Uttar Pradesh DGP Mukul Goel : ಡಿಜಿಪಿ ಹುದ್ದೆಯಿಂದ ಮುಕುಲ್​ ಗೋಯಲ್​ರನ್ನು ಕೆಳಗಿಳಿಸಿದ ಯೋಗಿ ಸರ್ಕಾರ

Uttar Pradesh DGP Mukul Goel : ಉತ್ತರ ಪ್ರದೇಶದಲ್ಲಿರುವ ಯೋಗಿ ಆದಿತ್ಯನಾಥ್​ ಸರ್ಕಾರವು ಖಡಕ್​ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ. ಪ್ರಮುಖ ನಗರಗಳ ಹೆಸರು ಬದಲಾಯಿಸುವುದರಿಂದ ಹಿಡಿದು ಬುಲ್ಡೋಜರ್​ ಕಾರ್ಯಾಚರಣೆಯವರೆಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಯಾವುದಕ್ಕೂ ಕ್ಯಾರೆ ಎನ್ನದೇ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಇದೇ ಕಾರ್ಯವೈಖರಿ ಮುಂದುವರಿಸಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್​, ಉತ್ತರ ಪ್ರದೇಶದ ಡಿಜಿಪಿ ಮುಕುಲ್​ ಗೋಯೆಲ್​ರನ್ನು ಹುದ್ದೆಯಿಂದ ಕೆಳಗಿಳಿಸಿದ್ದಾರೆ.


ಡಿಜಿಪಿ ಹುದ್ದೆಯಿಂದ ತೆಗೆದ ಬಳಿಕ ಮುಕುಲ್​ ಗೋಯೆಲ್​ರಿಗೆ ನಾಗರಿಕ ರಕ್ಷಣಾ ಇಲಾಖೆಯ ಮಹಾನಿರ್ದೇಶಕರಾಗಿ ಜವಾಬ್ದಾರಿಯನ್ನು ನೀಡಲಾಗಿದೆ. ಹುದ್ದೆಯಲ್ಲಿನ ಅಸಮರ್ಥತೆ ಹಾಗೂ ನಿರ್ಲಕ್ಷ್ಯಗಳಿಂದಾಗಿ ಡಿಜಿಪಿ ಹುದ್ದೆಯಿಂದ ಮುಕುಲ್​ ಗೋಯೆಲ್​ರನ್ನು ತೆಗೆಯಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತನ್ನ ಅಧಿಕೃತ ಹೇಳಿಕೆ ಮೂಲಕ ಮಾಹಿತಿ ನೀಡಿದೆ.


ಡಿಜಿಪಿ ಸ್ಥಾನದಿಂದ ಮುಕುಲ್​ ಗೋಯಲ್​ರನ್ನು ಕೆಳಗಿಳಿಸಿದ ಬಳಿಕ ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ( ಕಾನೂನು ಮತ್ತ ಸುವ್ಯವಸ್ಥೆ) ಪ್ರಶಾಂತ್​ ಕುಮಾರ್​ರಿಗೆ ಹೆಚ್ಚುವರಿ ಜವಾಬ್ದಾರಿಯನ್ನು ಉತ್ತರ ಪ್ರದೇಶ ಗೃಹ ಸಚಿವಾಲಯ ನೀಡಿದೆ. ಈ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್​ ಸೆಹಗಲ್​ ಮಾಹಿತಿ ನೀಡಿದರು.


1987ರ ಬ್ಯಾಚ್​ನವರಾಗಿರುವ ಐಪಿಎಸ್​ ಅಧಿಕಾರಿ ಮುಕುಲ್​ ಗೋಯೆಲ್​​ ಕಳೆದ ವರ್ಷ ಜೂನ್​ ತಿಂಗಳಲ್ಲಿ ಉತ್ತರ ಪ್ರದೇಶ ಪೊಲೀಸ್​ ಇಲಾಖೆಯ ಡಿಜಿಪಿಯಾಗಿ ನೇಮಕಕೊಂಡಿದ್ದರು.ಇದಕ್ಕೂ ಮುನ್ನ ಅವರು ಗಡಿ ಭದ್ರತಾ ಪಡೆಯ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಆದರೆ ಈ ಒಂದು ವರ್ಷಗಳಲ್ಲಿ ಡಿಜಿಪಿಯಾಗಿ ಅವರ ಕಾರ್ಯ ವೈಖರಿ ತೃಪ್ತಿದಾಯಕವಾಗಿರಲಿಲ್ಲ ಹಾಗೂ ಇಲಾಖೆಯ ಕಾರ್ಯಗಳಲ್ಲಿ ಅತಿಯಾದ ನಿರ್ಲಕ್ಷ್ಯ ತೋರಿದ್ದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಯೋಗಿ ಸರ್ಕಾರ ಈ ಖಡಕ್​ ನಿರ್ಧಾರವನ್ನು ಕೈಗೊಂಡಿದೆ.

ಇದನ್ನು ಓದಿ : SSLC Grace marks : ಫಲಿತಾಂಶಕ್ಕೂ ಮುನ್ನ ಸಿಹಿಸುದ್ದಿ ಕೊಟ್ಟ SSLC ಬೋರ್ಡ್: ಈ ವರ್ಷವೂ ಸಿಗಲಿದೆ ಶೇಕಡಾ 10 ಗ್ರೇಸ್ ಅಂಕ

ಇದನ್ನೂ ಓದಿ : Ravindra Jadeja : ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ರವೀಂದ್ರ ಜಡೇಜಾ ಐಪಿಎಲ್‌ನಿಂದ ಔಟ್‌

Uttar Pradesh DGP Mukul Goel removed by CM Yogi Adityanath for ‘inefficiency, neglecting work’

Comments are closed.