ಸೋಮವಾರ, ಏಪ್ರಿಲ್ 28, 2025
HomeNationalಶಾಸಕ ಭೂಪೇಂದ್ರ ಪಟೇಲ್‌ಗೆ ಒಲಿದು ಬಂತು ಗುಜರಾತ್‌ ಸಿಎಂ ಪಟ್ಟ

ಶಾಸಕ ಭೂಪೇಂದ್ರ ಪಟೇಲ್‌ಗೆ ಒಲಿದು ಬಂತು ಗುಜರಾತ್‌ ಸಿಎಂ ಪಟ್ಟ

- Advertisement -

ಗಾಂಧಿನಗರ : ಗುಜರಾತ್‌ ಸಿಎಂ ಆಗಿದ್ದ ವಿಜಯ್‌ ರೂಪಾನಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ ಸಿಎಂ ಸ್ಥಾನಕ್ಕೆ ಅಚ್ಚರಿಯ ಹೆಸರನ್ನು ಘೋಷಣೆ ಮಾಡಿದೆ. ಗುಜರಾತ್‌ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್‌ ಅವರನ್ನು ಆಯ್ಕೆ ಮಾಡಿದೆ.

2017 ರಲ್ಲಿ ಮೊದಲ ಬಾರಿಗೆ ಭೂಪೇಂದ್ರ ಪಟೇಲ್ ಘಟ್ಲೋಡಿಯಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 1,17,000 ಮತಗಳ ಅಂತರದಿಂದ ಜಯಗಳಿಸಿದ್ದರು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಭೂಪೇಂದ್ರ ಪಟೇಲ್ ಅವರು ಗುಜರಾತ್ ನ 17ನೇ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: BIG BREAKING : ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ರಾಜೀನಾಮೆ

1.17 ಲಕ್ಷ ಮತಗಳ ಅಂತರದಿಂದ ಆನಂದಿಬೆನ್ ಅವರ ಘಟ್ಲೋಡಿಯಾ ಕ್ಷೇತ್ರದಿಂದ ಜಯಗಳಿಸಿದ್ದ ಭೂಪೇಂದ್ರ ಪಟೇಲ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಪಟೇಲ್ ಸಮುದಾಯಕ್ಕೆ ಬಿಜೆಪಿ ಮಣೆ ಹಾಕಿದೆ. ನಿರ್ಗಮಿತ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಭೂಪೆಂದ್ರ ಪಟೇಲ್ ಅವರ ಹೆಸರನ್ನು ಸೂಚಿಸಿದರು.

ಇದನ್ನೂ ಓದಿ: ಗುಜರಾತ್ ನ ಮುಂದಿನ ಸಿಎಂ ಯಾರಾಗಲಿದ್ದಾರೆ ? ಮುಖ್ಯಮಂತ್ರಿ ಹುದ್ದೆಗೆ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಯಾರದ್ದು ಗೊತ್ತಾ ?

(MLA Bhupendra Patel is CM of Gujarat)
RELATED ARTICLES

Most Popular