ಭಾನುವಾರ, ಜೂನ್ 15, 2025
HomeNationalRahul Gandhi : ರಾಹುಲ್ ಗಾಂಧಿಗೆ 50 ಲಕ್ಷ ಆಸ್ತಿ ಹಾಗೂ 10 ತೊಲ ಚಿನ್ನ...

Rahul Gandhi : ರಾಹುಲ್ ಗಾಂಧಿಗೆ 50 ಲಕ್ಷ ಆಸ್ತಿ ಹಾಗೂ 10 ತೊಲ ಚಿನ್ನ ಕೊಟ್ಟ ವೃದ್ಧೆ

- Advertisement -

ನವದೆಹಲಿ : ದೇಶದಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಬಯಸುವ ವರ್ಗವೊಂದಿದೆ. ಕಾಂಗ್ರೆಸ್ ನಾಯಕರು ಇದನ್ನೇ ಪ್ರತಿಪಾದಿಸುತ್ತಾರೆ. ಇನ್ನೊಂದು ವರ್ಗ ರಾಹುಲ್ ಗಾಂಧಿಯನ್ನು ಸದಾ ಹಾಸ್ಯದ ವಸ್ತುವಾಗಿಯೇ ಬಳಸಿಕೊಂಡು ಖುಷಿ ಪಡುತ್ತದೆ. ಆದರೆ ಇಲ್ಲೊಬ್ಬರು ವೃದ್ಧೆ ಮಾತ್ರ ರಾಹುಲ್ ಗಾಂಧಿಯಿಂದ (Rahul Gandhi) ಸಖತ್ ಇಂಪ್ರೆಸ್ ಆಗಿದ್ದು ತಮ್ಮ ಸಮಸ್ತ ಆಸ್ತಿಯನ್ನು ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ.

ಅಭಿಮಾನದ ಪರಾಕಾಷ್ಠೆ ಹೀಗೂ ಇರುತ್ತಾ ಎನ್ನುವಂತೆ ಅಜ್ಜಿಯೊಬ್ಬರು ತಮ್ಮ ಬಂಧುವು, ಬಾಂಧವರು ಯಾರೂ ಅಲ್ಲದ ಕಾಂಗ್ರೆಸ್ ನ ಯುವ ನಾಯಕ ರಾಹುಲ್ ಗಾಂಧಿಗೆ ತಮ್ಮ ಸಮಸ್ತ ಆಸ್ತಿಯನ್ನು ಬರೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಉತ್ತರಾಖಂಡನ ಡೆಹ್ರಾಡೂನ್ ನ 78 ವರ್ಷದ ವೃದ್ಧೆಯೊಬ್ಬರು ತಮ್ಮ 50 ಲಕ್ಷದ ಆಸ್ತಿ ಹಾಗೂ ಚಿನ್ನಾಭರಣ ವನ್ನು ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ.

ಪುಷ್ಪಾ ಮುಂಜಿಯಾಲ್ ಅವರೇ ಹೀಗೆ ತಮ್ಮ ಸಮಸ್ತ ಆಸ್ತಿಯನ್ನು ರಾಹುಲ್ ಗಾಂಧಿಯವರಿಗೆ ಬರೆದಿದ್ದಾರೆ. ಡೆಹ್ರಾಡೂನ್ ನ ನ್ಯಾಯಾಲಯದಲ್ಲಿ ತಮ್ಮ ಆಸ್ತಿಯ ವಿಲ್ ಸಲ್ಲಿಸಿದ್ದು ತಮ್ಮ ಸಮಸ್ತ ಆಸ್ತಿಯ ಮಾಲಿಕತ್ವದ ಹಕ್ಕು ನೀಡಿದ್ದಾರೆ. ಇದರಲ್ಲಿ ಅಜ್ಜಿಯ 50 ಲಕ್ಷದ ಸ್ಥಿರಾಸ್ತಿ, 10 ತೊಲ ಚಿನ್ನಾಭರಣ ಹಾಗೂ ಸಮಸ್ತ ಆಸ್ತಿಯೂ ಸೇರಿದೆ. ರಾಹುಲ್ ಗಾಂಧಿಯವರ ಯೋಚನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿದೆ.

ಅಲ್ಲದೇ ಅವರ ಚಿಂತನೆಗಳು ದೇಶಕ್ಕೆ ಅಗತ್ಯ ಎಂದು ಪುಷ್ಪಾ ಮುಂಜಿಯಾಲ್ ಬಣ್ಣಿಸಿದ್ದಾರೆ. ರಾಹುಲ್ ಗಾಂಧಿಯವರ ವಿಚಾರದಿಂದ ನಾನು ಸಾಕಷ್ಟು ಪ್ರಭಾವಿತಳಾಗಿದ್ದೇನೆ. ಅದಕ್ಕಾಗಿಯೇ ನನ್ನ ಸಮಸ್ತ ಆಸ್ತಿಯನ್ನು ಅವರಿಗೆ ಬರೆದಿದ್ದೇನೆ ಎಂದು ಪುಷ್ಪ ಹೇಳಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರೀತಮ್ ಸಿಂಗ್ ಅವರ ನಿವಾಸದಲ್ಲಿ ಪುಷ್ಪಾ ಮುಂಜಿಯಾಲ್ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ರಾಹುಲ್ ಗಾಂಧಿಯವರನ್ನು ಹೊಗಳಿದ ಪುಷ್ಪಾ ಕೈಯ್ಯಾರೆ ಆಸ್ತಿ ಪತ್ರವನ್ನು ರಾಹುಲ್ ಗಾಂಧಿಗೆ ಹಸ್ತಾಂತರಿಸಿ ಖುಷಿ ಪಟ್ಟಿದ್ದಾರೆ.

ಇಂತಹದೊಂದು ಅಪರೂಪದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ. ಹಲವರು ರಾಹುಲ್ ಗಾಂಧಿಗೆ ಆಸ್ತಿ‌ನೀಡಿದ ಅಜ್ಜಿಯ ನಿರ್ಧಾರವನ್ನು ಸ್ವಾಗತಿಸಿದ್ದಾರೆ‌.ಇನ್ನು ಕೆಲವರು ಯಾಕೆ ಈ ಆಸ್ತಿ ರಾಹುಲ್ ಗಾಂಧಿಗೆ ಕೊಟ್ಟಿದ್ದೀರಿ. ಅದರ ಬದಲು ಯಾವುದಾದರೂ ಅನಾಥಾಶ್ರಮಕ್ಕೆ ದಾನ ಮಾಡಬಾರದಿತ್ತೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ರಾಹುಲ್ ಗಾಂಧಿ ಮಾತ್ರ ಭರ್ಜರಿ ಆಸ್ತಿ ಪಡೆದಿದ್ದಾರೆ‌.

ಇದನ್ನೂ ಓದಿ : ಲಕ್ಕಿಡಿಪ್ ಸಿಎಂ ಕುಮಾರಸ್ವಾಮಿ : ಎಚ್.ಡಿಕೆ. ಗೆ ಬಿಜೆಪಿ ಟ್ವೀಟ್ ಟಾಂಗ್

ಇದನ್ನೂ ಓದಿ : ಜೆಡಿಎಸ್‌ ಬಿಟ್ಟು ಬಿಜೆಪಿ ಸೇರ್ತಾರೆ ಬಸವರಾಜ್ ಹೊರಟ್ಟಿ

Old woman has given Rahul Gandhi 50 lakh assets and Rs 10 lakh gold

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular