Pancharatna Yatra: ಎರಡು ಹೊಸ ದಾಖಲೆ ಬರೆದ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆ

ತುಮಕೂರು; Pancharatna Yatra: 2023ರ ಕರ್ನಾಟಕ ವಿಧಾನಸಭಾ ಚುನಾವಣೆ (Aseembly Election) ಪ್ರಯುಕ್ತ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ. ಮತದಾರರ ಗಮನ ಸೆಳೆಯಲು ಪಕ್ಷಗಳ ಮುಖಂಡರು ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಚಾರದ ಭಾಗವಾಗಿ ಪಂಚರತ್ನ ಯಾತ್ರೆ ಕೈಗೊಂಡಿದ್ದಾರೆ. ಅವರ ಈ ಯಾತ್ರೆಯು ಇದೀಗ ಹೊಸ ದಾಖಲೆಯನ್ನು ನಿರ್ಮಿಸಿದೆ.

ಕಳೆದ ನವೆಂಬರ್ 18ರಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿವಿಧ ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆ ಕೈಗೊಂಡಿದ್ದಾರೆ. ಈ ವೇಳೆ ಕುಮಾರಸ್ವಾಮಿ ಅವರಿಗೆ ಹಾಕಲಾದ ಸುಮಾರು 500 ಬಗೆಯ ವಿವಿಧ ಹಾರಗಳು ಗಿನ್ನಿಸ್ ರೆಕಾರ್ಡ್ ಮಾಡಿವೆ. ಪಂಚರತ್ನ ಯಾತ್ರೆ ವೇಳೆ ಕುಮಾರಸ್ವಾಮಿ ಅವರಿಗೆ ಅಭಿಮಾನಿಗಳು ಬೃಹತ್ ಗಾತ್ರದ ಹಾರಗಳ ಮೂಲಕ ಸ್ವಾಗತ ಕೋರಿದ್ದರು. ಈ ಹಾರಗಳು ಇದೀಗ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿವೆ. ಮೂಸಂಬಿ, ಕೊತ್ತಂಬರಿ, ಕಬ್ಬು, ಸೌತೆಕಾಯಿ, ಸೇಬು, ದಾಳಿಂಬೆ, ಕೊತ್ತಂಬರಿ ಸೊಪ್ಪು ಸೇರಿದಂತೆ ಹಲವು ಬಗೆಯ ತರಕಾರಿಗಳ 500ಕ್ಕೂ ಹೆಚ್ಚು ಬಗೆಯ ಹಾರಗಳನ್ನು ಕುಮಾರಸ್ವಾಮಿ ಅವರಿಗೆ ಹಾಕಲಾಗಿತ್ತು. ಇಡೀ ದೇಶದಲ್ಲಿ ಇಷ್ಟು ಬಗೆಯ ಹಾರಗಳನ್ನು ಹಾಕಿದ್ದು ಇದೇ ಮೊದಲು. ಹೀಗಾಗಿ ಈ ಪಂಚರತ್ನ ಯಾತ್ರೆ ದಾಖಲೆ ಬರೆದಿದ್ದು, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಿದೆ.

ಇದನ್ನೂ ಓದಿ: Dr. Vishnuvardhan Death Anniversary : ಡಾ. ವಿಷ್ಣುವರ್ಧನ್‌ 13ನೇ ವರ್ಷದ ಪುಣ್ಯಸ್ಮರಣೆ : ಸಾಹಸಸಿಂಹನ ಸ್ಮರಣೆಯಲ್ಲಿ ಅಭಿಮಾನಿಗಳು

ಏಷ್ಯಾ ಬುಕ್ ಆಫ್ ರೆಕಾ ರೆಕಾರ್ಡ್ಸ್ ತೀರ್ಪುಗಾರರಾದ ಮೋಹಿತ್ ಕುಮಾರ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ತೀರ್ಪುಗಾರರಾದ ಆರ್. ಹರೀಶ್ ಅವರು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ 2 ದಾಖಲೆಯ ಪತ್ರಗಳು ಹಾಗೂ ಮೆಡಲ್ ಗಳನ್ನು ನೀಡಿ ಗೌರವಿಸಿದ್ದಾರೆ.

ಕಳೆದ ನವೆಂಬರ್ 18ರಿಂದ ಆರಂಭಗೊಂಡ ಪಂಚರತ್ನ ಯಾತ್ರೆ ಇಂದು 34ನೇ ದಿನಕ್ಕೆ ಕಾಲಿಟ್ಟಿದೆ. ಇದರ ನೇತೃತ್ವ ವಹಿಸಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹಾಕಲಾದ ಹಾರಗಳ ಸಂಖ್ಯೆ 500ರ ಗಡಿ ದಾಟಿದೆ. ನಿನ್ನೆ ತುಮಕೂರು ಗ್ರಾಮಾಂತರ ಕ್ಷೇತ್ರ ಒಂದರಲ್ಲೇ 30ಕ್ಕೂ ಬೃಹತ್ ಹಾರಗಳನ್ನು ಹಾಕಿ ಗೌರವಿಸಲಾಗಿತ್ತು.

ಇದನ್ನೂ ಓದಿ: Student dies of fever: ಜ್ವರದಿಂದ ಆರನೇ ತರಗತಿ ಬಾಲಕ ಸಾವು

Pancharatna Yatra: Pancharatna Yatra led by HD Kumaraswamy who set two new records

Comments are closed.