Modi in Ayodhya: ರಾಮನ ಜನ್ಮಭೂಮಿಯಲ್ಲಿ ದೀಪಗಳದ್ದೇ ಚಿತ್ತಾರ;ಸರಯೂ ನದಿತೀರದಲ್ಲಿ ‘ನಮೋ’ ಪೂಜೆ .!

ಉತ್ತರ ಪ್ರದೇಶ: Modi in Ayodhya: ಬೆಳಕಿನ ಹಬ್ಬ ದೀಪಾವಳಿ ನಿಮಿತ್ತ ಕಂಗೊಳಿಸುತ್ತಿರುವ ಅಯೋಧ್ಯೆಗೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿದರು. ಅಲ್ಲಿ ನಡೆಯುತ್ತಿರುವ 6ನೇ ವರ್ಷದ ದೀಪಗಳ ದೀಪೋತ್ಸವ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಭಾಗಿಯಾಗಿದ್ದು ವಿಶೇಷ.

ಮೊದಲಿಗೆ ರಾಮನ ದರ್ಶನ ಪಡೆದ ಪ್ರಧಾನಿ ಬಳಿಕ ರಾಮಮಂದಿರ ನಿರ್ಮಾಣ ಕಾಮಗಾರಿ ವೀಕ್ಷಿಸಿ ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು. ಬಳಿಕ ಶ್ರೀರಾಮ ರಾಜ್ಯಾಭಿಷೇಕ ವಿಧಿವಿಧಾನಗಳಲ್ಲಿ ಭಾಗಿಯಾದರು. ಬಳಿಕ ಶ್ರೀರಾಮನ ಸಾಂಕೇತಿಕ ಪಟ್ಟಾಭಿಷೇಕವನ್ನು ಮಾಡಿ ದೀಪ ಬೆಳಗಿಸಿದರು. ಅದಾದ ಬಳಿಕ ಸರಯೂ ನದಿ ತೀರದಲ್ಲಿ ದೀಪೋತ್ಸವಗಳ ಆಚರಣೆಗೆ ಚಾಲನೆ ನೀಡಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಬಳಿಕ ಶ್ರೀರಾಮನ ಭಕ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಮನ ಆದರ್ಶ ಹಾಗೂ ಸಂವಿಧಾನದ ಆಶಯಗಳ ಪಾಲನೆಯೇ ನಮ್ಮ ಆಡಳಿತದ ಗುರಿ ಎಂದರು. ರಾಮನ ಆದರ್ಶವು ಎಲ್ಲರಿಗೂ ಪ್ರೇರಣೆ ಆಗಿದೆ. ರಾಮನ ಆದರ್ಶ, ದೂರದೃಷ್ಟಿಯಂತೆ ನಮ್ಮ ದೇಶವು ಅಭಿವೃದ್ಧಿ ಹೊಂದುತ್ತಿದೆ. ಮುಂಬರುವ ದಿನಗಳಲ್ಲಿ ಹೊಸ ದಿಕ್ಕಿನತ್ತ ದೇಶದ ಪ್ರಗತಿ ಸಾಗಲಿದೆ. ಶ್ರೀರಾಮನು ಗೌರವ ಗಳಿಸುವುದರ ಜೊತೆಗೆ ಬೇರೆಯವರಿಗೂ ಗೌರವ ಕೊಡುವುದನ್ನು ಕಲಿಸಿಕೊಟ್ಟಿದ್ದಾರೆ. ಹೀಗಾಗಿ ರಾಮನಿಂದ ಎಷ್ಟು ಸಾಧ್ಯವೋ ಅಷ್ಟು ಕಲಿತುಕೊಳ್ಳಬೇಕಿದೆ ಎಂಬ ಸಂದೇಶ ಸಾರಿದರು.

ಮರ್ಯಾದಾ ಪುರುಷೋತ್ತಮ ರಾಮನ ತ್ಯಾಗದ ಪ್ರತೀಕ. ಕರ್ತವ್ಯಕ್ಕೆ ಹೊಸ ಶಕ್ತಿ ನೀಡಿದವನು. ರಾಮನು ದೇಶದ ಅಸ್ಮಿತೆ, ರಾಷ್ಟ್ರದ ಶಕ್ತಿಯೂ ಆತನೇ. ಶ್ರೀ ರಾಮನ ಸಂಕಲ್ಪ ಶಕ್ತಿಯಿಂದ ನಮ್ಮ ದೇಶ ಎತ್ತರಕ್ಕೆ ಏರಲಿದೆ. ರಾಮನ ಆಶೀರ್ವಾದಿಂದ ಭಾರತಕ್ಕೆ ಒಳ್ಳೆಯದಾಗುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಶ್ರೀರಾಮನ ಆಶಯದಂತೆ ನಡೆಯುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದ ಮೋದಿ, ಶೀಘ್ರದಲ್ಲೇ ಪ್ರಯಾಗರಾಜ್ ನಲ್ಲಿ 51 ಅಡಿ ಎತ್ತರದ ಶ್ರೀ ರಾಮನ ಪ್ರತಿಮೆ ಹಾಗೂ ನಿಷಧರಾಜನ ಪ್ರತಿಮೆ ನಿರ್ಮಿಸುವುದಾಗಿ ಘೋಷಿಸಿದರು. ತಮ್ಮ ಸರ್ಕಾರದ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷ ವಾಕ್ಯಕ್ಕೆ ಶ್ರೀ ರಾಮನ ಆಡಳಿತವೇ ಮಾದರಿ ಎಂದರು.

ಭಗವಾನ್ ಶ್ರೀ ರಾಮ ಪತ್ನಿ ಸೀತಾಮಾತೆ ಹಾಗೂ ಲಕ್ಷ್ಮಣ ಜೊತೆಗೂಡಿ ವನವಾಸ ಮುಗಿಸಿಕೊಂಡು ಲಂಕೆಯಿಂದ ಅಯೋಧ್ಯೆಗೆ ಪುಷ್ಪಕ ವಿಮಾನ ಏರಿ ಬಂದ ದಿನ ಎಂದು ಪುರಾಣ ಪ್ರಸಿದ್ಧವಾಗಿರುವ ಈ ದಿನವೇ ಅಯೋಧ್ಯೆಯಲ್ಲಿ ದೀಪಾವಳಿಯ ದೀಪೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. 6 ವರ್ಷಗಳ ಹಿಂದೆ ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಆರಂಭಗೊಂಡಿತ್ತು.

ಗಿನ್ನೆಸ್ ದಾಖಲೆಯಾದ ಈ ಬಾರಿಯ ದೀಪೋತ್ಸವ:
ಅಂದಹಾಗೆ, ಅಯೋಧ್ಯೆಯಲ್ಲಿ ಇದೇ ಮೊದಲ ಬಾರಿಗೆ ಬರೋಬ್ಬರಿ 15 ಲಕ್ಷ ದೀಪಗಳನ್ನು ಬೆಳಗಿಸುವುದರ ಮೂಲಕ ಅಯೋಧ್ಯೆಯ ದೀಪೋತ್ಸವವವು ಗಿನ್ನೆಸ್ ರೆಕಾರ್ಡ್ ಆಗಿದೆ, ದೀಪೋತ್ಸವದ ವೇಳೆಯೇ ಪ್ರಧಾನಿ ಅವರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಗಿನ್ನೆಸ್ ದಾಖಲೆಯ ಪ್ರಮಾಣ ಪತ್ರ ನೀಡಿದರು.

ಇದನ್ನೂ ಓದಿ: UP Shocker: ಕಂಬಕ್ಕೆ ಕಟ್ಟಿ ಥಳಿಸಿದ್ರು, ನೀರು ಕೇಳಿದರೆ ಬಾಯಿಗೆ ಕಾರದ ಪುಡಿ ತುಂಬಿದ್ರು : 10 ವರ್ಷದ ಬಾಲಕನ ಮೇಲೆ ಕ್ರೌರ್ಯ ಮೆರೆದ ದುಷ್ಕರ್ಮಿಗಳು

ಇದನ್ನೂ ಓದಿ: Kantara America : ಅಮೇರಿಕಾದಲ್ಲೂ ದೈವಗಗ್ಗರದ ಅಬ್ಬರ : ಎಂಟೂವರೆ ಕೋಟಿ ಗಳಿಸಿದ ಕಾಂತಾರ

PM Modi attends Deepotsav celebrations in Ayodhya

Comments are closed.