ಗುಜರಾತ್: (PM Modi’s duty conscious) ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಶತಾಯುಷಿ ಹೀರಾಬೆನ್ ಮೋದಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಈಗಾಗಲೇ ತಾಯಿಯ ಅಂತಿಮ ವಿಧಿ ವಿಧಾನಗಳನ್ನು ಮುಗಿಸಿದ ಮೋದಿ ಅವರು ಎಂದಿನಂತೆ ಇಂದೂ ಕೂಡ ಕರ್ತವ್ಯ ನಿರತರಾಗಲಿದ್ದಾರೆ.
ತಾಯಿ ನಿದನರಾಗಿದ್ದರೂ ಕೂಡ ಎಂದಿನಂತೆ ಈ ಹಿಂದೆ ನಿಗದಿಪಡಿಸಿದ ಎಲ್ಲಾ ಕಾರ್ಯಕ್ರಮಗಳನ್ನು ನಡಸಿಕೊಡಲಿದ್ದಾರೆ. ಪಶ್ಚಿಮ ಬಂಗಾಳದ ಹೌರಾ, ಕೋಲ್ಕತ್ತಾದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ಸೇರಿದಂತೆ ನಮಾಮಿ ಗಂಗೆಯ ಅಡಿಯಲ್ಲಿ ರೈಲ್ವೆಯ ಇತರ ಅಭಿವೃದ್ಧಿ ಕಾರ್ಯಗಳು ಮತ್ತು ರಾಷ್ಟ್ರೀಯ ಗಂಗಾ ಕೌನ್ಸಿಲ್ ಸಭೆಯು ವೇಳಾಪಟ್ಟಿಯಂತೆ ನಡೆಯಲಿದೆ.
ಆದರೆ ಎಲ್ಲಾ ಕಾರ್ಯಕ್ರಮಗಳಲ್ಲಿ ಕೊಂಚ ಬದಲಾವಣೆಗಳಾಗಿದ್ದು, ಇಂದು ಪಶ್ಚಿಮ ಬಂಗಾಳದಲ್ಲಿ ವಿವಿದ ಅಭಿವೃದ್ದಿ ಯೋಜನೆಗಳನ್ನು ಉದ್ಘಾಟಿಸಬೇಕಿದ್ದ ಮೋದಿ (PM Modi’s duty conscious) ಅವರು ಇದೀಗ ಅಹಮದಾಬಾದ್ ಗೆ ತೆರಳಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಪಶ್ಚಿಮ ಬಂಗಾಳದಲ್ಲಿ 7,800 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಇಂದು (ಶುಕ್ರವಾರ) ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿ ಅವರು 7,800 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ಹಾಗೇ, ಹೌರಾ ಮತ್ತು ನ್ಯೂ ಜಲ್ಪೈಗುರಿಯನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಗೂ ಕೂಡ ಇದೇ ವೇಳೆಯಲ್ಲಿ ಚಾಲನೆ ನೀಡಲಿದ್ದಾರೆ. ಆದರೆ ಕೋಲ್ಕತ್ತಾದಲ್ಲಿ ನಡೆಯಲಿರುವ ರಾಷ್ಟ್ರೀಯ ಗಂಗಾ ಮಂಡಳಿಯ ಎರಡನೇ ಸಭೆಗೆ ನರೇಂದ್ರ ಮೋದಿ ಅವರು ಅಧ್ಯಕ್ಷತೆಯನ್ನು ವಹಿಸಿಮಕೊಳ್ಳಬೇಕಾಗಿತ್ತು. ಆದರೆ ತಾಯಿ ಅಗಲುವಿಕೆ ಹಿನ್ನಲೆಯಲ್ಲಿ ಇಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : Heeraben funeral: ಸಾಮಾನ್ಯರಲ್ಲಿ ಸಾಮಾನ್ಯರಂತೆ ನಡೆದ ಪ್ರಧಾನಿ ತಾಯಿಯ ಅಂತ್ಯಕ್ರೀಯೆ
ಇದನ್ನೂ ಓದಿ : Modi’s mother Heeraben passed away : ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ನಿಧನ : ಸಂತಾಪ ಸೂಚಿಸಿದ ಬಾಲಿವುಡ್ ದಿಗ್ಗಜರು
ಇದನ್ನೂ ಓದಿ : Heeraben Modi dies: ಪ್ರಧಾನಿ ಮೋದಿ ತಾಯಿ ನಿಧನ: ಸಿಎಂ ಬೊಮ್ಮಾಯಿ ಸೇರಿ ಹಲವು ಗಣ್ಯರು ಸಂತಾಪ
Modi, who has already completed his mother’s last rites, will be busy today as usual.