ಶಿಲ್ಲಾಂಗ್ : ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾಅವರ ನಿವಾಸದ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಘಟನೆಯ ಬೆನ್ನಲ್ಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಶಿಲ್ಲಾಂಗ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಮೊಬೈಲ್ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.
ಭಾನುವಾರ ರಾತ್ರಿ 10.15 ರ ಸುಮಾರಿಗೆ ಈ ಘಟನೆ ನಡೆದಿದೆ. ವಾಹನಗಳಲ್ಲಿ ಬಂದಿದ್ದ ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಆರಂಭದಲ್ಲಿ ಮುಂಭಾಗದಲ್ಲಿ ದುಷ್ಕರ್ಮಿಗಳು ಬಾಟಲಿ ಎಸೆಯುತ್ತಿದ್ದಂತೆಯೇ ಬೆಂಕಿಯನ್ನು ನಂದಿಸಲಾಗಿತ್ತು. ಆದರೆ ನಂತರದಲ್ಲಿ ಹಿಂಭಾಗದಲ್ಲಿಯೂ ಮತ್ತೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.
ಕೂಡಲೇ ಭದ್ರತಾ ಸಿಬ್ಬಂದಿಗಳು ಅಲರ್ಟ್ ಆಗಿದ್ದು, ಬೆಂಕಿಯನ್ನು ನಂದಿಸಿದ್ದಾರೆ. ಸ್ವಾತಂತ್ರ್ಯೋತ್ಸವದ ದಿನದಂದೇ ಈ ಘಟನೆ ನಡೆದಿದ್ದು, ಅಪರಿಚಿತರು ರಾಜ್ಯ ರಾಜಧಾನಿಯಲ್ಲಿ ವಿದ್ವಂಸಕ ಕೃತ್ಯವೆನ್ನೆಸಗಲು ಹೊಂಚು ಹಾಕಿದ್ದರು ಎಂದು ತಿಳಿದು ಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರವು ಶಿಲ್ಲಾಂಗ್‌ನಲ್ಲಿ ಕರ್ಫ್ಯೂ ವಿಧಿಸಿದೆ ಮತ್ತು ಕನಿಷ್ಠ ನಾಲ್ಕು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ನಿಷೇಧಿಸಿದೆ.
ಘಟನೆಯ ಬೆನ್ನಲ್ಲೇ ಮೇಘಾಲಯದ ಗೃಹ ಸಚಿವ ಲಹ್ಕ್‌ಮೆನ್ ರಿಂಬುಯಿ ರಾಜೀನಾಮೆಯನ್ನು ಸಲ್ಲಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ : ಸಿಎಂ ಖಾಸಗಿ ನಿವಾಸದಲ್ಲಿ ಮೊಬೈಲ್ ಬ್ಯಾನ್…! ಹೊರಬಿತ್ತು ಖಡಕ್ ಆದೇಶ…!
ಇದನ್ನೂ ಓದಿ : Flight Ticket : ಕೊರೊನಾ ನಡುವಲ್ಲೇ ಬಿಗ್‌ಶಾಕ್ : ಮತ್ತಷ್ಟು ದುಬಾರಿಯಾಯ್ತು ವಿಮಾನಗಳ ಟಿಕೆಟ್
ಇದನ್ನೂ ಓದಿ : Google Doodle : ಭಾರತ ಸಂಸ್ಕೃತಿಯ ಚಿತ್ತಾರ ಮೂಡಿಸಿದ ಗೂಗಲ್ ಡೂಡಲ್