Mangli: ಮೈಸಮ್ಮ ದೇವಿ ಭಕ್ತರ ಆಕ್ರೋಶಕ್ಕೆ ಗುರಿಯಾದ ಗಾಯಕಿ…! ಮಂಗ್ಲಿ ವಿರುದ್ಧ ಪೊಲೀಸರ ಮೊರೆ ಹೋದ ಕಾರ್ಪೋರೇಟರ್….!

ಕಣ್ಣೇ ಅದಿರಿಂದಿ ಎನ್ನುತ್ತ ದೇಶದಾದ್ಯಂತ ಮನೆಮಾತಾಗಿದ್ದ ತೆಲುಗು ಗಾಯಕಿ ಮಂಗ್ಲಿಗೆ ಸಂಕಷ್ಟ ಎದುರಾಗಿದ್ದು, ಹಿಂದೂ ದೇವರ ಅವಹೇಳನದ ಆರೋಪದಡಿ ಬಿಜೆಪಿ ಕಾರ್ಪೋರೇಟರ್ ಮಂಗ್ಲಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತೆಲುಗಿನ ಪ್ರಸಿದ್ಧ ಗಾಯಲಿ ತಮ್ಮದೇ ಆದ ಯೂ ಟ್ಯೂಬ್ ಚಾನೆಲ್ ಹೊಂದಿದ್ದು, ತೆಲುಗಿನ ಸಾಂಪ್ರದಾಯಿಕ ಹಬ್ಬಹರಿದಿನಗಳಿಗೆ ಸಂಬಂಧಿಸಿದ ಹಾಡುಗಳನ್ನು ಚಿತ್ರೀಕರಿಸಿ ಹಂಚಿಕೊಳ್ಳುತ್ತಾರೆ.

ಅದೇ ರೀತಿ ತೆಲುಗಿನ ಬೋನಾಲ  ಹಬ್ಬಕ್ಕೆ ಸಂಬಂಧಿಸಿದ ಬೋನಂಪಾಟ ಹಾಡೊಂದನ್ನು ಸ್ವತಃ ಡ್ಯಾನ್ಸ್ ಮಾಡುತ್ತ ಹಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದರು. ಈ ಹಾಡು  ಮೈಸಮ್ಮ ದೇವಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಹಾಡಿನಲ್ಲಿ ಮಂಗ್ಲಿ ದೇವಿಯ ಶಕ್ತಿ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಮೈಸಮ್ಮ ದೇವಿ ಭಕ್ತರು ಮಂಗ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ರಚ್ಚಕೊಂಡದ  ಮಲ್ಕಜ್ ಗಿರಿ ಬಿಜೆಪಿ ಕಾರ್ಪೋರೇಟರ್ ರಚ್ಚಕೊಂಡ ಪೊಲೀಸ್ ಆಯುಕ್ತರಿಗೆ ಮಂಗ್ಲಿ ವಿರುದ್ಧ ಶಿಸ್ತು ಕ್ರಮಜರುಗಿಸಬೇಕೆಂದು ಕೋರಿ ದೂರು ನೀಡಿದ್ದಾರೆ.

ಮರದ ಕೆಳಗೆ ಸಂಬಂಧಿಯ ಹಾಗೇ ಕುಳಿತಿದ್ದೀಯಾ,  ನಾವು ಹರಕೆ ಹೊತ್ತು ಪೂಜಿಸಿದರೂ ನೀನು ವರ ಕೊಡುತ್ತಿಲ್ಲ,ಬೊಂಬೆಯಂತೆ ಅಲುಗದೇ ಇದ್ದೀಯಾ ಎಂಬ ಹಾಡಿನ ಸಾಲುಗಳು ವಿವಾದ ಸೃಷ್ಟಿಸಿವೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಬಿಸಿ ಬಿಸಿ ಚರ್ಚೆ ನಡೆದಿದ್ದು, ಮಂಗ್ಲಿ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಮಸ್ವಾಮಿ ಎಂಬುವರರು ಜಾನಪದ ಶೈಲಿಯ ಈ ಹಾಡನ್ನು ಬರೆದಿದ್ದು, ಮಂಗ್ಲಿ ಹಾಡು ಹಾಗೂ ನೃತ್ಯ ಸಂಯೋಜಿಸಿ ಹಾಡಿದ್ದಾರೆ. ರಾಕೇಶ್ ಡಿ ವೆಂಕಟಾಪುರ ಸಂಗೀತ ನೀಡಿದ್ದು, ಢೀ ಖ್ಯಾತಿಯ ಪಂಡು ನೃತ್ಯ ಸಂಯೋಜನೆ ಮಾಡಿದ್ದಾರೆ.

Comments are closed.