Photoshoot Dead : ಪೋಸ್ಟ್‌ ವೆಡ್ಡಿಂಗ್‌ ಪೋಟೋ ಶೂಟ್‌ ವೇಳೆ ದುರಂತ : ಮದುಮಗ ಸಾವು

ಕೋಯಿಕ್ಕೋಡ್‌ (ಕೇರಳ) : ಪೋಸ್ಟ್‌ ವೆಡ್ಡಿಂಗ್‌ ಪೋಟೋಶೂಟ್‌ ವೇಳೆಯಲ್ಲಿ ಮದುಮಗ ನದಿಯಲ್ಲಿ ಮುಳುಗಿ (Photoshoot Dead) ಸಾವನ್ನಪ್ಪಿರುವ ದುರಂತ ಘಟನೆ ಕೇರಳದ ಕೋಯಿಕ್ಕೋಡ್‌ ಸಮೀಪದ ಕುಟ್ಟಿಯಾಡಿ ಎಂಬಲ್ಲಿ ನಡೆದಿದೆ. ಸದ್ಯ ಮದುಮಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಕೇರಳ ಕಡಿಯಂಗಡ ಮೂಲದ ರೆಜಿಲ್ ಎಂಬಾತನೇ ಮೃತ ಮದುಮಗ. ಪತ್ನಿ ಕಾರ್ತಿಕಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾರ್ಚ್ 14ರಂದು ರೆಜಿಲ್ ಮತ್ತು ಕಾರ್ತಿಕಾ ಮದುವೆ ನಡೆದಿತ್ತು. ಪೋಸ್ಟ್‌ ವೆಡ್ಡಿಂಗ್‌ ಪೋಟೋ ಶೂಟ್‌ ನಡೆಸೋ ಸಲುವಾಗಿಯೇ ರೆಜಿಲ್‌ ಹಾಗೂ ಕಾರ್ತಿಕಾ ಕುಟ್ಟಿಯಾಡಿ ಸಮೀಪದ ನದಿಯ ದಂಡೆಯ ಬಳಿಗೆ ಬಂದಿದ್ದರು. ಪೋಟೋ ಕ್ಲಿಕ್ಕಿಸೋ ಸಲುವಾಗಿಯೇ ಇಬ್ಬರೂ ಕೂಡ ಒಟ್ಟಾಗಿ ನದಿಗೆ ಬಿದ್ದಿದ್ದಾರೆ.

ನದಿಗೆ ಬಿದ್ದ ದಂಪತಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸ್ಥಳೀಯರು ಇಬ್ಬರನ್ನೂ ನದಿಯಿಂದ ಹೊರ ತೆಗೆದಿದ್ದಾರೆ. ಅಲ್ಲದೇ ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗುತ್ತು. ದುರದೃಷ್ಟವಶಾತ್‌ ರೆಜಿಲ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾನೆ. ಅಲ್ಲದೇ ಕಾರ್ತಿಕಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಪ್ರೀ ವೆಡ್ಡಿಂಗ್‌, ಪೋಸ್ಟ್‌ ವೆಡ್ಡಿಂಗ್‌ ಪೋಟೋ ಚೆನ್ನಾಗಿ ಬರಬೇಕು ಅನ್ನೋ ಕಾರಣಕ್ಕೆ ಯುವಕ, ಯುವತಿಯರು ಜೀವದ ಹಂಗನ್ನೇ ತೊರೆಯುತ್ತಿದ್ದಾರೆ. ಒಟ್ಟಿನಲ್ಲಿ ಪೋಟೋ ಶೂಟ್‌ ಭರದಲ್ಲಿ ನವ ದಂಪತಿಗಳು ಪ್ರಾಣ ಕಳೆದುಕೊಳ್ಳುತ್ತಿರುವುದು ಮಾತ್ರ ದುರಂತವೇ ಸರಿ.

ಇದನ್ನೂ ಓದಿ : ಟ್ಯೂಷನ್ ಟೀಚರ್ ಸ್ನಾನದ ವೀಡಿಯೋ ಸೆರೆ : ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು

ಇದನ್ನೂ ಓದಿ : ಪ್ರೀತಿಸಿ ಮದುವೆಯಾದ 4 ತಿಂಗಳಲ್ಲೇ ಪತ್ನಿಯ ಕೊಂದ ಪತಿ

Photoshoot Dead Newlywed man drowns in Paleri river in Kozhikode

Comments are closed.