1 ತಿಂಗಳ ಮಗುವಿಗೆ ಕೊರೊನಾ ಟೆಸ್ಟ್ ಮಾಡಿದ ಸಿಬ್ಬಂದಿ..!!! ಮಂಗಳೂರಲ್ಲಿ ಆರೋಗ್ಯ ಸಿಬ್ಬಂದಿಗಳ ಮಹಾ ಎಡವಟ್ಟು

ಮಂಗಳೂರು : ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ನಡುವಲ್ಲೇ ವಿದೇಶದಿಂದ ಬಂದಿದ್ದ 1 ತಿಂಗಳ ಮಗುವಿಗೆ ಗಂಟಲು ದ್ರವ ತೆಗೆಯುವ ಮೂಲಕ ಮಂಗಳೂರಿನ ಆರೋಗ್ಯ ಸಿಬ್ಬಂಧಿ ಮಹಾ ಎಡವಟ್ಟು ಮಾಡಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ.

ಬೆಳಗ್ಗೆ 4.45ಕ್ಕೆ ಅಬುದಾಬಿಯಿಂದ ಲೋಹಿತ್ ರಾಜ್ ದಂಪತಿಗಳು ವಿಮಾನದ ಮೂಲಕ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅಬುದಾಬಿಯಲ್ಲಿಯೇ ದಂಪತಿಗಳು ಕೊರೊನಾ ಟೆಸ್ಟ್ ಮಾಡಿಸಿದ್ದು, ಇಬ್ಬರ ಬಳಿಯಲ್ಲಿಯೂ 72 ಗಂಟೆಗಳ ಮೊದಲ ಕೊರೊನಾ ನೆಗೆಟಿವ್ ವರದಿ ಕೈಯಲ್ಲಿತ್ತು. ಆರೋಗ್ಯ ಸಿಬ್ಬಂದಿಗಳಿಗೆ ವರದಿಯನ್ನು ದಂಪತಿಗಳು ತೋರಿಸಿದ್ದಾರೆ. ಈ ವೇಳೆಯಲ್ಲಿ ಆರೋಗ್ಯ ಸಿಬ್ಬಂದಿಗಳು ಮಗುವಿನ ಟೆಸ್ಟ್ ರಿಪೋರ್ಟ್ ಕೇಳಿದ್ದಾರೆ.

ಆದರೆ 1 ತಿಂಗಳ ಮಗುವಿಗೆ ಹೇಗೆ ಟೆಸ್ಟ್ ಮಾಡಿಸಬೇಕೆಂದು ಆರೋಗ್ಯ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆಯಲ್ಲಿ ಮೂವರನ್ನೂ ಕೂಡ ಟೆಸ್ಟ್ ಗೆ ಒಳಪಡಿಸಬೇಕು ಎಂದು ಸೂಚಿಸಿದ್ದಾರೆ. 3 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಿಸುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ. ಆದರೂ ಕೂಡ ಆರೋಗ್ಯ ಸಿಬ್ಬಂಧಿಗಳು ದಂಪತಿಗಳಿಂದ 2,400 ರೂಪಾಯಿ ಹಣ ಪಡೆದು ಕೊರೊನಾ ಟೆಸ್ಟ್ ಮಾಡಿಸಿದ್ದಾರೆ.

ಈ ವೇಳೆಯಲ್ಲಿ 1 ತಿಂಗಳ ಮಗುವಿನ ಗಂಟಲಿನ ದ್ರವ ತೆಗೆಯುತ್ತಿದ್ದಂತೆಯೇ ಮಗು ಅಸ್ವಸ್ಥಗೊಂಡಿದೆ. ಈ ವೇಳೆಯಲ್ಲಿ ಆರೋಗ್ಯ ಸಿಬ್ಬಂಧಿಗಳನ್ನು ದಂಪತಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಅವರಿಗೆ ಈ ಕುರಿತು ದೂರು ನೀಡಿದ್ದಾರೆ.

https://kannada.newsnext.live/mangalore-accident-6-injure-admitted-hospital/

ಜಿಲ್ಲಾ ಆರೋಗ್ಯಾಧಿಕಾರಿಗಳು ತಪ್ಪತಸ್ಥರ ವಿರುದ್ದ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೇ ವಿಮಾನ ನಿಲ್ದಾಣದಲ್ಲಿ ಕೊರೊನಾ ನೆಗೆಟಿವ್ ವರದಿಯಿದ್ದರೂ ಬಲವಂತವಾಗಿ ಕೊರೊನಾ ಟೆಸ್ಟ್ ಮಾಡಿಸಲಾಗುತ್ತಿದ್ದು, ಟೆಸ್ಟ್ ಮಾಡಿಸಲು ಪಡೆದ ಹಣಕ್ಕೆ ಯಾವುದೇ ರಶೀದಿಯನ್ನೂ ಸಿಬ್ಬಂದಿಗಳು ನೀಡುತ್ತಿಲ್ಲ ಎಂದು ಮಗುವಿನ ತಂದೆ ಲೋಹಿತ್ ರಾಜ್ ಆರೋಪಿಸಿದ್ದಾರೆ.

Comments are closed.