Margaret Alva files nomination: ಉಪರಾಷ್ಟ್ರಪತಿ ಚುನಾವಣೆಗೆ ಕನ್ನಡತಿ ಮಾರ್ಗರೇಟ್​ ಆಳ್ವಾ ನಾಮಪತ್ರ ಸಲ್ಲಿಕೆ

ದೆಹಲಿ : Margaret Alva files nomination:ದೇಶದಲ್ಲಿ ಸಧ್ಯ 15ನೇ ರಾಷ್ಟ್ರಪತಿ ಆಯ್ಕೆಗೆ ಮತದಾನ ಕಾರ್ಯ ನಿನ್ನೆ ಮುಕ್ತಾಯಗೊಂಡಿದೆ. ಎನ್​ಡಿಎ ಅಭ್ಯರ್ಥಿ ಹಾಗೂ ವಿಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ್​ ಸಿನ್ಹಾ ಇಬ್ಬರ ಭವಿಷ್ಯವೂ ಮತ ಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ರಾಷ್ಟ್ರಪತಿ ಚುನಾವಣೆ ಬೆನ್ನಲ್ಲೇ ಇದೀಗ ಉಪ ರಾಷ್ಟ್ರಪತಿ ಚುನಾವಣೆಗೂ ಕೇಂದ್ರ ಚುನಾವಣಾ ಆಯೋಗವು ಸಿದ್ಧವಾಗಿದೆ. ಉಪ ರಾಷ್ಟ್ರಪತಿ ಚುನಾವಣೆಯ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಕನ್ನಡತಿ ಮಾರ್ಗರೇಟ್​ ಆಳ್ವ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಪ್ರಸ್ತುತ ಉಪ ರಾಷ್ಟ್ರಪತಿ ಹುದ್ದೆಯಲ್ಲಿರುವ ವೆಂಕಯ್ಯ ನಾಯ್ಡು ಅಧಿಕಾರಾವಧಿ ಇದೇ ಆಗಸ್ಟ್​ 10ರಂದು ಕೊನೆಗೊಳ್ಳಲಿದೆ. ಆಗಸ್ಟ್​ ಆರರಂದು ದೇಶದಲ್ಲಿ ಉಪ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಹಾಗೂ ಅಂದೇ ಫಲಿತಾಂಶ ಕೂಡ ಹೊರ ಬೀಳಲಿದೆ. ಇಂದು ಕಾಂಗ್ರೆಸ್​ನ ನಾಯಕರಾದ ರಾಹುಲ್​ ಗಾಂಧಿ, ಹಿರಿಯ ನಾಯಕ ಮಲ್ಲಿಖಾರ್ಜುನ ಖರ್ಗೆ, ಅಧೀರ್​ ರಂಜನ್​ ಚೌಧರಿ,ಶಿವಸೇನೆ ನಾಯಕ ಸಂಜಯ್​ ರಾವತ್​ ಹಾಗೂ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಸೇರಿದಂತೆ ವಿವಿಧ ನಾಯಕರ ಸಮ್ಮುಖದಲ್ಲಿ ಮಾರ್ಗರೇಟ್​ ಆಳ್ವ ಇಂದು ಸಂಸತ್ತಿನಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

ಆಡಳಿತಾರೂಢ ಎನ್​ಡಿಎ ಅಭ್ಯರ್ಥಿ ಆಗಿರುವ ಜಗದೀಪ್​ ಧನ್​ಖಡ್​ ನಿನ್ನೆ ಉಪರಾಷ್ಟ್ರಪತಿ ಚುನಾವಣೆಗೆ ಸಂಸತ್ತಿನಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇದೀಗ ಇಂದು ಮಾರ್ಗರೇಟ್​ ಆಳ್ವಾ ಕೂಡ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಜುಲೈ 21ರಂದು ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದೆ.ಅಂದೇ ದೇಶದ 15ನೇ ರಾಷ್ಟ್ರಪತಿ ಯಾರಾಗ್ತಾರೆ ಎಂಬ ಕುತೂಹಲಕ್ಕೆತೆರೆ ಬೀಳಲಿದೆ. ಆಗಸ್ಟ್​ ಆರರಂದು ಉಪ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.

ಇದನ್ನು ಓದಿ : ಅಕ್ರಮವಾಗಿ ಆನೆ ದಂತ ಮಾರಾಟ ಪ್ರಕರಣ : ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಸಿಎಂಗೆ ಮನೇಕಾ ಗಾಂಧಿ ದೂರು

ಇದನ್ನೂ ಓದಿ : Ola Electric Sportscar : ಭಾರತದಲ್ಲೂ ಪ್ರಾರಂಭವಾಗಲಿರುವ ಓಲಾ ಎಲೆಕ್ಟ್ರಿಕಲ್‌ ಸ್ಪೋರ್ಟ್ಸ್‌ ಕಾರ್‌!

ಇದನ್ನೂ ಓದಿ : car accident : ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ನಾಲ್ವರು ದುರ್ಮರಣ

ಇದನ್ನೂ ಓದಿ : Insurance Payment Restrictions: ವಾಹನ ಚಾಲನೆಯಲ್ಲಿ ಅಪಘಾತ ಸಂಭವಿಸಿದರೆ ವಿಮಾ ಪಾವತಿ ನಿಬಂಧನೆಗಳು

oppositions vice presidential candidate Margaret Alva files nomination

Comments are closed.