ಸೋಮವಾರ, ಏಪ್ರಿಲ್ 28, 2025
HomeNationalNepal Plane crash case: ನೇಪಾಳ ವಿಮಾನ ದುರಂತ ಪ್ರಕರಣ: 72 ಮಂದಿ ಪ್ರಯಾಣಿಕರು ಸಜೀವ...

Nepal Plane crash case: ನೇಪಾಳ ವಿಮಾನ ದುರಂತ ಪ್ರಕರಣ: 72 ಮಂದಿ ಪ್ರಯಾಣಿಕರು ಸಜೀವ ದಹನ

- Advertisement -

ನೇಪಾಳ: (Nepal Plane crash case) ಭಾನುವಾರ ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 68 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ವಿಮಾನವು ರನ್‌ ವೇಯಲ್ಲಿ ಪತನಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ವಿಮಾನದಲ್ಲಿದ್ದ 68 ಮಂದಿ ಪ್ರಯಾಣಿಕರು ಹಾಗೂ 4 ಮಂದಿ ಸಿಬ್ಬಂದಿಗಳು ಸೇರಿದಂತೆ 72 ಮಂದಿ ವಿಮಾನ ದುರಂತದಲ್ಲಿ ಸಜೀವ ದಹನವಾಗಿದ್ದಾರೆ.

ನೇಪಾಳದ ಹಳೆಯ ವಿಮಾನ ನಿಲ್ದಾಣ ಮತ್ತು ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಯೇತಿ ಏರ್‌ ಲೈನ್ಸ್‌ ವಿಮಾನ ಪತನಗೊಂಡಿದೆ. ಪತನಗೊಂಡ ವಿಮಾನದಲ್ಲಿ 72 ಮಂದಿ ಪ್ರಯಾಣಿಕರಿದ್ದರು, ಹಾಗೂ ನಾಲ್ವರು ಸಿಬ್ಬಂದಿಗಳಿದ್ದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದೀಗ ಬಂದ ಮಾಹಿತಿಯ ಪ್ರಕಾರ ವಿಮಾನದಲ್ಲಿದ್ದ 72 ಮಂದಿಯೂ ಸುಟ್ಟು ಕರಕಲಾಗಿದ್ದಾರೆ.

ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಭಾರತದ ಮಹಾರಾಷ್ಟ್ರ ಮೂಲದ ನಾಲ್ಕು ಮಂದಿ ಕೂಡ ಸಾವನ್ನಪ್ಪಿದ್ದು, ಅಶೋಕ್‌ ಕುಮಾರ್‌ ತ್ರಿಪಾಠಿ, ಅವರ ಪತ್ನಿ ವೈಭವಿ ಪಾಂಡೇಕರ್‌ ಹಾಗೂ ಇಬ್ಬರು ಮಕ್ಕಳಾದ ಧನುಷ್‌ ಹಾಗೂ ರಿತಿಕಾ ಕೂಡ ಸಾವನ್ನಪ್ಪಿದ್ದಾರೆ. ಇದೀಗ ವಿಮಾನ ಪೂರ್ತಿಯಾಗಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದು ಬೆಂಕಿ ನಂದಿಸಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದೆ.

ನೇಪಾಳದಲ್ಲಿ ನಡೆದ ವಿಮಾನ ದುರಂತಕ್ಕೆ ನೇಪಾಳದ ಪ್ರಧಾನಿ ಸಂತಾಪ ಸೂಚಿಸಿದ್ದು, ವಿಮಾನ ಪತನವಾದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಲ್ಯಾಂಡಿಂಗ್‌ ಗೂ ಮುನ್ನವೇ ವಿಮಾನ ಪತನಗೊಂಡಿದ್ದು, ವಿಮಾನ ನಿಲ್ದಾಣದಿಂದ ಸುಮಾರು 7 ಕಿ.ಮೀ. ದೂರದಲ್ಲಿ ಅಪಘಾತ ಸಂಭವಿಸಿದೆ. ವಿಮಾನದ ತಾಂತ್ರಿಕ ದೋಷದಿಂದಾಗಿ ವಿಮಾನ ಪತನಗೊಂಡಿದೆ ಎಂದು ತಿಳಿದುಬಂದಿದೆ. ಅಲ್ಲದೇ ಅಪಘಾತದಲ್ಲಿ ನಾಲ್ಕು ಹಸುಳೆಗಳು, ಐದು ಮಂದಿ ಮಕ್ಕಳು, ಐವರು ಭಾರತೀಯರು ಹಾಗೂ ಹತ್ತು ಮಂದಿ ವಿದೇಶಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇನ್ನುಳಿದವರು ನೇಪಾಳದ ಪ್ರಯಾಣಿಕರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : Nepal plane crash: 72 ಪ್ರಯಾಣಿಕರಿದ್ದ ವಿಮಾನ ಪತನ: 13 ಮಂದಿ ಸಾವು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

ಇದನ್ನೂ ಓದಿ : Old man disoriented on flight: ವಿಮಾನದಲ್ಲಿ ಅಸ್ತವ್ಯಸ್ತಗೊಂಡ 60 ವರ್ಷದ ವ್ಯಕ್ತಿ: ಇಂದೋರ್‌ ನಲ್ಲಿ ತುರ್ತು ಭೂಸ್ಪರ್ಶ

Nepal Plane crash case: Nepal plane crash case: 72 passengers burnt alive

RELATED ARTICLES

Most Popular