Nepal plane crash: 72 ಪ್ರಯಾಣಿಕರಿದ್ದ ವಿಮಾನ ಪತನ: 13 ಮಂದಿ ಸಾವು, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

ನೇಪಾಳ: (Nepal plane crash) ಭಾನುವಾರ ನೇಪಾಳದ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ವಿಮಾನವು ರನ್‌ ವೇಯಲ್ಲಿ ಪತನಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯಕ್ಕೆ ಪೋಖರಾ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ.

ನೇಪಾಳದ ಹಳೆಯ ವಿಮಾನ ನಿಲ್ದಾಣ ಮತ್ತು ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಯೇತಿ ಏರ್‌ ಲೈನ್ಸ್‌ ವಿಮಾನ ಪತನ(Nepal plane crash)ಗೊಂಡಿದೆ. ಪತನಗೊಂಡ ವಿಮಾನದಲ್ಲಿ 68 ಮಂದಿ ಪ್ರಯಾಣಿಕರಿದ್ದರು, ಹಾಗೂ ನಾಲ್ವರು ಸಿಬ್ಬಂದಿಗಳಿದ್ದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

“ಹಳೆಯ ವಿಮಾನ ನಿಲ್ದಾಣ ಮತ್ತು ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಅಪಘಾತಕ್ಕೀಡಾದ ಯೇತಿ ಏರ್‌ಲೈನ್ಸ್ ವಿಮಾನದಲ್ಲಿ ಒಟ್ಟು 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು” ಎಂದು ಯೇತಿ ಏರ್‌ಲೈನ್ಸ್ ವಕ್ತಾರ ಸುದರ್ಶನ್ ಬರ್ತೌಲಾ ಅವರು ಕಠ್ಮಂಡು ಪೋಸ್ಟ್‌ಗೆ ತಿಳಿಸಿದ್ದಾರೆ.

ವಿಮಾನ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಪ್ರಯಾಣಿಕರನ್ನು ಹೊರತರುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸ್ಥಳದಲ್ಲಿ ಹದಿಮೂರು ಮೃತದೇಹಗಳು ಕಂಡುಬಂದಿದ್ದು, ಇನ್ನೂ ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಸದ್ಯ ವಿಮಾನದಲ್ಲಿದ್ದ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಸಾವು ನೋವುಗಳ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ರಕ್ಷಣಾ ಕಾರ್ಯಾಚರಣೆ ಪೂರ್ತಿಯಾದ ನಂತರವೇ ನಿಖರವಾದ ಮಾಹಿತಿಗಳು ತಿಳಿದುಬರಲಿದೆ.

ಇದನ್ನೂ ಓದಿ : Old man disoriented on flight: ವಿಮಾನದಲ್ಲಿ ಅಸ್ತವ್ಯಸ್ತಗೊಂಡ 60 ವರ್ಷದ ವ್ಯಕ್ತಿ: ಇಂದೋರ್‌ ನಲ್ಲಿ ತುರ್ತು ಭೂಸ್ಪರ್ಶ

ಇದನ್ನೂ ಓದಿ : Jharkhand crime case: ಅಕ್ರಮ ಸಂಬಂಧ: ಪತ್ನಿಯ ಪ್ರಿಯಕರನ ತಲೆ ಕಡಿದ ಪತಿ

ಇದನ್ನೂ ಓದಿ : ವೈರಲ್‌ ಆಯ್ತು ಬಿಹಾರ ಜೈಲಿನಲ್ಲಿದ್ದ ಕುಡುಕನ ಭೋಜ್‌ಪುರಿ ಹಾಡು: ಸಂಗೀತ ಕ್ಷೇತ್ರದಿಂದ ಬಾರಿ ರೆಸ್ಪಾನ್ಸ್‌

ಅಪಘಾತದ ಸ್ಥಳದಲ್ಲಿ ಕನಿಷ್ಟ ಹದಿಮೂರು ಮೃತದೇಹಗಳು ಕಂಡುಬಂದಿದ್ದು, ಹಲವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಅಲ್ಲದೇ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದ್ದು, ಅಪಘಾತಕ್ಕೆ ನಿಖರ ಕಾರಣಗಳು ಏನು ಎಂಬುದು ತಿಳಿದುಬಂದಿಲ್ಲ. ಸದ್ಯ ಅಪಘಾತಕ್ಕೆ ಸಂಬಂಧಿಸಿದಂತೆ ಯಾವುದೇ ನಿಖರ ಮಾಹಿತಿಗಳು ತಿಳಿದುಬಂದಿಲ್ಲ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಪ್ರಯಾಣಿಕರನ್ನು ರಕ್ಷಿಸುವ ಕಾರ್ಯ ಮುಂದುವರೆದಿದೆ.

ಘಟನೆಯ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

Plane crash with 72 passengers: Rescue operation continues

Comments are closed.