ತೆರೆಗೆ ಬರಲಿದೆ ನಟಿ ಭಾರತಿ ಅಂತರಾಳ…! ನಟ ಅನಿರುದ್ಧ ರಿಲೀಸ್ ಮಾಡಿದ್ರು ಟ್ರೇಲರ್…!!

ಹಿರಿಯ ನಟಿ ಭಾರತಿ ವಿಷ್ಣುವರ್ಧನ್  ಸಿನಿಪಯಣದ ಏರಿಳಿತಗಳನ್ನು ದಾಖಲಿಸುವ ಸಾಕ್ಷ್ಯಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಭಾರತಿ ವಿಷ್ಣುವರ್ಧನ್ ಹುಟ್ಟುಹಬ್ಬದಂದು ಟ್ರೇಲರ್ ರಿಲೀಸ್ ಆಗಿದ್ದು, ಸಾಕ್ಷ್ಯಚಿತ್ರ ಅಗಸ್ಟ್ 24 ರಂದು ತೆರೆಗೆ ಬರಲಿದೆ.ಸಾಕ್ಷ್ಯಚಿತ್ರಕ್ಕೆ ಬಾಳೇ ಬಂಗಾರ ಎಂದು ಹೆಸರಿಡಲಾಗಿದೆ.

ನಟ ವಿಷ್ಣುವರ್ಧನ್, ಭಾರತಿ ವಿಷ್ಣುವರ್ಧನ್ ಅಳಿಯ  ಅನಿರುದ್ಧ ಭಾರತಿಯವರ ಸಿನಿಪಯಣವನ್ನು ಸಾಕ್ಷ್ಯಚಿತ್ರವಾಗಿ ತೆರೆಗೆ ತರಲು ಸಜ್ಜಾಗಿದ್ದಾರೆ. ಭಾರತಿಯವರ ಸಿನಿಪಯಣ, ಬದುಕು ಎಲ್ಲವನ್ನು ದಾಖಲಿಸುವ ಪ್ರಯತ್ನದಲ್ಲಿ ಅನಿರುದ್ಧ ಯಶಸ್ವಿಯಾಗಿದ್ದಾರೆ. ಸಂಶೋಧನೆ,ಲೇಖನ,ನಿರೂಪಣೆ ಎಲ್ಲವೂ ಅನಿರುದ್ಧ ಅವರದ್ದೇ ಆಗಿದೆ.

ಭಾವಪೂರ್ಣ ಹಾಗೂ ಮಾಹಿತಿಪೂರ್ಣ ಸಾಕ್ಷ್ಯಚಿತ್ರದಲ್ಲಿ ಭಾರತೀಯವರ ಸಮಕಾಲಿನ ನಟ ಶಿವರಾಂ, ತೆಲುಗು ನಟ ಮುಮ್ಮುಟ್ಟಿ,ಅನಂತನಾಗ್, ಹೇಮಾಚೌಧರಿ,ಶಿವರಾಜ್ ಕುಮಾರ್ ಸೇರಿದಂತೆ ಹಲವರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

2 ಗಂಟೆ 31 ನಿಮಿಷದ ಈ ಸಾಕ್ಷ್ಯಚಿತ್ರವನ್ನು ಅಗಸ್ಟ್ 24 ರಂದು ಗರುಡಾ ಮಾಲ್ ನಲ್ಲಿ ರಿಲೀಸ್ಆಗಲಿದ್ದು, ಬಳಿಕ ಓಓಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

 ಈ ಚಿತ್ರ ಭಾರತೀಯವರ ಅಪರೂಪದ ಭಾವಚಿತ್ರಗಳು, ವಿಡಿಯೋಗಳನ್ನು ಒಳಗೊಂಡಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಸಿಂಹಾದ್ರಿಯ ಸಿಂಹ ಖ್ಯಾತಿಯ ಚಂದನವನದ ಹಿರಿಯ ನಿರ್ಮಾಪಕ ಬಿ. ವಿಜಯ್ ಕುಮಾರ್ ವಿಧಿವಶ

ಇದನ್ನೂ ಓದಿ : ಲವ್​ ಮಾಕ್ಟೆಲ್ 2 : ತೆರೆಗೆ ಬರಲು ರೆಡಿಯಾಯ್ತು ಕೃಷ್ಣ ಮಿಲನಾ ಮತ್ತೊಂದು ಸಿನಿಮಾ

Comments are closed.