ಸೋಮವಾರ, ಏಪ್ರಿಲ್ 28, 2025
HomeNationalPrime minister birthday: ಪ್ರಧಾನಿ ಹುಟ್ಟುಹಬ್ಬದಂದು ವಿಮಾನದ ಮೂಲಕ ಭಾರತಕ್ಕೆ ಬರಲಿವೆ ಎಂಟು ವಿಶೇಷ ಚಿರತೆ

Prime minister birthday: ಪ್ರಧಾನಿ ಹುಟ್ಟುಹಬ್ಬದಂದು ವಿಮಾನದ ಮೂಲಕ ಭಾರತಕ್ಕೆ ಬರಲಿವೆ ಎಂಟು ವಿಶೇಷ ಚಿರತೆ

- Advertisement -

ನವದೆಹಲಿ : ಪ್ರಧಾನಿ ಮೋದಿಯವರ ಹುಟ್ಟುಹಬ್ಬಕ್ಕೆ (Prime minister birthday) ನಮೀಬಿಯಾದಿಂದ ಎಂಟು ಚಿರತೆಗಳು ಭಾರತಕ್ಕೆ ಬರಲಿವೆ. ಇಂಟರ್‌-ಕಾಂಟಿನೆಂಟಲ್‌ ಟ್ರಾನ್ಸಲೊಕೇಶನ್‌ ಯೋಜನೆಯ ಭಾಗವಾಗಿ ಚಿರತೆಗಳನ್ನು ರಾಜಸ್ಥಾನದ ಜೈಪುರಕ್ಕೆ ತರಲಾಗುತ್ತಿದೆ. ನಮೀಬಿಯಾದ ರಾಜಧಾನಿಯಿಂದ ವಿಶೇಷ ವಿಮಾನದ ಮೂಲಕ ಸೆಪ್ಟೆಂಬರ್ 17 ರಂದು ಆಗಮಿಸಲಿವೆ. ನಂತರ B747 ಜಂಬೋ ಜೆಟ್‌ ಮೂಲಕ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತಲುಪಿಸಲಾಗುತ್ತದೆ.‌ ಈಗಾಗಲೇ ವಿಶೇಷ ವಿಮಾನ ನಮೀಬಿಯಾ ರಾಜಧಾನಿಗೆ ತಲುಪಿದೆ ಎಂದು ತಿಳಿದು ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನಾಚರಣೆಯಂದು ಐದು ಹೆಣ್ಣು ಮತ್ತು ಮೂರು ಗಂಡು ಒಟ್ಟು ಎಂಟು ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಿದ್ದಾರೆ. ನಮೀಬಿಯಾದಿಂದ ಚಿರತೆಗಳನ್ನು ಕರೆತರಲು ಈಗಾಗಲೇ ವಿಶೇಷ ವಿಮಾನ ಸಜ್ಜಾಗಿದೆ. ವಿಮಾನಗಳ ಹಾರಾಟದ ಸಮಯದಲ್ಲಿ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಚಿರತೆಯ ತೂಕವನ್ನು ಪರಿಶೀಲಿಸಿ, ಅವುಗಳಿಗೆ ಬೇಕಾದ ವಿಶೇಷ ಪಂಜರವನ್ನು ಸಜ್ಜುಗೊಳಿಸಲಾಗಿದೆ.

ವಿಮಾನವು 16 ಗಂಟೆಗಳವರೆಗೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಇಂಧನ ತುಂಬಲು ಎಲ್ಲೂ ನಿಲ್ಲಿಸದೆ ನಮೀಬಿಯಾದಿಂದ ಭಾರತಕ್ಕೆ ಹಾರಬಲ್ಲದು. ವಿಮಾನದ ಹೊರ ಭಾಗದಲ್ಲಿ ಹುಲಿಯ ಚಿತ್ರವನ್ನು ಬಿಡಿಸಲಾಗಿದೆ. ವಿಮಾನ ಹಾರಾಟದ ಸಮಯದಲ್ಲಿ ಚಿರತೆಗಳ ಯೋಗ ಕ್ಷೇಮ ವಿಚಾರಿಸಲು ವಿಶೇಷ ತಂಡವನ್ನು ಸಜ್ಜುಗೊಳಿಸಲಾಗಿದೆ. ಚಿರತೆಗಳ ಆರೋಗ್ಯದ ದೃಷ್ಟಿಯಿಂದ ಚಿರತೆಗಳು ಭಾರತಕ್ಕೆ ತಲುಪುವ ವರೆಗೂ ಯಾವುದೇ ಆಹಾರವನ್ನೂ ನೀಡದೇ ಇರಲು ತೀರ್ಮಾನಿಸಲಾಗಿದೆ ಎಂದು ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ವೆಂಟಿಲೇಟರ್‌ ಸ್ಥಗಿತ ಬಳ್ಳಾರಿ ವಿಮ್ಸ್‌ ಆಸ್ಪತ್ರೆಯಲ್ಲಿ 3 ರೋಗಿಗಳ ಸಾವು

ಇದನ್ನೂ ಓದಿ:ಕಬ್ಜ” ಬಗ್ಗೆ ಕ್ರೇಜ್‌ ಹುಟ್ಟಿಸಿದ ಕಿಚ್ಚ ಸುದೀಪ್

1948 ರಲ್ಲಿ ಛತ್ತೀಸ್ಗಢದ ಕೊರಿಯಾ ಜಿಲ್ಲೆಯ ಸಾಲ್‌ ಅರಣ್ಯದಲ್ಲಿ ಮಚ್ಚೆಯುಳ್ಳ ಚಿರತೆ ಸಾವನ್ನಪ್ಪಿತು. 1970 ರ ದಶಕದಿಂದ ದೇಶದ ಇತಿಹಾಸಿಕ ವಿಚಾರದಲ್ಲಿ ಇದು ಕೂಡ ಒಂದಾಗಿದೆ. ಇದೀಗ ಚಿರತೆಗಳನ್ನು ಭಾರತಕ್ಕೆ ತರಲು ಭಾರತ ಸರ್ಕಾರವು ನಮೀಬಿಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈಗಾಗಲೇ ಭಾರತ ಸರಕಾರ ವಿದೇಶಗಳಿಂದ ವಿಶೇಷ ಪ್ರಾಣಿಗಳನ್ನು ಹಲವು ಬಾರಿ ತರಿಸಿಕೊಂಡಿದೆ. ಅಲ್ಲದೇ ಭಾರತದಲ್ಲಿನ ಉದ್ಯಾನವನದಲ್ಲಿ ವಿದೇಶಿ ಪ್ರಾಣಿಗಳು ಕೂಡ ಕಾಣಸಿಗುತ್ತಿವೆ.

Prime minister birthday eight leopards arrive india

RELATED ARTICLES

Most Popular