ಲಿ ವಾಯು ಸೇನೆಯಲ್ಲಿ ಅಧಿಕಾರಿಯಾಗಿರುವ ಮಹಿಳೆಯ ಗಂಡನ ಸ್ನೇಹಿತ ಮನೆಗೆ ಬಂದಿದ್ದಾನೆ. ಈ ವೇಳೆಯಲ್ಲಿ ಮಹಿಳೆಗೆ ಕೆಲವು ಚಾಕೋಲೆಟ್ ಗಳನ್ನು ನೀಡಿದ್ದಾನೆ. ತಾನು ವಿದೇಶದಿಂದ ತಂದಿರುವುದಾಗಿಯೂ ತಿಳಿಸಿದ್ದಾನೆ. ಅಲ್ಲದೇ ಮಹಿಳೆಗೆ ತಾನು ತಂದಿದ್ದ ಪಾನೀಯವನ್ನು ಕುಡಿಸಿದ್ದಾನೆ. ಇದಾದ ನಂತರ ಮಹಿಳೆಗೆ ತಲೆನೋವು ಕಾಣಿಸಿಕೊಂಡಿತ್ತು. ಟ್ಯಾಬ್ಲೆಟ್ ತೆಗೆದುಕೊಂಡರೂ ತಲೆನೋವು ನಿಯಂತ್ರಣಕ್ಕೆ ಬಂದಿರಲಿಲ್ಲ.

ಮೊದಲೇ ಪ್ಲ್ಯಾನ್ ಮಾಡಿಕೊಂಡಿದ್ದ ಅಧಿಕಾರಿ ಮಹಿಳೆಯ ತಲೆ ಮಸಾಜ್ ಮಾಡುತ್ತೇನೆ ಇದರಿಂದ ತಲೆನೋವು ಪರಿಹಾರವಾಗುತ್ತೆ ಅಂತಾ ಹೇಳಿದ್ದಾನೆ. ನಂತರದಲ್ಲಿ ಮಸಾಜ್ ಮಾಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವಿಷಯವನ್ನು ಯಾರಿಗಾದ್ರೂ ತಿಳಿಸಿದ್ರೆ ನಿನ್ನನ್ನು ಹಾಗೂ ಗಂಡನ್ನು ಕೊಲೆ ಮಾಡುವುದಾಗಿಯೂ ಬೆದರಿಕೆಯೊಡ್ಡಿದ್ದಾನೆ. ಹೆದರಿದ ಮಹಿಳೆ ತಡವಾಗಿ ಪತಿಗೆ ವಿಷಯ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಪತಿ ನೌಕಾ ಪೋಲೀಸರಿಗೆ ಹಾಗೂ ಕಫ್ ಪೆರೇಡ್ ಪೊಲೀಸ್ ಠಾಣೆಯನ್ನು ದೂರು ದಾಖಲಿಸಿದ್ದಾರೆ.

Comments are closed.