Dwarakish : ಕೋರ್ಟ್ ನಲ್ಲಿ ಬಯಲಾಯ್ತು ನಟನ ಅಸಲಿಯತ್ತು: ಇಳಿವಯಸ್ಸಿನಲ್ಲಿ ಸಂಕಷ್ಟಕ್ಕೆ ಸಿಲುಕಿದ ದ್ವಾರಕೀಶ್

ಸಾಲ ಸೇರಿದಂತೆ ಹಲವು ಸಮಸ್ಯೆಗಳಿಂದ ಈಗಾಗಲೇ ಬಳಲಿರೋ ಹಿರಿಯ ನಟ ಹಾಗೂ ನಿರ್ದೇಶಕ ದ್ವಾರಕೀಶ್ (Dwarakish) ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ತೆಗೆದುಕೊಂಡಿದ್ದನ್ನು ನಿರಾಕರಿಸಿ, ಸಾಲ‌ಕೊಟ್ಟವರ ಮೇಲೆ ಕೇಸ್ ಹಾಕಿದ ದ್ವಾರಕೀಶ್ ಗೆ ಕೋರ್ಟ್ ( Bangalore Sessions Court orders )ಶಾಕ್ ನೀಡಿದೆ.

2013 ರಲ್ಲಿ ಚಾರುಲತಾ ಸಿನಿಮಾ‌ ಬಿಡುಗಡೆ ವೇಳೆ ದ್ವಾರಕೀಶ್ ಕೆ.ಸಿ.ಎನ್.ಚಂದ್ರಶೇಖರ್ ಅವರಿಂದ 50 ಲಕ್ಷ ಸಾಲ ಪಡೆದುಕೊಂಡಿದ್ದರು. ಆದರೆ ಬಳಿಕ ಸಾಲದ ಮೊತ್ತದ ಹಿಂತಿರುಗಿಸದೇ ಸತಾಯಿಸಿದ್ದರು. ಅಷ್ಟೇ ಅಲ್ಲ ಕೆಎನ್ಸಿ ವಿರುದ್ಧವೇ ಕೊಲೆ ಯತ್ನದ ಆರೋಪ ಮಾಡಿದ್ದ ದ್ವಾರಕೀಶ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಇದಾದ ಬಳಿಕ ಮತ್ತೆ ಸಾಲ ಪಡೆದೇ ಇಲ್ಲವೆಂದು ಉಲ್ಟಾ ಹೊಡೆದಿದ್ದ ದ್ವಾರಕೀಶ್, 50 ಲಕ್ಷ ರೂಪಾಯಿ ಸಾಲ ಪಡೆಯುವ ವೇಳೆ ನೀಡಿದ್ದ ಚೆಕ್ ತಮ್ಮದಲ್ಲ ಎಂದು ವಾದಿಸಿದ್ದರು.

ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವೇಳೆ ನ್ಯಾಯಾಲಯದಲ್ಲಿಯೂ ಚೆಕ್ ಮೇಲಿನ ಸಹಿ ತಮ್ಮದಲ್ಲ ಎಂದು ದ್ವಾರಕೀಶ್ ವಾದಿಸಿದ್ದರು. ಬಳಿಕ ನ್ಯಾಯಾಲಯ ಸಹಿ ಬಗ್ಗೆ ತನಿಖೆಗೆ ಅದೇಶಿಸಿತ್ತು ಈ ತನಿಖೆಯಲ್ಲಿ ಪೋರೆನ್ಸಿಕ್ ಲ್ಯಾಬ್ ನಲ್ಲಿ ಸಹಿ ದ್ವಾರಕೀಶ್ ದೇ ಎಂಬುದು ಸಾಬೀತಾಗಿತ್ತು. ಹೀಗಾಗಿ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಲಯ 2019 ರಲ್ಲಿ ಅರ್ಜಿದಾರರ ಪರ ತೀರ್ಪು ನೀಡಿದ್ದ ನ್ಯಾಯಾಲಯ, ಕೆ.ಸಿ.ಎನ್ ಚಂದ್ರಶೇಖರ್ ಅವರಿಗೆ 52 ಲಕ್ಷ ರೂಪಾಯಿ ಸಾಲ ಮರುಪಾವತಿ ಮಾಡುವಂತೆ ಸೂಚಿಸಿತ್ತು.

ಆದರೆ ಆಗಲೂ ಕಾನೂನು ಸಮರದಿಂದ‌ ಹಿಂದೆ ಸರಿಯದ ದ್ವಾರಕೀಶ್ ಹಣ ಹಿಂತಿರುಗಿಸದೇ ಮತ್ತೆ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಪ್ರಕರಣದ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ಕೆಳ‌ ನ್ಯಾಯಾಲಯದ ನಿರ್ಧಾರವನ್ನು ಎತ್ತಿ ಹಿಡಿದಿದ್ದು ಒಂದು ತಿಂಗಳಲ್ಲಿ ಕೆಸಿಎನ್ ಚಂದ್ರಶೇಖರ್ ಅವರಿಗೆ ಹಣ ಹಿಂತಿರುಗಿಸುವಂತೆ ಅದೇಶಿಸಿದೆ.

ಸಂಜೀವ್ ಎಂಬುವವರು ಮಧ್ಯಸ್ಥಿಕೆ ಮಾಡಿ ಚಿತ್ರ ಬಿಡುಗಡೆ ವೇಳೆ ದ್ವಾರಕೀಶ್ ಗೆ ಹಣ ಕೊಡಿಸಿದ್ದರು. ಆದರೆ ಈಗ ದ್ವಾರಕೀಶ್ ಹಣ ಪಾವತಿಸದೇ ಕಾನೂನಿನ ನೆರವು ಪಡೆದು ಸೇಫ್ ಆಗಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರೋ ಸಂಜೀವ್ ಕೆ.ಸಿ.ಎನ್.ಚಂದ್ರಶೇಖರ್ ಈಗ ಇಲ್ಲ. ಆದರೆ ಅವರು ದ್ವಾರಕೀಶ್ ಕಷ್ಟಕ್ಕೆ ಹಣ ಕೊಟ್ಟಿದ್ದರು.ನನಗೆ ದ್ವಾರಕೀಶ್ ಮೇಲೆ ಕೋಪ ಇಲ್ಲ. ಆದರೆ ಈಗಲಾದರೂ ಚಂದ್ರಶೇಖರ್ ಅವರ ಕುಟುಂಬಕ್ಕೆ ಹಣ ಸಿಕ್ಕಿ ಸಹಾಯವಾಗಲಿ ಎಂಬುದು ನಮ್ಮ ಆಶಯ ಎಂದಿದ್ದಾರೆ.

ಇದನ್ನೂ ಓದಿ : Director Yash : ಡೈರೈಕ್ಟರ್ ಕ್ಯಾಪ್ ತೊಡ್ತಾರಾ ರಾಕಿಂಗ್ ಸ್ಟಾರ್ : ಯಶ್ ಹೇಳಿದ್ದೇನು ಗೊತ್ತಾ ?!

ಇದನ್ನೂ ಓದಿ : Puneeth Raj Kumar Dream : ಪುನೀತ್ ಕನಸು, ಗಾಜನೂರಿನಲ್ಲಿ ನಿರ್ಮಾಣವಾಗಲಿದೆ ಡಾ.ರಾಜ್ ಮ್ಯೂಸಿಯಂ

(Bangalore Sessions Court orders actor cum producer Dwarakish to repay debt 50 lakhs in one month)

Comments are closed.