New Parliament :ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಖನೆಯ ಭಾಗವಾಗಿ ನಿರ್ಮಾಣಗೊಳ್ಳುತ್ತಿರುವ ಹೊಸ ಸಂಸ್ತಿನ ಗೋಡೆಗಳನ್ನು ದ್ರೌಪದಿ , ಸೀತಾ, ರಜಿಯಾ ಸುಲ್ತಾನಾ, ಅಕ್ಕ ಮಹಾದೇವಿ , ಅಹಲ್ಯಾ ಹೋಳ್ಕರ್ ಸೇರಿದಂತೆ ವಿವಿಧ ಭಾರತೀಯ ಪುರಾಣ ಹಾಗೂ ಇತಿಹಾಸಗಳಲ್ಲಿ ಕಾಣಸಿಗುವ ಪ್ರಮುಖ ಮಹಿಳೆಯರ ವರ್ಣಚಿತ್ರಗಳಿಂದ ಅಲಂಕರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಭಾಗವಾಗಿ ವೈದಿಕ ಕಾಲದಿಂದ 1947ರವರೆಗಿನ 75 ಮಹಿಳೆಯರ ಚಿತ್ರಗಳನ್ನು ಸಂಸತ್ತಿನ ಗೋಡೆಗಳ ಮೇಲೆ ಪ್ರದರ್ಶಿಸಲು ಸರ್ಕಾರವು ಯೋಜನೆ ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಂಸತ್ತಿನ ಗೋಡೆಗಳಲ್ಲಿ ಸಾಧಕ ಮಹಿಳೆಯರ ವರ್ಣಚಿತ್ರಗಳು ಹಾಗೂ ಭಾರತೀಯ ಇತಿಹಾಸದಲ್ಲಿ ಅವರು ನಿರ್ವಹಿಸಿದ ಪ್ರಮುಖ ಪಾತ್ರಗಳ ವಿವರಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.
ಗೋಡೆಯ ಮೇಲೆ ಎಷ್ಟು ಮಹಿಳೆಯ ಚಿತ್ರವನ್ನು ಬಿಡಿಸಬೇಕು ಹಾಗೂ ಯಾವ ರೀತಿಯಲ್ಲಿ ಚಿತ್ರಕಲೆ ಪ್ರದರ್ಶಿಸಬೇಕು ಎಂಬುದರ ಕುರಿತು ಇನ್ನಷ್ಟೇ ನಿರ್ಧಾರ ಹೊರಬೀಳಬೇಕಿದೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.ಆದರೆ ಈ ಇಬ್ಬರೂ ಅಧಿಕಾರಿಗಳು ತಮ್ಮ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ನಲ್ಲಿ ಈ ವರ್ಷದ ಆರಂಭದಲ್ಲಿ 75 ಪ್ರಖ್ಯಾತ ಮಹಿಳೆಯರನ್ನು ಸ್ಮರಿಸುವ ಪ್ರದರ್ಶನ ಆಯೋಜಿಸಲಾಗಿತ್ತು.
ಸೆಂಟ್ರಲ್ ವಿಸ್ತಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ, ಸರ್ಕಾರವು ಹೊಸ ಸಂಸತ್ತಿನ ಕಟ್ಟಡ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಹೊಸ ನಿವಾಸಗಳು ಮತ್ತು ಸುಮಾರು 51 ಸಚಿವಾಲಯಗಳನ್ನು ಹೊಂದಿರುವ ಕೇಂದ್ರ ಸಚಿವಾಲಯದ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಇದು ರಾಜಪಥವನ್ನು ಪುನಃ ಅಭಿವೃದ್ಧಿಪಡಿಸುತ್ತಿದೆ.
ಇದನ್ನು ಓದಿ : Danger Panu Puri : ಜಾತ್ರೆಯಲ್ಲಿ ಪಾನಿಪೂರಿ ತಿಂದು 97 ಮಕ್ಕಳು ಅಸ್ವಸ್ಥ
ಇದನ್ನೂ ಓದಿ : bjp leader balachandran killed : ಭದ್ರತಾ ಸಿಬ್ಬಂದಿ ಟೀ ವಿರಾಮಕ್ಕೆ ತೆರಳಿದ್ದ ವೇಳೆ ಬಿಜೆಪಿ ನಾಯಕನ ಬರ್ಬರ ಹತ್ಯೆ
New Parliament set to honour women through the ages