ಸೋಮವಾರ, ಏಪ್ರಿಲ್ 28, 2025
HomeNationalನಿರ್ಮಾಣ ಹಂತದ ಕಟ್ಟದ ಕುಸಿದು 7 ಮಂದಿ ಕಾರ್ಮಿಕರು ದುರ್ಮರಣ

ನಿರ್ಮಾಣ ಹಂತದ ಕಟ್ಟದ ಕುಸಿದು 7 ಮಂದಿ ಕಾರ್ಮಿಕರು ದುರ್ಮರಣ

- Advertisement -

ಪುಣೆ : ನಿರ್ಮಾಣ ಹಂತದಲ್ಲಿದ್ದ ಕಟ್ಟಡವು ಕುಸಿತ ಕಂಡ ಪರಿಣಾಮ ಏಳು ಮಂದಿ ಕಾರ್ಮಿಕರು ಸಾವನ್ನಪ್ಪಿದ ದಾರುಣ ಘಟನೆಯು ಪುಣೆಯಲ್ಲಿ (under construction building collapses) ತಡರಾತ್ರಿ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ. ಪುಣೆಯ ಯೆರವಾಡಾದ ಶಾಸ್ತ್ರಿ ನಗರದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಹತ್ತು ಮಂದಿ ಕಾರ್ಮಿಕರು ಈ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು. ಇವರ ಮೇಲೆ ಕಟ್ಟಡವು ಕುಸಿದ ಪರಿಣಾಮ ಕಬ್ಬಿಣದ ರಾಡ್​​ಗಳಲ್ಲಿ ಕಾರ್ಮಿಕರು ಸಿಲುಕಿಕೊಂಡಿದ್ದರು ಎಂದು ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಸುನೀಲ್​ ಗಿಲ್ಬೈಲ್​ ಮಾಹಿತಿ ನೀಡಿದರು. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಕಟ್ಟಡ ನಿರ್ಮಾಣವಾಗುತ್ತಿದ್ದ ಸ್ಥಳದಲ್ಲಿ ಸೂಕ್ತವಾದ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದೇ ಇರುವುದೇ ಈ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಸ್ಥಳೀಯ ಶಾಸಕ ಸುನೀಲ್​​ ಟಿಂಗ್ರೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲನೆ ಮಾಡಿದರು. ಈ ಸ್ಥಳದಲ್ಲಿ ನಿರಂತರವಾಗಿ 24 ಗಂಟೆಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಹೀಗಾಗಿ ಕಾರ್ಮಿಕರು ಇಲ್ಲಿ ಎಷ್ಟು ದಿನಗಳ ಕಾಲ ಕೆಲಸ ಮಾಡುತ್ತಿದ್ದರು ಎಂಬುದರ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿಲ್ಲ. ಕಾರ್ಮಿಕರೆಲ್ಲ ಸಂಪೂರ್ಣ ದಣಿದಿದ್ದರು. ಇದು ಕೂಡ ದುರ್ಘಟನೆಗೆ ಕಾರಣವಾಗಿರಬಹುದು. ಗಾಯಗೊಂಡ ಕಾರ್ಮಿಕರು ಬಿಹಾರ ಮೂಲದವರು ಎಂದು ನನಗೆ ಇತರೆ ಕಾರ್ಮಿಕರು ತಿಳಿಸಿದ್ದಾರೆ ಎಂದು ಸ್ಥಳ ಪರಿಶೀಲನೆ ಬಳಿಕ ಶಾಸಕ ಸುನೀಲ್​ ಟಿಂಗ್ರೆ ಹೇಳಿದರು.

ಕಟ್ಟಡ ಕುಸಿತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಹೀಗಾಗಿ ಈ ಸಂಬಂಧ ತನಿಖೆ ಮುಂದುವರಿದಿದೆ. ಈ ನಡುವೆ ಪ್ರಧಾನಿ ಮೋದಿ ಕೂಡ ಘಟನೆ ಸಂಬಂಧ ವಿಷಾದ ವ್ಯಕ್ತಪಡಿಸಿದ್ದು ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿದ್ದಾರೆ.

ಇದನ್ನು ಓದಿ : Army Uniform : ಸೇನಾ ಸಮವಸ್ತ್ರ ಧರಿಸಿದ್ದ ಪ್ರಧಾನಿ ಮೋದಿಗೆ ಕೋರ್ಟ್​ನಿಂದ ನೋಟಿಸ್​​

ಇದನ್ನೂ ಓದಿ : ಮತ್ತೆ ಬಣ್ಣ ಹಚ್ಚಲು ಸಿದ್ಧವಾದ್ರು ರಮ್ಯ : ಮಾರ್ಚ್ ನಲ್ಲಿ ಅನೌನ್ಸ್ ಆಗುತ್ತೆ ಸ್ಯಾಂಡಲ್ ವುಡ್ ಕ್ವಿನ್ ಸಿನಿಮಾ

Pune: 7 labourers killed, 3 injured as under-construction building collapses

RELATED ARTICLES

Most Popular