Draupadi Murmu : ರಾಷ್ಟ್ರಪತಿ ಸ್ಥಾನಕ್ಕೆ ಬುಡಕಟ್ಟು‌ಮಹಿಳೆ: ಬಿಜೆಪಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ

ನವದೆಹಲಿ : ಮಿತ್ರಪಕ್ಷದ ಜೊತೆ ಸಭೆ ಬಳಿಕ ಬಿಜೆಪಿ ತನ್ನ ರಾಷ್ಟ್ರಪತಿ ಅಭ್ಯರ್ಥಿಯಾಗಿ ಜಾರ್ಖಂಡನ ಮಾಜಿ ರಾಜ್ಯಪಾಲರು ಹಾಗೂ ಬುಡಕಟ್ಟು ಸಮುದಾಯದ ಮಹಿಳೆ, ಬಿಜೆಪಿ ನಾಯಕಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದೆ. ತೀವ್ರ ಕುತೂಹಲ ಮೂಡಿಸಿದ್ದ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕೊನೆಗೊಂಡಿದ್ದು ಸಭೆ ಬಳಿಕ ಬಿಜೆಪಿಯ ವರಿಷ್ಠ ಜೆ.ಪಿ.ನಡ್ಡಾ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು (Draupadi Murmu) ಎಂದು ಘೋಷಿಸಿದ್ದಾರೆ.

ಜಾರ್ಖಂಡ ರಾಜ್ಯದ 9 ನೇ ರಾಜ್ಯಪಾಲೆಯಾಗಿಯೂ ಸೇವೆ ಸಲ್ಲಿಸಿದ್ದ ದ್ರೌಪದಿ ಮುರ್ಮು, ಒಡಿಸ್ಸಾದ ಮಾರ್ಯಾಭಾಂಜ್ ಜಿಲ್ಲೆಯವರಾಗಿದ್ದು ದಶಕಗಳಿಂದ ಬಿಜೆಪಿಯ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ದ್ರೌಪದಿ ಮುರ್ಮು ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದು, 2015 ರಿಂದ 2021 ರ ಅವಧಿವರೆಗೂ ಜಾರ್ಖಂಡ್ ನ ರಾಜ್ಯಪಾಲರಾಗಿದ್ದರು.‌ಮಾತ್ರವಲ್ಲ ರಾಜ್ಯಪಾಲರಾಗಿ ಐದು ವರ್ಷಗಳ ಅವಧಿ ಪೊರೈಸಿದ ಮೊದಲ ರಾಜ್ಯಪಾಲರು ಎಂಬ ಗೌರವಕ್ಕೂ ಭಾಜನರಾಗಿದ್ದಾರೆ.

ಜಾರ್ಖಂಡ್ ನ ರಾಮಾದೇವಿ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆದ 64 ವರ್ಷದ ದ್ರೌಪದಿ ಮುರ್ಮು, ಜೂನ್ 20 1958 ರಲ್ಲಿ ಜನಿಸಿದರು. ಮುರ್ಮು ಮೊದಲು ಶಿಕ್ಷಕಿಯಾಗಿದ್ದು ಬಳಿಕ ಬಿಜೆಪಿಯ ತತ್ವ ಸಿದ್ದಾಂತಗಳನ್ನು ಒಪ್ಪಿ ರಾಜಕೀಯಕ್ಕೆ ಪ್ರವೇಶಿಸಿದರು. ಸಕ್ರಿಯ ರಾಜಕಾರಣದಲ್ಲಿದ್ದ ದ್ರೌಪದಿ ಮುರ್ಮು, 2000 ಮತ್ತು 2009 ರಲ್ಲಿ ರೈರಂಗಪುರದಿಂದ ಚುನಾವಣೆಗೆ ಸ್ಪರ್ಧಿಸಿ ಎರಡು ಭಾರಿ ಶಾಸಕಿಯಾಗಿದ್ದರು.

ಮಾತ್ರವಲ್ಲ ಮುರ್ಮು ಓಡಿಶಾದಲ್ಲಿ ಸಾರಿಗೆ ಮತ್ತು ವಾಣಿಜ್ಯ ಇಲಾಖೆಗಳ ಸಚಿವರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಹೆಸರು ಪ್ರಕಟಿಸಿರೋದರಿಂದ ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗ್ತಿದೆ. ಆ ಮೂಲಕ ಬುಡಕಟ್ಟು ಜನಾಂಗದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದ್ದಾರೆ. ಈ‌ ಮೊದಲು ಬಿಜೆಪಿಯಿಂದ 20 ಹೆಸರುಗಳು ಚರ್ಚಿಸಲ್ಪಟ್ಟಿದ್ದು, ಕೊನೆಗೆ ದ್ರೌಪದಿ ಮುರ್ಮು ಹೆಸರು ಅಂತಿಮಗೊಂಡಿದೆ.

ಇನ್ನು ದ್ರೌಪದಿ ಮುರ್ಮು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಶ್ರೀಮತಿ ದ್ರೌಪದಿ ಮುರ್ಮುಜೀ ಅವರು ತಮ್ಮ ಸಮಾಜ ಸೇವೆ, ಬಡವರು, ದೀನ ದಲಿತರಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಶ್ರೀಮಂತ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ. ಮತ್ತು ಅತ್ಯುತ್ತಮ ರಾಜ್ಯಪಾಲರಾಗಿ ಅಧಿಕಾರ ಹೊಂದಿದ್ದರು.‌ ನಮ್ಮ ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.

ಇದನ್ನೂ ಓದಿ : Yashwant Sinha : ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿಯಾಗಿ ಯಶವಂತ್​ ಸಿನ್ಹಾ ಅಧಿಕೃತ ಘೋಷಣೆ

ಇದನ್ನೂ ಓದಿ : ಮೈಸೂರಿನ ಬೆಣ್ಣೆ ದೋಸೆ ತಿನ್ನಿ: ಮೋದಿಗೆ ಸ್ಯಾಂಡಲ್ ವುಡ್ ಸಲಹೆ

Presidential Election 2022: BJP announced Draupadi Murmu as candidate

Comments are closed.