Sindhutai Sapkal : ಅನಾಥ ಮಕ್ಕಳ ತಾಯಿ , ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್​ ನಿಧನ

Sindhutai Sapkal :ಅನಾಥ ಮಕ್ಕಳ ಪಾಲಿನ ತಾಯಿ, ಸಮಾಜ ಸೇವಕಿ ಹಾಗೂ ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್​ ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. 75 ವರ್ಷ ಪ್ರಾಯದ ಸಿಂಧುತಾಯಿ ಸಪ್ಕಾಲ್​ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧರನಾಗಿದ್ದಾರೆ. ಒಂದೂವರೆ ತಿಂಗಳ ಹಿಂದೆ ಹರ್ಣಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.


ಹರ್ಣಿಯಾ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದ ಸಿಂಧುತಾಯಿ ಸಪ್ಕಾಲ್​ರನ್ನು ಮಹಾರಾಷ್ಟ್ರದ ಮುಂಬೈನ ಗೆಲ್ಯಾಕ್ಸಿ ಕೇರ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಬಾರದ ಲೋಕಕ್ಕೆ ತೆರಳಿದ್ದಾರೆ. ಈ ಬಗ್ಗೆ ಗ್ಯಾಲಕ್ಸಿ ಕೇರ್​ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಶೈಲೇಶ್​ ಪುಂಟಂಬೆಕರ್​ ಮಾಹಿತಿ ನೀಡಿದ್ದಾರೆ.


ಪದ್ಮಶ್ರೀ ಪುರಸ್ಕೃತೆ, ಸಮಾಜ ಸೇವಕಿ ಸಿಂಧುತಾಯಿ ಸಪ್ಕಾಲ್​ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್​, ಪ್ರಧಾನಿ ಮೋದಿ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಸಮಾಜಕ್ಕಾಗಿ ಸಿಂಧುತಾಯಿ ಸಪ್ಕಾಲ್​ ಸಲ್ಲಿಸಿದ ಸೇವೆ ಎಂದಿಗೂ ಸ್ಮರಣೀಯ. ಇವರು ಅದೆಷ್ಟೋ ಅನಾಥ ಮಕ್ಕಳಿಗೆ ಜೀವನ ನೀಡಿದ್ದಾರೆ. ಇವರ ನಿಧನದಿಂದ ಅಪಾರ ನೋವಾಗಿದೆ ಎಂದು ಟ್ವೀಟಾಯಿಸಿದ್ದಾರೆ.
ಸಿಂಧು ತಾಯಿ ಸಪ್ಕಾಲ್​​ ತಮ್ಮ ಸಮಾಜ ಸೇವೆಯ ಮೂಲಕ ಸ್ಪೂರ್ತಿದಾಯಕ ಜೀವನವನ್ನು ನಡೆಸಿದ್ದಾರೆ. ಅವರಿಗೆ ದುರ್ಬಲರು ಹಾಗೂ ಬುಡಕಟ್ಟು ಜನಾಂಗದವರು ಎಂದರೆ ಪ್ರೀತಿ. ಹೀಗಾಗಿ ಅವರ ಕಲ್ಯಾಣಕ್ಕೆಂದೇ ಸಿಂಧುತಾಯಿ ಕೆಲಸ ಮಾಡಿದ್ದಾರೆ. 2021ರಲ್ಲಿ ಇವರ ಸಮಾಜ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು. ಆದರೆ ಅವರ ನಿಧನರಿಂದ ತಮಗೆ ಅಪಾರ ನೋವಾಗಿದೆ ಎಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಟ್ವೀಟ್​ ಮಾಡಿದ್ದಾರೆ.


1948ರ ನವೆಂಬರ್​ 14ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಹುಟ್ಟಿದ್ದ ಸಿಂಧು ತಾಯಿ ಸಪ್ಕಾಲ್​ ಬಡ ಕುಟುಂಬದಲ್ಲಿಯೇ ಜೀವನ ಕಳೆದವರು. ಕುಟುಂಬದಲ್ಲಿನ ಬಡತನದಿಂದಾಗಿ ಕೇವಲ ನಾಲ್ಕನೇ ತರಗತಿಗೇ ಶಾಲೆಗೆ ಅಂತ್ಯ ಹಾಡಿದರು. ಇದಾದ ಬಳಿಕ ತಮ್ಮ 12ನೇ ವಯಸ್ಸಿಗೆ 32 ವರ್ಷ ವಯಸ್ಸಿನ ವ್ಯಕ್ತಿಯ ಜೊತೆ ಬಾಲ್ಯ ವಿವಾಹವಾದರು. ಮೂರನೇ ಮಗು ಹೊಟ್ಟೆಯಲ್ಲಿರುವಾಗ ಇವರ ದಾಂಪತ್ಯದಲ್ಲಿ ವಿರಸ ಮೂಡಿತ್ತು. ಹೀಗಾಗಿ ಪತಿ ಸಿಂಧು ತಾಯಿಯನ್ನು ತ್ಯಜಿಸಿದರು. ಇದಾದ ಬಳಿಕ ಸಿಂಧು ತಾಯಿಗೆ ತವರು ಮನೆಯಲ್ಲಿಯೂ ಆಶ್ರಯ ಸಿಗಲಿಲ್ಲ. ಮೂವರು ಮಕ್ಕಳನ್ನು ಸಾಕಲೆಂದು ಅನಾಥಾಶ್ರಮಗಳಲ್ಲಿ ಕೆಲಸ ಮಾಡಲು ಆರಂಭಿಸಿದರು. ಇದಾದ ಬಳಿಕ ತಾವೇ ಅನಾಥಾಶ್ರಮಗಳನ್ನು ಕಟ್ಟಿಸಿ ಸುಮಾರು 1050 ಅನಾಥ ಮಕ್ಕಳ ಪಾಲಿಗೆ ದಾರಿದೀಪವಾಗಿದ್ದರು. ಸಿಂಧು ತಾಯಿ ಸಪ್ಕಾಲ್​ರ ಈ ಸಮಾಜ ಸೇವೆಯನ್ನು ಗುರುತಿಸಿದ್ದ ಕೇಂದ್ರ ಸರ್ಕಾರ 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

Social worker Sindhutai Sapkal, ‘orphan children’s mother’, dies

ಇದನ್ನು ಓದಿ : Omicron cases : ಹೊಸ ರೂಪಾಂತರಿಯ ಹುಟ್ಟಿಗೆ ಕಾರಣವಾಗಲಿದೆ ಓಮಿಕ್ರಾನ್​ : ಡಬ್ಲುಹೆಚ್​ಓ ಎಚ್ಚರಿಕೆ

ಇದನ್ನೂ ಓದಿ : fresh COVID cases : ದೇಶದಲ್ಲಿ ಒಂದೇ ದಿನ 58,097 ಹೊಸ ಕೋವಿಡ್​ ಪ್ರಕರಣಗಳು ವರದಿ

Comments are closed.