ಯುಎಇ : ಇದೇ ಮೊದಲ ಬಾರಿ ನೀಟ್ ಯುಜಿ ಪರೀಕ್ಷೆ ಯುಎಇ ಹಾಗೂ ಕುವೈತ್‌ನಲ್ಲಿ ನಡೆಯಲಿದೆ. ಈ ಕುರಿತು ಕೇಂದ್ರ ಶಿಕ್ಷಣ ಸಚಿವಾಲಯ ಅಧಿಕೃವಾಗಿ ಘೋಷಣೆ ಮಾಡಿದ್ದು, ಶೀಘ್ರದಲ್ಲಿಯೇ ಮಾರ್ಗಸೂಚಿ ಪ್ರಕಟವಾಗಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಭಾರತದಿಂದ ಬರುವ ವಿಮಾನಗಳನ್ನು ಯುಎಇ ನಿಷೇಧ ಹೇರಿದೆ. ಅಲ್ಲದೇ ಸೋಂಕು ಉಲ್ಬಣವಾದ್ರೆ ನೀಟ್ ಪರೀಕ್ಷೆಗೆ ಹಾಜರಾಗುವ ವಿದೇಶಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಕೇಂದ್ರ ಶಿಕ್ಷಣ ಸಚಿವಾಲಯ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಯುಎಇ ಹಾಗೂ ಕುವೈತ್‌ನಲ್ಲಿ ಏಕಕಾಲದಲ್ಲಿ ನೀಟ್ ಯುಜಿ 2021 ಪರೀಕ್ಷೆ ನಡೆಯಲಿದೆ.

ವೈದ್ಯಕೀಯ ಪ್ರವೇಶ ನೀಟ್ 2021 ಅನ್ನು ಸೆಪ್ಟೆಂಬರ್ 12 ರಂದು ನಡೆಸಲಾಗುತ್ತಿದೆ. ಈ ಮೊದಲು ಪರೀಕ್ಷೆಯನ್ನು ಏಪ್ರಿಲ್ 1 ರಂದು ನಡೆಸಲು ತೀರ್ಮಾನಿಸಲಾಗಿತ್ತು. ಅಲ್ಲದೇ ನೀಟ್ 2021 ಪ್ರವೇಶ ಪರೀಕ್ಷೆಯನ್ನು ಅನೇಕ ಭಾಷೆಗಳಲ್ಲಿ ನಡೆಸಲಾಗುತ್ತಿದ್ದು, ಈ ಕುರಿತು ಮಾಹಿತಿ ಬುಲೆಟಿನ್ ಅನ್ನು ಶೀಘ್ರದಲ್ಲೇ ಎನ್‌ಟಿಎ ಬಿಡುಗಡೆ ಮಾಡಲಿದೆ.
ಇದನ್ನೂ ಓದಿ : BIG NEWS : ಶಾಲಾರಂಭದ ಹೊತ್ತಲೇ ಶಾಕ್ : 4 ತಿಂಗಳಲ್ಲಿ 1.88 ಲಕ್ಷ ಮಕ್ಕಳಿಗೆ ಕೊರೊನಾ ಸೋಂಕು ..!!

ವಿದ್ಯಾರ್ಥಿಗಳು ಸಂಬಂಧಿತ ಮಾಹಿತಿಯನ್ನು ನೀಟ್ 2021 ಅರ್ಹತಾ ಮಾನದಂಡಗಳು, ಪ್ರಮುಖ ದಿನಾಂಕಗಳು, ಫಲಿತಾಂಶ ಮತ್ತು ಸಮಾಲೋಚನೆ ವೇಳಾಪಟ್ಟಿ, ಮೀಸಲಾತಿ ಮಾನದಂಡಗಳು, ಅರ್ಜಿ ಪ್ರಕ್ರಿಯೆ ಇತ್ಯಾದಿಗಳನ್ನು ಬುಲೆಟಿನ್ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.