Prashant Kishor : ಕಾಂಗ್ರೆಸ್​ ಪಕ್ಷಕ್ಕೆ ಸೇರುವ ಆಹ್ವಾನ ತಿರಸ್ಕರಿಸಿದ ಪ್ರಶಾಂತ್​ ಕಿಶೋರ್​

Prashant Kishor : ಪುರಾತನ ಪಕ್ಷವಾದ ಕಾಂಗ್ರೆಸ್​ ಪಕ್ಷವನ್ನು ಪುನರುಜ್ಜೀವನಗೊಳಿಸಲು ಸಬಲೀಕರಣ ಕ್ರಿಯಾ ಗುಂಪಿನ ಭಾಗವಾಗಿ ಪಕ್ಷಕ್ಕೆ ಸೇರುವ ಬಗ್ಗೆ ತಿಂಗಳುಗಟ್ಟಲೇ ನಡೆಸಲಾಗಿದ್ದ ಮಾತುಕತೆಯನ್ನು ಅಂತ್ಯಗೊಳಿಸಿದ ಚುನಾವಣಾ ಚಾಣಾಕ್ಷ ಪ್ರಶಾಂತ್​ ಕಿಶೋರ್​ ಕಾಂಗ್ರೆಸ್​ ಸೇರ್ಪಡೆಯ ಆಹ್ವಾನವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಮುಂದಿನ ಸಾರ್ವತ್ರಿಕ ಚುನಾವಣೆಗೆ 137 ವರ್ಷಗಳಷ್ಟು ಹಳೆಯದಾದ ಕಾಂಗ್ರೆಸ್​ ಪಕ್ಷಕ್ಕೆ ಹೊಸ ಮುಖ ಹಾಗೂ ಕಾರ್ಯತಂತ್ರಗಳ ಅಗತ್ಯವಿದೆ ಎಂಬ ಅರಿವಿದ್ದರೂ ಸಹ ಪ್ರಶಾಂತ್​ ಕಿಶೋರ್​​ರಿಗೆ ಪಕ್ಷದಲ್ಲಿ ಮುಕ್ತ ಅಧಿಕಾರ ನಡೆಸಲು ಅವಕಾಶ ನೀಡಲು ಕಾಂಗ್ರೆಸ್​ ನಿರಾಕರಿಸಿತು ಎಂದು ಮೂಲಗಳು ತಿಳಿಸಿವೆ.


ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಹಾಗೂ ಚುನಾವಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಕಾಂಗ್ರೆಸ್​ನ ಪ್ರಸ್ತಾಪವನ್ನು ನಾನು ನಿರಾಕರಿಸಿದ್ದೇನೆ. ನನ್ನ ವಿನಮ್ರ ಅಭಿಪ್ರಾಯದ ಪ್ರಕಾರ ಪರಿವರ್ತನೆಯ ಸುಧಾರಣೆಗಳ ಮೂಲಕ ಆಳವಾಗಿ ಬೇರೂರಿರುವ ರಚನಾತ್ಮಕ ಸಮಸ್ಯೆಗಳನ್ನು ಸರಿಪಡಿಸಲು ಪಕ್ಷಕ್ಕೆ ನಾಯಕತ್ವ ಮತ್ತು ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯವಿದೆ. ,” ಕಾಂಗ್ರೆಸ್ ತನ್ನ ನಿರ್ಧಾರವನ್ನು ಘೋಷಿಸಿದ ಸ್ವಲ್ಪ ಸಮಯದ ನಂತರ ಪ್ರಶಾಂತ್​ ಕಿಶೋರ್​ ಈ ರೀತಿಯಾಗಿ ಟ್ವೀಟ್​ ಮಾಡಿದ್ದಾರೆ.


ಪ್ರಶಾಂ್​ ಕಿಶೋರ್​​ ಜೊತೆಗಿನ ಚರ್ಚೆಗಳನ್ನು ಅನುಸರಿಸಿ ಕಾಂಗ್ರೆಸ್​ ಅಧ್ಯಕ್ಷಕರು 2024ರ ಅಧಿಕಾರಯುತ ಕ್ರಿಯಾ ಗುಂಪನ್ನು ರಚಿಸಿದ್ದಾರೆ. ಹಾಗೂ ಈ ಗುಂಪಿನಲ್ಲಿ ನಿರ್ದಿಷ್ಟ ಜವಾಬ್ದಾರಿಯೊಂದಿಗೆ ಪಕ್ಷಕ್ಕೆ ಸೇರಲು ಪ್ರಶಾಂತ್​ ಕಿಶೋರ್​ರನ್ನು ಆಹ್ವಾನಿಸಲಾಗಿದೆ. ಆದರೆ ಈ ಆಹ್ವಾನವನ್ನು ಕಿಶೋರ್​ ನಿರಾಕರಿಸಿದ್ದಾರೆ. ಪ್ರಶಾಂತ್​ ಕಿಶೋರ್​ರ ಪ್ರಯತ್ನಗಳು ಹಾಗೂ ಪಕ್ಷಕ್ಕೆ ಅವರು ನೀಡಿದ ಸಲಹೆಗಳನ್ನು ನಾವು ಪ್ರಶಂಸಿಸುತ್ತೇವೆ ಎಂದು ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೇವಾಲಾ ಟ್ವೀಟ್​ ಮಾಡಿದ್ದಾರೆ.

ಇದನ್ನು ಓದಿ : psi appointment scam : ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್​ ಪಿನ್​ ರುದ್ರೇಗೌಡ ವಶಕ್ಕೆ

ಇದನ್ನೂ ಓದಿ : Aadhaar PAN link : ನಿಮ್ಮ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಆಗಿದೆಯಾ ? ಮೊಬೈಲ್‌ನಲ್ಲೇ ಚೆಕ್‌ ಮಾಡಿ

Prashant Kishor Declines Offer To Join Congress

Comments are closed.