ದೇಶದಾದ್ಯಂತ ಹ್ಯಾಕರ್ ಗಳು ಸದ್ದು ಮಾಡುತ್ತಿರುವ ಬೆನ್ನಲ್ಲೇ ದೇಶದ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಖಾತೆ (PM Modi’s Twitter) ಹ್ಯಾಕ್ ಆಗಿದ್ದು, ಕೆಲಕಾಲ ಹ್ಯಾಕ್ ಮಾಡಿದ ಕಿಡಿಗೇಡಿಗಳು ಬಿಟ್ ಕಾಯಿನ್ ( Bitcoin ) ಬಗ್ಗೆ ಟ್ವೀಟ್ ಹರಿಬಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವೀಟ್ ರ್ ಖಾತೆ ( Twitter account hacked ) ಶನಿವಾರ ರಾತ್ರಿ ವೇಳೆ ಹ್ಯಾಕ್ ಆಗಿದೆ. ಈ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು
ತಕ್ಷಣ ಪ್ರಧಾನ ಮಂತ್ರಿಕಾರ್ಯಾಲಯ ಈ ವಿಚಾರವನ್ನು ಟ್ವಿಟರ್ ಸಂಸ್ಥೆಗೆ ತಿಳಿಸಿದ್ದು ತಕ್ಷಣವೇ ಕ್ರಮಕೈಗೊಂಡ ಟ್ವಿಟರ್ ಪ್ರಧಾನಿ ಮಂತ್ರಿ ನರೇಂದ್ರ್ ಮೋದಿಯವರ ಖಾತೆಯನ್ನು ಮರುಸ್ಥಾಪಿಸಿದೆ. ಟ್ವಿಟರ್ ಖಾತೆ ಹ್ಯಾಕ್ ಆಗಿದ್ದ ವೇಳೆ ಬಿಟ್ ಕಾಯಿನ್ ಕಾನೂನುಬದ್ಧಗೊಳಿಸಲಾಗಿದ್ದು, ಸರ್ಕಾರವೂ ಅಧಿಕೃತವಾಗಿ ೫೦೦ ಬಿಟ್ ಕಾಯಿನ್ ಖರೀದಿಸಿದೆ. ಇದನ್ನು ದೇಶದ ಜನತೆಗೆ ವಿತರಿಸಲಾಗುವುದು ಎಂದು ಟ್ವೀಟ್ ಮಾಡಲಾಗಿತ್ತು.ಮಾತ್ರವಲ್ಲ ಇದರ ಜೊತೆಗೆ ಬಿಟ್ ಕಾಯಿನ್ ಕುರಿತಾದ ಲಿಂಕ್ ನ್ನು ಶೇರ್ ಮಾಡಲಾಗಿತ್ತು.
ಟ್ವಿಟರ್ ಸಂಸ್ಥೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದು ಅಕೌಂಟ್ ನ್ನು ಮರುಸ್ಥಾಪಿಸಿದೆ.ಮಾತ್ರವಲ್ಲದೇ ಮಾಡಲಾಗಿದ್ದ ಟ್ವೀಟ್ ನ್ನು ಡಿಲೀಟ್ ಮಾಡಲಾಗಿದೆ. ಈ ಕುರಿತು ಪಿಎಂಓ ಕಚೇರಿ ಟ್ವೀಟ್ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್ ಅಕೌಂಟ್ ಕೆಲಕಾಲ ನಿಯಂತ್ರಣದಿಂದ ತಪ್ಪಿಹೋಗಿತ್ತು. ವಿಷಯವನ್ನು ಟ್ವೀಟರ್ ಗಮನಕ್ಕೆ ತರಲಾಗಿದ್ದು ಖಾತೆಯನ್ನು ತಕ್ಷಣವೇ ಸುರಕ್ಷಿತಗೊಳಿಸಲಾಗಿದೆ.
ಖಾತೆಗೆ ಧಕ್ಕೆ ಉಂಟಾಗಿರುವ ಅವಧಿಯಲ್ಲಿ ಹಂಚಿಕೆಯಾಗಿರುವ ಟ್ವೀಟ್ ಗಳನ್ನು ಕಡೆಗಣಿಸಬೇಕೆಂದು ವಿನಂತಿಮಾಡಿದೆ. ಪ್ರಧಾನಿ ನರೇಂದ್ರಮೋದಿ 7.3 ಕೋಟಿ ಫಾಲೋವರ್ಸ್ ಹೊಂದಿದ್ದು, ಮೋದಿಯವರ ಖಾತೆ ಎಷ್ಟು ಹೊತ್ತುಗಳ ಕಾಲ ನಿಯಂತ್ರಣ ತಪ್ಪಿತ್ತು ಎಂಬ ಮಾಹಿತಿ ಸಿಕ್ಕಿಲ್ಲ.
ಇನ್ನು ಮೋದಿ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿರೋ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ಕ್ರಿನ್ ಶಾಟ್ ಗಳು ಸಖತ್ ಹಂಚಿಕೆಯಾಗಿದೆ. ಅಲ್ಲದೇ #Hacked ಎಂಬ ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿತ್ತು. ಕೆಲವರು ಮೋದಿ ಅಕೌಂಟ್ ಹ್ಯಾಕ್ ಆಗಿರೋ ಸಂಗತಿ ಅರಿವಿಲ್ಲದೇ ಮೋದಿ ಬಿಟ್ ಕಾಯಿನ್ ಬಗ್ಗೆ ಟ್ವೀಟ್ ಮಾಡಿದ್ದಾರೆಂದು ಶೇರ್ ಮಾಡಿಕೊಂಡಿದ್ದರು.
ಇದನ್ನೂ ಓದಿ : Bitcoin : ಬಿಟ್‌ಕಾಯಿನ್ ಹೇಗಿರುತ್ತೆ? ಚಲಾವಣೆ – ವ್ಯವಹಾರ ಹೇಗೆ ಮಾಡುತ್ತಾರೆ ? ಈಗೇಕೆ ಹೆಚ್ಚು ಚರ್ಚೆಯಾಗುತ್ತಿದೆ ಈ ಕ್ರಿಪ್ಟೋಕರೆನ್ಸಿ
ಇದನ್ನೂ ಓದಿ : Bitcoin Case : ಕುತೂಹಲ ಹೆಚ್ಚಿಸಿದೆ ಬಿಟ್ ಕಾಯಿನ್ ಪ್ರಕರಣ : ಅಷ್ಟಕ್ಕೂ ಆರೋಪಿಗಳು ಕೊಟ್ಟ ಹೇಳಿಕೆಯಲ್ಲೇನಿದೆ
ಇದನ್ನೂ ಓದಿ : Twitter : ಭಾರತದಲ್ಲಿ ಅತಿ ಹೆಚ್ಚು ಅತಿ ಹೆಚ್ಚು ಲೈಕ್, ರಿಟ್ವೀಟ್ ಆದ ಟ್ವೀಟ್‌ಗಳಿವು
ಇದನ್ನೂ ಓದಿ : Karnataka New CM : ರಾಜ್ಯಕ್ಕೆ ಮತ್ತೆ ಹೊಸ ಸಿಎಂ : ಬೊಮ್ಮಾಯಿ ಹುದ್ದೆಗೆ ಕಂಟಕವಾಯ್ತು ಮಂಡಿನೋವು
(PM Modi’s Twitter account hacked, now restored tweet on Bitcoin deleted)