ಸೋಮವಾರ, ಏಪ್ರಿಲ್ 28, 2025
HomeNationalPM Modi rally cancelled : ಪಂಜಾಬ್​ನಲ್ಲಿ ಭದ್ರತಾ ಲೋಪ: ಪ್ರಧಾನಿ ರ್ಯಾಲಿ ರದ್ದು

PM Modi rally cancelled : ಪಂಜಾಬ್​ನಲ್ಲಿ ಭದ್ರತಾ ಲೋಪ: ಪ್ರಧಾನಿ ರ್ಯಾಲಿ ರದ್ದು

- Advertisement -

PM Modi rally cancelled :ಭದ್ರತಾ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್​ ಫಿರೋಜ್​ ಪುರಕ್ಕೆ ತಮ್ಮ ನಿಗದಿತ ಭೇಟಿಯನ್ನು ಮುಂದೂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯವು ಅಧಿಕೃತ ಮಾಹಿತಿಯನ್ನು ನೀಡಿದೆ.


ಪಂಜಾಬ್​ ಸರ್ಕಾರವು ರಸ್ತೆ ಮಾರ್ಗದಲ್ಲಿ ಸುರಕ್ಷಿತ ಸಂಚಾರವನ್ನು ಒದಗಿಸಲು ಹೆಚ್ಚುವರಿ ಭದ್ರತೆಯನ್ನು ನಿಯೋಜಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಲಾಗಿದೆ. ಪ್ರತಿಭಟನಾನಿರತ ರೈತರು ರಸ್ತೆ ತಡೆ ನಡೆಸಿದ ಪರಿಣಾಮವಾಗಿ ಪ್ರಧಾನಿ ಮೋದಿ ಅವರ ಅಶ್ವದಳವು ಫ್ಲೈ ಓವರ್​ನಲ್ಲಿಯೇ ಸಿಲುಕಿಕೊಂಡಿದೆ. ಪ್ರಧಾನಿ ಮೋದಿ ಅವರ ಕಾರು ಫ್ಲೈ ಓವರ್​ ಮೇಲೆ ಸಿಲುಕಿಕೊಳ್ಳುತ್ತಿದ್ದಂತೆಯೇ ಎಸ್​ಪಿಜಿ ಸಿಬ್ಬಂದಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯುವ ಸಲುವಾಗಿ ಪ್ರಧಾನಿ ಮೋದಿ ಕಾರನ್ನು ಸುತ್ತುವರಿದಿದ್ದಾರೆ.

ಫ್ಲೈ ಓವರ್​ನಲ್ಲಿ ಪ್ರಧಾನಿ ಮೋದಿ ಅವರು ಬರಬೇಕಿದ್ದ ಮಾರ್ಗಕ್ಕೆ ಪ್ರತಿಭಟನಾಕಾರರು ತಡೆ ನೀಡುತ್ತಾರೆ ಅಂದರೆ ಅದು ಪಂಜಾಬ್​ ಪೊಲೀಸರು ಪ್ರತಿಭಟನಾಕಾರರ ನಡೆಗೆ ಮೌನ ಸಮ್ಮತಿ ನೀಡಿದಂತೆ ಕಾಣುತ್ತಿತ್ತು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಪಂಜಾಬ್​ ಪೊಲೀಸರಿಗೆ ಮಾತ್ರ ಪ್ರಧಾನಿ ಕಾರು ಚಲಿಸುವ ನಿಖರ ಮಾರ್ಗಗಳ ಬಗ್ಗೆ ಮಾಹಿತಿ ಇತ್ತು. ಆದರೆ ಪ್ರಧಾನಿಯ ಭದ್ರತೆ ವಿಚಾರದಲ್ಲಿ ಪಂಜಾಬ್​ ಪೊಲೀಸರ ವರ್ತನೆ ಈ ಹಿಂದೆ ಎಲ್ಲಿಯೂ ನೋಡಿಲ್ಲ. ಇತ್ತೀಚಿನ ವರ್ಷಗಳಲ್ಲಿ ನಡೆದ ದೇಶದ ಪ್ರಧಾನಿ ಭದ್ರತೆ ಅತ್ಯಂತ ದೊಡ್ಡ ಭದ್ರತಾ ಲೋಪ ಇದಾಗಿದೆ.


ಸರ್ಕಾರದ ಉನ್ನತ ಮೂಲಗಳು, “ಫ್ಲೈಓವರ್‌ನಲ್ಲಿ ಕಂಡುಬಂದದ್ದು ಪಂಜಾಬ್ ಪೊಲೀಸರು ಮತ್ತು ಪ್ರತಿಭಟನಾಕಾರರು ಎಂದು ಕರೆಯಲ್ಪಡುವ ಆಶ್ಚರ್ಯಕರ ದೃಶ್ಯವಾಗಿದೆ. ಪಂಜಾಬ್ ಪೊಲೀಸರಿಗೆ ಮಾತ್ರ ಪ್ರಧಾನಿಯ ನಿಖರವಾದ ಮಾರ್ಗ ತಿಳಿದಿತ್ತು. ಅಂತಹ ಪೊಲೀಸರ ವರ್ತನೆಯನ್ನು ಎಂದಿಗೂ ನೋಡಿಲ್ಲ. ಇದು ಇತ್ತೀಚಿನ ವರ್ಷಗಳಲ್ಲಿ ಯಾವುದೇ ಭಾರತೀಯ ಪ್ರಧಾನ ಮಂತ್ರಿಯ ಭದ್ರತೆಯ ಏಕೈಕ ದೊಡ್ಡ ಲೋಪವಾಗಿದೆ.

ಇಂದು ಬೆಳಗ್ಗೆ ಬಟಿಂಡಾಗೆ ಬಂದಿಳಿದ ಪ್ರಧಾನಿ ಮೋದಿ ಹೆಲಿಕಾಪ್ಟರ್​ ಮೂಲಕ ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಬೇಕಾಗಿತ್ತು. ಆದರೆ ಹವಾಮಾನ ಸೂಕ್ತವಾಗಿ ಇಲ್ಲದ ಖಾರಣ ರಸ್ತೆ ಮಾರ್ಗದ ಮೂಲಕ ಪ್ರಧಾನಿಯನ್ನು ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಇದಕ್ಕೆ 2 ಗಂಟೆಗಳಿಂದ ಹೆಚ್ಚಿನ ಸಮಯ ಬೇಕು. ಪಂಜಾಬ್​ ಪೊಲೀಸರು ರಸ್ತೆ ಮಾರ್ಗದ ಪ್ರಯಾಣ ಸುರಕ್ಷಿತ ಎಂದು ಧೃಡೀಕರಿಸಿದ ಬಳಿಕವೇ ಪ್ರಧಾನಿ ಮೋದಿ ಅವರ ಕಾರು ಸ್ಮಾರಕದ ಕಡೆ ಹೊರಟಿತ್ತು ಎನ್ನಲಾಗಿದೆ.

ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿದ್ದ ಕಾರು ಫ್ಲೈ ಓವರ್​ನಲ್ಲಿ 15 – 20 ನಿಮಿಷ ನಿಂತಿದ್ದ ವಿಚಾರವಾಗಿ ಸ್ಪಷ್ಟನೆ ವರದಿ ಸಲ್ಲಿಸುವಂತೆ ಪಂಜಾಬ್​ ಪೊಲೀಸ್​ ಇಲಾಖೆಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

PM Modi stranded for 20 minutes as farmers block flyover, Punjab rally cancelled

ಇದನ್ನು ಓದಿ : fresh COVID cases : ದೇಶದಲ್ಲಿ ಒಂದೇ ದಿನ 58,097 ಹೊಸ ಕೋವಿಡ್​ ಪ್ರಕರಣಗಳು ವರದಿ

ಇದನ್ನೂ ಓದಿ : Sindhutai Sapkal : ಅನಾಥ ಮಕ್ಕಳ ತಾಯಿ , ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್​ ನಿಧನ

RELATED ARTICLES

Most Popular