ರಾಸಲೀಲೆ, ಶಿಷ್ಯರಿಗೆ ಕಿರುಕುಳ ಸೇರಿದಂತೆ ನಾನಾ ಕಾರಣಕ್ಕೆ ಸುದ್ದಿಯಾಗುತ್ತಿದ್ದ ಬಿಡದಿಯ ನಿತ್ಯಾನಂದ ಸ್ವಾಮೀ ಇನ್ನಿಲ್ಲ ಎಂಬ ಸುದ್ದಿ ಸೋಷಿಯಲ್ ಮೀಡಿಯಾ ದಲ್ಲಿ ಸದ್ದು ಮಾಡುತ್ತಿದೆ. ಈ ಸುದ್ದಿ ಸ್ವತಃ ಸ್ವಾಮೀ ನಿತ್ಯಾನಂದರನ್ನು ತಲುಪಿದ್ದು, ಇಂಥ ಕಿಡಿಗೇಡಿಗಳಿಗೆ ತಿರುಗೇಟು ನೀಡಿರೋ ಸ್ವಾಮೀ ನಿತ್ಯಾನಂದ (Nithyananda Clarifies), ತಮ್ಮ ಆರೋಗ್ಯ ಹಾಗೂ ಕ್ಷೇಮದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆನೀಡಿದ್ದಾರೆ.
ಕೈಲಾಸದ ನಿತ್ಯಾನಂದ ಸ್ವಾಮಿಗೆ ಅನಾರೋಗ್ಯ? ಸುದ್ದಿ ಸತ್ಯವೋ..? ಸುಳ್ಳೋ? ಎಂಬ ಆತಂಕ ಭಕ್ತರನ್ನು ಕಾಡುತ್ತಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ನಿತ್ಯಾನಂದ ಸುದ್ದಿ ವೈರಲ್ ಆಗಿದೆ. ತಮ್ಮ ಅನಾರೋಗ್ಯದ ಬಗ್ಗೆ ಹಬ್ಬಿರುವ ಸುದ್ದಿಗೆ ಸ್ಪಷ್ಟನೆ ನೀಡಿರುವ ನಿತ್ಯಾನಂದ ಪರಮಶಿವಮ್, ಕೆಲವರು ನನ್ನ ಸಾವಿನ ಬಗ್ಗೆ ವದಂತಿ ಹರಡುತ್ತಿದ್ದಾರೆ.ನಾನು ಸಮಾಧಿ ಸ್ಥಿತಿಯಲ್ಲಿದ್ದೇನೆ ಎಂದಿದ್ದಾರೆ.
ಅಲ್ಲದೇ ನಾನು ಸದ್ಯ ಜನರ ಮುಂದೇ ಬರಲು ಸಾದ್ಯವಿಲ್ಲ. ಭಕ್ತರೊಂದಿಗೆ ಮಾತನಾಡಲು, ಸತ್ಸಂಗ ನೀಡಲು ಸ್ವಲ್ಪ ಸಮಯ ಬೇಕು ಎಂದು ಮಾಹಿತಿ ನೀಡಿದ್ದಾರೆ. ನನ್ನ ಬಗ್ಗೆ ಹರಡುತ್ತಿರುವ ಫೋಟೋಗಳು ಸುಳ್ಳು ಎಂದಿರುವ ಸ್ವಾಮಿ ನಿತ್ಯಾನಂದ, ನಾನು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದೇನೆ. ನನಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡಕ್ಕೆ ಧನ್ಯವಾದ.27 ವೈದ್ಯರು ನನ್ನ ಶಿಷ್ಯರಂತೆ ಉಪಚರಿಸುತ್ತಿದ್ದಾರೆ. ನನ್ನ ಹೃದಯ 18ರ ಯುವಕನಂತೆ ಕಾರ್ಯಾನಿರ್ವಹಿಸುತ್ತಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.
ಮಾತ್ರವಲ್ಲ ನನಗೆ ಅನಾರೋಗ್ಯದಿಂದ ಸಾಯವ ಸ್ಥಿತಿಯಲ್ಲಿಲ್ಲ. ನಾನು ಸಮಾಧಿಯಲ್ಲಿದ್ದೇನೆ ಶೀಘ್ರದಲ್ಲೇ ಭಕ್ತರನ್ನು ಭೇಟಿ ಮಾಡುತ್ತೇನೆ ಎಂದು ಕೈಲಾಸ ನಿತ್ಯಾನಂದ ಪರಮ ಶಿವMಂ ಟ್ವಿಟರ್ ನಲ್ಲಿ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ. ಸದ್ಯ ಸ್ವಾಮಿ ನಿತ್ಯಾನಂದ ಕರ್ನಾಟಕ ಹಾಗೂ ಭಾರತವನ್ನು ತೊರೆದಿದ್ದು ತನ್ನದೇ ಕೈಲಾಸ ನಿರ್ಮಿಸುವುದಾಗಿ ಘೋಷಿಸಿಕೊಂಡು ವಿದೇಶಕ್ಕೆ ತೆರಳಿದ್ದರು.
LATEST UPDATE FROM THE SPH FROM MAHAKAILASA:
— KAILASA'S SPH JGM HDH Nithyananda Paramashivam (@SriNithyananda) May 11, 2022
''I AM NOT DEAD… SHIVA, SHIVA, I AM BACK''
FULL DETAILS: https://t.co/PQBKY240Ta pic.twitter.com/qaTgqWQJgk
ಈಗ ತನ್ನದೆ ಕೈಲಾಸ ವನ್ನು ಐಲ್ಯಾಂಡ್ ಎಂದು ಸ್ಥಾಪಿಸಿಕೊಂಡಿರೋ ನಿತ್ಯಾನಂದ ಕೊರೋನಾ ಸಂದರ್ಭದಲ್ಲಿ ಅಲ್ಲಿಗೆ ಭಾರತೀಯರು ಸೇರಿದಂತೆ ಯಾವುದೇ ದೇಶದ ಪ್ರಜೆಗಳು ಭೇಟಿ ನೀಡದಂಗೆ ನಿರ್ಭಂದ ಹೇರಿದ್ದರು. ಕರ್ನಾಟಕದ ಬಿಡದಿಯಲ್ಲಿ ಧ್ಯಾನಾಶ್ರಮ ಹೊಂದಿರುವ ನಿತ್ಯಾನಂದ ಮೇಲೆ ಬಿಡದಿ ಪೊಲೀಸಗ ಠಾಣೆಯಲ್ಲಿ ಹಲವು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದು, ಅತ್ಯಾಚಾರದ ಪ್ರಕರಣ ಕೂಡ ದಾಖಲಾಗಿದೆ. ಒಂದಿಷ್ಟು ಕಾಲ ವಿಚಾರಣೆಗೆಲ್ಲ ಹಾಜರಾಗಿದ್ದ ನಿತ್ಯಾನಂದ ಬಳಿಕತಲೆಮರೆಸಿಕೊಂಡು ದೇಶದಿಂದಲೇ ಪಲಾಯನಗೈಯ್ದಿದ್ದಾರೆ.
Heart touching incident with My Guru Arunagiri Yogishwara, when He stopped responding to Me.https://t.co/J0yDkZLdKu
— KAILASA'S SPH JGM HDH Nithyananda Paramashivam (@SriNithyananda) May 6, 2022
ಇದನ್ನೂ ಓದಿ : ಫಲಿತಾಂಶಕ್ಕೂ ಮುನ್ನ ಸಿಹಿಸುದ್ದಿ ಕೊಟ್ಟ SSLC ಬೋರ್ಡ್: ಈ ವರ್ಷವೂ ಸಿಗಲಿದೆ ಶೇಕಡಾ 10 ಗ್ರೇಸ್ ಅಂಕ
ಇದನ್ನೂ ಓದಿ : ನಟಿ ರಮ್ಯ ಟ್ವೀಟ್ ಗೆ ಡಿ.ಕೆ.ಶಿವಕುಮಾರ್ ತಿರುಗೇಟು : ರಮ್ಯ ವಿರುದ್ಧ ಟ್ರೋಲ್ ಗೆ ಸೂಚಿಸಿದ ಮಹಾನಾಯಕ
Nithyananda Clarifies About Rumors Of His Death