Chinese Flag : ಚೀನಾ ಧ್ವಜ ಪ್ರದರ್ಶನ ವಿಡಿಯೋ ನಿಷೇಧವಿಲ್ಲ

ನವದೆಹಲಿ: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯ (Galwan Valley) ಅನಾಮಿಕ ಸ್ಥಳವೊಂದರಲ್ಲಿ ಚೀನಾ ಯೋಧರು (Chinese Soldiers) ತಮ್ಮ ದೇಶದ ಧ್ವಜ ಪ್ರದರ್ಶಿಸಿರುವ ವಿಡಿಯೋವನ್ನು ನಿಷೇಧಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಚೀನಾದ ಪ್ರದೇಶದಲ್ಲೇ ಧ್ವಜವನ್ನು (Chinese Flag) ಪ್ರದರ್ಶಿಸಲಾಗಿದೆ. ಅದರ ವಿಡಿಯೋ ಚಿತ್ರೀಕರಿಸಲಾಗಿದೆಯೇ ಹೊರತು ವಾಸ್ತವ ನಿಯಂತ್ರಣ ರೇಖೆಯ (ಎಲ್ಒಸಿ) ವಿವಾದಿತ ಸ್ಥಳದಲ್ಲಿ ಈ ಕಾರ್ಯ ಆಗಿಲ್ಲ. ಹೀಗಾಗಿ ಈ ವಿಡಿಯೋ ನಿಷೇಧಿಸುವ ಅಗತ್ಯವಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (IT Ministry) ಅಧಿಕಾರಿಗಳು ಹೇಳಿದ್ದಾರೆ.

ಗಲ್ವಾನ್ ಕಣಿವೆಯಲ್ಲಿ ಧ್ವಜ ಪ್ರದರ್ಶನದ ವಿಡಿಯೋವನ್ನು ಜನವರಿ 1ರಂದು ಚೀನಿ ಮಾಧ್ಯಮ ಹ್ಯಾಂಡ್ಲರ್ಗಳು ಟ್ವೀಟ್ ಮಾಡಿದ್ದರು. ಆದರೆ ಚೀನಾ ಸರ್ಕಾರ ಆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ವಾಸ್ತವವಾಗಿ ಹೊಸ ವರ್ಷದ ದಿನದಂದು ಎಲ್‌ಒಸಿಯ ವಿವಿಧ ಭಾಗಗಳಲ್ಲಿ ಭಾರತ ಮತ್ತು ಚೀನಿ ಸೈನಿಕರು ಸಿಹಿ ಹಾಗೂ ಇತರ ಉಡುಗೊರೆಗಳ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಗಲ್ವಾನ ಗಡಿಯಲ್ಲಿ ಹಾರಾಡದ ತಿರಂಗಾ:
ಚೀನಾದ ಅಪಪ್ರಚಾರದ ಹಿಕ್ಮತ್ತಿನ ಮಧ್ಯೆ ಹೊಸ ವರ್ಷದ ದಿನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ಹೆಮ್ಮೆಯಿಂದ ತ್ರಿವರ್ಣ ಧ್ವಜ ಹಾರಿಸಿದ ಫೋಟೊಗಳನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಸೋಮವಾರ ಬಿಡುಗಡೆ ಮಾಡಿದ್ದಾರೆ. ಇದು ಚೀನಿ ಅಪಪ್ರಚಾರಕ್ಕೆ ತಕ್ಕ ಉತ್ತರ ಎಂದು ಅಭಿಪ್ರಾಯಪಡಲಾಗಿದೆ.

ಇದನ್ನೂ ಓದಿ: PM Modi Lay Foundation Stone: ಮಣಿಪುರ, ತ್ರಿಪುರಾದಲ್ಲಿ ಸಾವಿರಾರು ಕೋಟಿ ರೂಪಾಯಿ ಕಾಮಗಾರಿಗಳಿಗೆ ಪ್ರಧಾನಿ ಚಾಲನೆ

ಇದನ್ನೂ ಓದಿ : gold mine collapse : ಸುಡಾನ್​​ನಲ್ಲಿ ಚಿನ್ನದ ಗಣಿ ಕುಸಿದು 38 ಮಂದಿ ಸಾವು…!

ಚೀನಾದ ಕ್ಸಿಯಾನ್​ ನಗರದಲ್ಲಿ ಕೊರೊನಾ ರಣಕೇಕೆ: ಮುಂದುವರಿದ ಲಾಕ್​ಡೌನ್​

ಕಳೆದ 10 ದಿನಗಳಿಂದ ಲಾಕ್​ಡೌನ್​ನಲ್ಲಿಯೇ ಇರುವ ಚೀನಾದ ಕ್ಸಿಯಾನ್​​ ನಗರದಲ್ಲಿ ಕೋವಿಡ್​ ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿಮೀರುತ್ತಲೇ ಇದೆ. ಹೊಸ ವರ್ಷದ ಬಳಿಕವಂತೂ ಕ್ಸಿಯಾನ್​​ನಲ್ಲಿ ಕೊರೊನಾ ರಣಕೇಕೆ ಮಿತಿಮೀರಿದ್ದು ಕೊರೊನಾ ಪ್ರಕರಣಗಳ ಸಂಖ್ಯೆ 1500ರ ಗಡಿ ದಾಟಿದೆ. ಚೀನಾ ದೇಶದ ಇತರೆ ಭಾಗಗಳಲ್ಲಿ 200 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಭಾನುವಾರ ಕ್ಸಿಯಾನ್​​ನ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕ್ಸಿಯಾನ್​ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಪ್ರಖ್ಯಾತ ಟೆರಾಕೋಟಾ ವಾರಿಯರ್​ ಮ್ಯೂಸಿಯಂನ ನೆಲೆಯಾಗಿದೆ. ಶನಿವಾರ ಕ್ಸಿಯಾನ್​​ನಲ್ಲಿ 122 ಸ್ಥಳೀಯವಾಗಿ ಹರುಡುವ ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾಯುವ್ಯ ಶಾಂಕ್ಸಿ ಪ್ರಾಂತ್ಯದ ರಾಜಧಾನಿಯಲ್ಲಿ ಕೊರೊನಾ ವೈರಸ್​ ಮತ್ತೆ ಜೀವ ತಳೆದಿರುವ ಬೆನ್ನಲ್ಲೇ ಡಿಸೆಂಬರ್​ 9ರಿಂದ ಇಲ್ಲಿಯವರೆಗೆ ಕ್ಸಿಯಾನ್​​ನಲ್ಲಿ ಒಟ್ಟು 1573 ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಹೊಸ ಪ್ರಕರಣಗಳಲ್ಲಿ 104 ಮಂದಿ ಕ್ವಾರಂಟೈನ್​ನಲ್ಲಿರುವಾಗ ಸೋಂಕು ಇರುವುದು ಪತ್ತೆಯಾಗಿದೆ. ಮತ್ತು 18 ನ್ಯೂಕ್ಲಿಯಿಕ್​ ಆ್ಯಸಿಡ್​ ಪರೀಕ್ಷೆ ವೇಳೆಯಲ್ಲಿ ತಿಳಿದುಬಂದಿದೆ. ಒಟ್ಟು 1573 ಪ್ರಕರಣಗಳಲ್ಲಿ 8 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 10 ಮಂದಿಯ ಸ್ಥಿತಿ ಗಂಭೀರವಾಗಿದೆ. ಇನ್ನುಳಿದವರು ಸೌಮ್ಯ ಹಾಗೂ ಲಕ್ಷಣ ರಹಿತ ಸೋಂಕನ್ನು ಹೊಂದಿದ್ದಾರೆ.
ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಾವಿರಾರು ಟನ್​ಗಟ್ಟಲೇ ಆಹಾರವನ್ನು ನಿವಾಸಿಗಳಿಗೆ ತಲುಪಿಸಲಾಗುತ್ತಿದೆ. ಆದರೂ 13 ಮಿಲಿಯನ್​ ಜನಸಂಖ್ಯೆ ಹೊಂದಿರುವ ಕ್ಸಿಯಾನ್​ ನಗರದಲ್ಲಿ ಆಹಾರ ಕೊರತೆಯ ಕೂಗು ಕೇಳಿ ಬರುತ್ತಿದೆ. ಕಳೆದ ಬಾರಿ ಕೂಡ 2019ರಲ್ಲಿ ಚೀನಾದಲ್ಲಿ ಮೊದಲ ಕೊರೊನಾ ಕೇಸ್​ಗಳು ವರದಿಯಾಗುತ್ತಿದ್ದ ವೇಳೆಯಲ್ಲಿ ಒಂದೇ ವಾರದಲ್ಲಿ 1 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದವು. ಕಳೆದ ಬಾರಿ ವುಹಾನ್​ ನಗರದಲ್ಲಿದ್ದ ಭೀಕರತೆ ಈ ಬಾರಿ ಕ್ಸಿಯಾನ್​ ನಗರದಲ್ಲಿ ಸಂಭವಿಸಿದೆ.

ಕ್ಸಿಚೆಂಗ್​ ಜಿಲ್ಲೆಯ ಅಧಿಕಾರಿಯೊಬ್ಬರು ಶನಿವಾರ 4100 ಟನ್​ ತರಕಾರಿಗಳನ್ನು ಸುಮಾರು 2,50,000 ನಿವಾಸಿಗಳಿಗೆ ತಲುಪಿಸಿದ್ದೇವೆ ಎಂದು ಹೇಳಿದರು. ಇನ್ನೊಬ್ಬ ಸ್ಥಳೀಯ ಅಧಿಕಾರಿ ನಗರದ ವಿಶೇಷ ಪ್ರದೇಶದಲ್ಲಿ ವಾಸಿಸುವವರಿಗೆ ಕನಿಷ್ಟ 1200 ಟನ್ ಮಾಂಸ, ಮೊಟ್ಟೆ, ಹಾಲು ಹಾಗೂ ತರಕಾರಿಗಳನ್ನು ತಲುಪಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Home Remedies For Acidity : ಆ್ಯಸಿಡಿಟಿ ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸಿಂಪಲ್​ ಮನೆಮದ್ದು

ಇದನ್ನೂ ಓದಿ : ಅಫ್ಘನ್​ ಮಹಿಳೆಯರ ದೂರ ಪ್ರಯಾಣಕ್ಕೆ ಶಾಕಿಂಗ್ ನಿಯಮ ಘೋಷಿಸಿದ ತಾಲಿಬಾನ್​..!

(Chinese Flag Not Unfurled In Galwan Valley Demilitarised Zone)

Comments are closed.