rakesh tikait : ರೈತ ಸಭೆಯಲ್ಲಿ ಕಿಡಿಗೇಡಿಗಳ ದಾಂಧಲೆ : ರಾಕೇಶ್​ ಟಿಕಾಯತ್​ ಮುಖಕ್ಕೆ ಮಸಿ ಬಳಿದ ದುಷ್ಕರ್ಮಿಗಳು

ಬೆಂಗಳೂರು : rakesh tikait : ರೈತ ಮುಖಂಡ ರಾಕೇಶ್​ ಟಿಕಾಯತ್​​ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆಯು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದಿದೆ. ರಾಜ್ಯದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಮೇಲೆ ಬಂದಿರುವ ಕಿಕ್​ಬ್ಯಾಂಕ್​ ಆರೋಪದಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಬಗ್ಗೆ ಸ್ಪಷ್ಟನೆ ನೀಡುವ ಸಲುವಾ್ ರಾಕೇಶ್​ ಟಿಕಾಯತ್​ ಸುದ್ದಿಗೋಷ್ಟಿ ಕರೆದಿದ್ದರು. ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡುತ್ತಿದ್ದ ಸಂದರ್ಭದಲ್ಲಿ ಪತ್ರಕರ್ತರು ಕುಳಿತಿದ್ದ ಆಸನದ ಹಿಂಬಧಿಯಿಂದ ಎದ್ದು ಬಂದ ದುಷ್ಕರ್ಮಿಯು ಚಾನೆಲ್​ನ ಮೈಕ್​ನಿಂದ ರಾಕೇಶ್​ ಟಿಕಾಯಿತ್​ ಮೇಲೆ ಹಲ್ಲೆ ಮಾಡಿ ರಾಕೇಶ್​ ಹಾಗೂ ಯದುವೀರ್​ ಸಿಂಗ್​ ಮುಖಕ್ಕೆ ಮಸಿ ಬಳಿದಿದ್ದಾನೆ.


ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿರು ಭ್ರಷ್ಟಾಚಾರದ ಆರೋಪದ ಬಗ್ಗೆ ಚರ್ಚೆ ನಡೆಸಲು ರೈತ ಸಂಘದವರು ಕರೆದ ಸಭೆ ಇದಾಗಿತ್ತು. ಈ ಸಭೆಯಲ್ಲಿ ಮೋದಿ ಮೋದಿ ಎಂದು ಘೋಷಣೆ ಕೂಗಿದ ವ್ಯಕ್ತಿಯೊಬ್ಬ ರಾಕೇಶ್​ ಟಿಕಾಯತ್​ ಮುಖಕ್ಕೆ ಮಸಿ ಬಳಿದು ದಾಂಧಲೆ ಸೃಷ್ಟಿಸಿದ್ದಾನೆ. ರಾಕೇಶ್​ ಟಿಕಾಯತ್​ ಮೇಲೆ ಹಲ್ಲೆ ನಡೆಸುತ್ತಿದ್ದಂತೆಯೇ ಸಿಡಿದೆದ್ದ ರೈತ ಮುಖಂಡರು ದುಷ್ಕರ್ಮಿಯನ್ನು ಹಿಡಿದು ಥಳಿಸಿದ್ದಾರೆ.


ತಮ್ಮ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬರುತ್ತಿದ್ದಂತೆಯೇ ರಾಜ್ಯ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​​ ಟಿಕಾಯತ್​ ಮೇಲೆ ಆರೋಪ ಹೊರಿಸಿದ್ದರು. ಹೀಗಾಗಿ ಸ್ಪಷ್ಟನೆ ನೀಡುವ ಸಲುವಾಗಿ ಗಾಂಧಿ ಭವನದಲ್ಲಿ ರಾಕೇಶ್​ ಟಿಕಾಯತ್​ ರೈತ ನಾಯಕರು ಹಾಗೂ ಮಾಧ್ಯಮದವರನ್ನು ಕರೆಸಿದ್ದರು. ಆದರೆ ರಾಕೇಶ್​ ಟಿಕಾಯತ್​ ಮೇಲೆ ಹಲ್ಲೆ ಆರಂಭವಾಗುತ್ತಿದ್ದಂತೆಯೇ ರೈತರ ಸಭೆ ರಣಾರಂಗವಾಗಿ ಮಾರ್ಪಟ್ಟಿದೆ. ರಾಕೇಶ್​ ಟಿಕಾಯತ್​ ಬಳಗ ಹಾಗೂ ಕೋಡಿಹಳ್ಳಿ ಚಂದ್ರಶೇಖರ್​ ಬಣದ ನಡುವೆ ಮಾರಾಮಾರಿ ಏರ್ಪಟ್ಟಿದೆ. ಈ ಗಲಾಟೆಯ ಸಂಪೂರ್ಣ ದೃಶ್ಯಾವಳಿ ಮಾಧ್ಯಮ ಹಾಗೂ ಮೊಬೈಲ್​ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ರಾಕೇಶ್​ ಟಿಕಾಯತ್​, ಈ ಕೃತ್ಯ ಎಸಗಿದವರು ಯಾರೆಂಬುದು ನನಗೆ ತಿಳಿದಿಲ್ಲ. ಆದರೆ ಇದು ರಾಜ್ಯ ಸರ್ಕಾರದ ಬೆಂಬಲದಿಂದ ನಡೆದ ಕೃತ್ಯ ಎಂದು ನನಗನಿಸುತ್ತಿದೆ. ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳಬೇಕಾದದ್ದು ಪೊಲೀಸರ ಜವಾಬ್ದಾರಿ. ನಮಗೆ ಯಾವುದೇ ರೀತಿಯ ಭದ್ರತೆಯನ್ನು ನೀಡಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ : bjp leader balachandran killed : ಭದ್ರತಾ ಸಿಬ್ಬಂದಿ ಟೀ ವಿರಾಮಕ್ಕೆ ತೆರಳಿದ್ದ ವೇಳೆ ಬಿಜೆಪಿ ನಾಯಕನ ಬರ್ಬರ ಹತ್ಯೆ

ಇದನ್ನೂ ಓದಿ : Danger Panu Puri : ಜಾತ್ರೆಯಲ್ಲಿ ಪಾನಿಪೂರಿ ತಿಂದು 97 ಮಕ್ಕಳು ಅಸ್ವಸ್ಥ

farmer leader rakesh tikait face inked ach

Comments are closed.