PM Modi Lay Foundation Stone: ಮಣಿಪುರ, ತ್ರಿಪುರಾದಲ್ಲಿ ಸಾವಿರಾರು ಕೋಟಿ ರೂಪಾಯಿ ಕಾಮಗಾರಿಗಳಿಗೆ ಪ್ರಧಾನಿ ಚಾಲನೆ

ಇಂಫಾಲ/ಅಗರ್ತಲಾ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಣಿಪುರ ಮತ್ತು ತ್ರಿಪುರಾಗಳಿಗೆ ಭೇಟಿ ನೀಡಿದ್ದು, ಸಾವಿರಾರು ಕೋಟಿ ರೂಪಾಯಿ ಮೊತ್ತದ 22ಕ್ಕೂ ಹೆಚ್ಚು ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಕಾಮಗಾರಿ ಮುಗಿದಿರುವ ಅನೇಕ ಯೋಜನೆಗಳಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು,ರಾಜ್ಯ ಸರ್ಕಾರ ‘ಎಚ್ಐಆರ್‌ಎ’ ಕಾರ್ಯಕ್ರಮದೊಂದಿಗೆಮುನ್ನಡೆಯುತ್ತಿದೆ. ಎಚ್ ಎಂದರೆ ಹೈವೇ, ಐ ಎಂದರೆ ಇಂಟರ್ನೆಟ್ ವೇ, ಆರ್ ಎಂದರೆ ರೈಲ್ವೆ, ಎ ಎಂದರೆ ಏರ್ವೇಸ್ ಇವೆಲ್ಲವೂ ತ್ರಿಪುರಾದ ಸಂಪರ್ಕದ ಮೂಲಕ ಇಡೀ ಈಶಾನ್ಯ ಭಾರತವನ್ನು ಸಶಕ್ತಗೊಳಿಸುತ್ತವೆ ಎಂದು ಹೇಳಿದರು.

ತ್ರಿಪುರಾ ಮಹಾರಾಜ ಬಿರ್ ಬಿಕ್ರಮ್ ವಿಮಾನ ನಿಲ್ದಾಣದಲ್ಲಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಮಗ್ರ ರ್ಟಮಿನಲ್ ಬಿಲ್ಡಿಂಗ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಮುಖ್ಯಮಂತ್ರಿ ತ್ರಿಪುರಾ ಗ್ರಾಮ ಸಮೃದ್ಧಿ ಯೋಜನೆ, 500 ಕೋಟಿ ರೂಪಾಯಿ ವೆಚ್ಚದ ವಿದ್ಯಾಜ್ಯೋತಿ ಶಾಲಾ ಮಿಷನ್- 100 ಮುಂತಾದ ಯೋಜನೆಗಳಿಗೂ ಚಾಲನೆ ನೀಡಿದರು.

ಇನ್ನೇನು ಚುನಾವಣೆ ಎದುರಾಗಲಿರುವ ಮಣಿಪುರದಲ್ಲಿ 2,950 ಕೋಟಿ ರೂಪಾಯಿ ವೆಚ್ಚದ 22 ಕಾಮಗಾರಿಗಳಿಗೆ ಮೋದಿ ಅಡಿಗಲ್ಲು ಹಾಕಿದರು. ಚಾಲನೆ ನೀಡಿದರು. 1,850 ಕೋಟಿ ರೂಪಾಯಿ ವೆಚ್ಚದ 13 ಯೋಜನೆಗಳನ್ನು ಉದ್ಘಾಟಿಸಿದರು. ಈ ಪೈಕಿ 1,700 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಬರಾಕ್ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ 75 ಕೋಟಿ ರೂಪಾಯಿ ವೆಚ್ಚದ ಉಕ್ಕಿನ ಸೇತುವೆಯನ್ನು ಇದೇ ವೇಳೆ ಉದ್ಘಾಟಿಸಲಾಗಿದೆ. 1,100 ಕೋಟಿ ರೂಪಾಯಿ ವೆಚ್ಚ 2,387 ಮೊಬೈಲ್ ಟವರ್‌ಗಳಿಗೂ ಚಾಲನೆ ದೊರಕಿದೆ.

(PM Modi Lay Foundation Stone For Several Projects In Manipur, Tripura)

ಇದನ್ನೂ ಓದಿ: Bulli Bai App Row: ಹಿಂದೂ ಮಹಿಳೆಯರೇ ಇವರ ಟಾರ್ಗೆಟ್; ಅಶ್ಲೀಲ ಚಿತ್ರಗಳನ್ನು ರವಾನಿಸುತ್ತಿದ್ದ ಟೆಲಿಗ್ರಾಮ್ ಚಾನಲ್ ಬಂದ್

Comments are closed.