ಸೋಮವಾರ, ಏಪ್ರಿಲ್ 28, 2025
HomeNationalPictures of the Year: ಭಾರತೀಯನಿಗೆ ಒಲಿದ ನ್ಯಾಷನಲ್‌ ಜಿಯೋಗ್ರಾಫಿಕ್‌ ನ ʻವರ್ಷದ ಚಿತ್ರʼ ಪ್ರಶಸ್ತಿ

Pictures of the Year: ಭಾರತೀಯನಿಗೆ ಒಲಿದ ನ್ಯಾಷನಲ್‌ ಜಿಯೋಗ್ರಾಫಿಕ್‌ ನ ʻವರ್ಷದ ಚಿತ್ರʼ ಪ್ರಶಸ್ತಿ

- Advertisement -

ನವದೆಹಲಿ: (Pictures of the Year) ನ್ಯಾಷನಲ್‌ ಜಿಯೋಗ್ರಾಫಿಕ್‌ ನೀಡಲಾಗುವ ಪ್ರತಿಷ್ಠಿತ ʻವರ್ಷದ ಚಿತ್ರʼ ಪ್ರಶಸ್ತಿಯು ಅಮೇರಿಕಾದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವ ಭಾರತೀಯ ಮೂಲದ ಸಾಫ್ಟ್‌ ವೇರ್‌ ಇಂಜಿನಿಯರ್‌ ಕಾರ್ತಿಕ್ ಸುಬ್ರಮಣ್ಯಂ ಅವರ ಮುಡಿಗೇರಿದೆ. ಈ ಬಗ್ಗೆ ಸ್ವತಃ ನ್ಯಾಷನಲ್‌ ಜೊಯೋಗ್ರಾಫಿಕ್‌ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಭಾರತೀಯ ಮೂಲದ ಸಾಫ್ಟ್‌ ವೇರ್‌ ಇಂಜಿನಿಯರ್‌ ಕಾರ್ತಿಕ್ ಸುಬ್ರಮಣ್ಯಂ ಅವರು ಕ್ಲಿಕ್ಕಿಸಿದ ʻಡ್ಯಾನ್ಸ್‌ ಆಫ್‌ ದಿ ಈಗಲ್‌ʼ ಛಾಯಾಚಿತ್ರವು ನ್ಯಾಷನಲ್‌ ಜೊಯೋಗ್ರಾಫಿಕ್‌ ನ ʻವರ್ಷದ ಚಿತ್ರʼ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಫೋಟೋವನ್ನು ಅಮೇರಿಕಾದ ಅಲಾಸ್ಕಾದಲ್ಲಿರುವ ಬಿಳಿತಲೆಯ ಹದ್ದುಗಳಿಂದ ಕೂಡಿರುವ ʻಚಿಲ್ಕಟ್‌ ಬಾಲ್ಡ್‌ ಈಗಲ್‌ ಸಂರಕ್ಷಣಾ ವಲಯʼದಲ್ಲಿ ಈ ಚಿತ್ರಣವನ್ನು ಕ್ಲಿಕ್ಕಿಸಲಾಗಿದೆ.

ಈ ವಲಯಕ್ಕೆ ಚಳಿಗಾಲ ಆರಂಭವಾಗುವುದಕ್ಕೂ ಮುನ್ನ ಪ್ರಪಂಚದ ಬೇರೆ ಬೇರೆ ಭಾಗಗಳಿಂದ ಹದ್ದುಗಳು ವಲಸೆ ಬರುತ್ತವೆ. ಅಲ್ಲಿನ ನದಿಗಳಲ್ಲಿರುವ ಸಾಲ್ಮನ್‌ ಮೀನುಗಳನ್ನು ಬೇಟೆಯಾಡಿ ಅವು ಜೀವಿಸುತ್ತವೆ. ಹದ್ದುಗಳು ಸಾಲ್ಮನ್‌ ಮೀನುಗಳನ್ನು ಬೇಟೆಯಾಡಿ ಜೀವಿಸುವ ಈ ಸಂದರ್ಭದಲ್ಲಿ ಸುಬ್ರಮಣ್ಯಂ ತೆಗೆದ ಈ ಫೋಟೋ ಎಲ್ಲರ ಮನ್ನಣೆಗೆ ಪಾತ್ರವಾಗಿದ್ದಲ್ಲದೇ ನ್ಯಾಷನಲ್‌ ಜಿಯೋಗ್ರಾಫಿಕ್‌ ನೀಡಲಾಗುವ ಪ್ರತಿಷ್ಠಿತ ʻವರ್ಷದ ಚಿತ್ರʼ ಪ್ರಶಸ್ತಿಗೂ ಕೂಡ ಭಾಜನವಾಗಿದೆ.

ಇನ್ನೂ “ಹದ್ದುಗಳ ಚಟುವಟಿಕೆ ಮತ್ತು ನಡವಳಿಕೆಯನ್ನು ಗಂಟೆಗಟ್ಟಲೆಗಳ ಕಾಲ ಗಮನಿಸಿದ ನನಗೆ ಅವುಳ ಅಪೂರ್ವ ಚಿತ್ರವನ್ನು ಸೆರೆಹಿಡಿಯಲು ಸಾಧ್ಯವಾಯಿತು” ಎಂದು ಕಾರ್ತಿಕ್‌ ಸುಬ್ರಹ್ಮಣ್ಯಂ ಪ್ರಶಸ್ತಿಯನ್ನು ಪಡೆದುಕೊಂಡ ಸಂದರ್ಭದಲ್ಲಿ ಹೇಳಿದ್ದಾರೆ. ಇನ್ನೂ ವೃತ್ತಿಯಲ್ಲಿ ಇಂಜಿನಿಯರ್‌ ಆಗಿರುವ ಭಾರತೀಯ ಮೂಲದ ಕಾರ್ತಿಕ್‌ ಸುಬ್ರಮಣ್ಯಂ ಫೋಟೋಗ್ರಫಿಯನ್ನು ಕೂಡ ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ ಜೊತೆಗೆ ಅದರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ಇದೀಗ ಹೆಸರು ಮಾಡಿದ್ದಾರೆ.

ಇದನ್ನೂ ಓದಿ : Lucknow car accident: ಫ್ಲೈಓವರ್ ಮೇಲಿಂದ ಬಿದ್ದ ಕಾರು: 3 ಮಂದಿ ಸಾವು, ಓರ್ವನಿಗೆ ಗಾಯ

ಇದನ್ನೂ ಓದಿ : Uttar Pradesh Crime : ರಸಗುಲ್ಲಾ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಇದನ್ನೂ ಓದಿ : ಹೆಚ್‌ಡಿಎಫ್‌ಸಿ ಬ್ಯಾಂಕ್‌ ಗ್ರಾಹಕರ ಗಮನಕ್ಕೆ : FD ಮೇಲೆ ಶೇ. 6ರಷ್ಟು ಬಡ್ಡಿದರ ಹೆಚ್ಚಳ

Pictures of the Year: National Geographic’s “Picture of the Year” award for an Indian

RELATED ARTICLES

Most Popular