ಬೈಂದೂರಲ್ಲಿ ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದ 300 ವಿದ್ಯಾರ್ಥಿಗಳು : ಕರಾವಳಿಯಲ್ಲಿ ಮುಂದುವರಿದ ಹಿಜಬ್‌ – ಕೇಸರಿ ಶಾಲು ವಿವಾದ

ಕುಂದಾಪುರ : ಕರಾವಳಿಯಲ್ಲೀಗ ಹಿಜಬ್‌ ಹಾಗೂ ಕೇಸರಿ ಶಾಲು ವಿವಾದ (Hijab Saffron Shawl issue) ಮುಂದುವರಿದಿದೆ. ಉಡುಪಿಯ ಸರಕಾರಿ ಕಾಲೇಜಿನಲ್ಲಿ ಹುಟ್ಟಿಕೊಂಡಿದ್ದ ವಿವಾದ ಇದೀಗ ಕುಂದಾಪುರಕ್ಕೆ ವ್ಯಾಪಿಸಿತ್ತು. ಇದೀಗ ಉಡುಪಿ ಜಿಲ್ಲೆಯ ಗಡಿ ಭಾಗ ಬೈಂದೂರಿನಲ್ಲಿಯೂ ಕೇಸರಿ ಶಾಲು ವಿವಾದ ಸೃಷ್ಟಿಸಿದೆ. ಬೈಂದೂರು ಸರಕಾರಿ ಶಾಲೆಯ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಹಾಜರಾಗಿದ್ರೆ, ಕುಂದಾಪುರದಲ್ಲಿ ಹಿಜಬ್‌ ಧರಿಸಿದ ವಿದ್ಯಾರ್ಥಿಗಳ ಜೊತೆಗೆ ಪೋಷಕರೂ ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂದು ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಬ್‌ ಧರಿಸಿ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕಾಲೇಜಿನ ಸುಮಾರು ೩೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ತೊಟ್ಟು ಬಂದಿದ್ದಾರೆ. ಈ ವೇಳೆಯಲ್ಲಿ ಕಾಲೇಜಿನ ಉಪನ್ಯಾಸಕರು ಸಮವಸ್ತ್ರ ಧರಿಸಿದ್ರೆ ಮಾತ್ರವೇ ತರಗತಿಗೆ ಪ್ರವೇಶ ನೀಡುವುದಾಗಿ ತಿಳಿಸಿದ್ದಾರೆ. ಈ ವೇಳೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಸಮವಸ್ತ್ರ ಕಡ್ಡಾಯವಾಗಿ ಜಾರಿಯಾಗುವ ವರೆಗೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಯೇ ತರಗತಿಗೆ ಹಾಜರಾಗುತ್ತಾರೆ ಎಂದಿದ್ದಾರೆ. ಈ ವೇಳೆಯಲ್ಲಿ ಉಪನ್ಯಾಸಕರು ಹಾಗೂ ಸಂಘಟನೆಯ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

ಕುಂದಾಪುರದಲ್ಲಿ ಪೋಷಕರ ಪ್ರತಿಭಟನೆ :

ಉಡುಪಿ ಸರಕಾರಿ ಕಾಲೇಜಿನಲ್ಲಿ ಹಿಜಬ್‌ ಧರಿಸಿ ತರಗತಿ ಪ್ರವೇಶಕ್ಕೆ ಕಾಲೇಜು ಆಡಳಿತ ಮಂಡಳಿ ನಿರ್ಬಂಧ ಹೇರಿತ್ತು. ಇದರ ಬೆನ್ನಲ್ಲೇ ವಿದ್ಯಾರ್ಥಿನಿಯೋರ್ವಳು ನ್ಯಾಯಾಲಯದ ಮೆಟ್ಟಿಲೇರಿದ್ದಳು. ಉಡುಪಿಯಲ್ಲಿ ವಿವಾದ ಶಾಂತವಾಯ್ತು ಅನ್ನೋ ಹೊತ್ತಲ್ಲೇ ವಿವಾದ ಕುಂದಾಪುರದ ಪದವಿ ಪೂರ್ವ ಕಾಲೇಜಿನಲ್ಲಿ ಕಾಣಿಸಿಕೊಂಡಿತ್ತು. ವಿದ್ಯಾರ್ಥಿನಿಯರು ಹಿಜಬ್‌ ಧರಿಸಿ ಕಾಲೇಜು ಪ್ರವೇಶಕ್ಕೆ ಅವಕಾಶ ಕೋರಿದ್ದರು. ಆದರೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ವಿವಾದ ಸೃಷ್ಟಿಸಿದ್ದರು. ನಿನ್ನೆ ಹಿಜಬ್‌ ಧರಿಸಿ ಕಾಲೇಜು ಪ್ರವೇಶಕ್ಕೆ ಪ್ರಾಂಶುಪಾಲರು ಗೇಟಿನಲ್ಲಿಯೇ ವಿದ್ಯಾರ್ಥಿಗಳನ್ನು ತಡೆದಿದ್ದರು. ಆದ್ರೆ ಇಂದು ವಿದ್ಯಾರ್ಥಿನಿಯರು ಹಿಜಬ್‌ ಧರಿಸಿ ಗೇಟ್‌ ದಾಟಿ ಮೈದಾನಕ್ಕೆ ಬಂದಿದ್ದರು. ವಿದ್ಯಾರ್ಥಿನಿಯರ ಜೊತೆಗೆ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮೈದಾನದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಉಡುಪಿ ಕಾಲೇಜಿನಲ್ಲಿ ಆರಂಭಗೊಂಡಿರುವ ವಿವಾದ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವುದರ ಬದಲು, ಹಿಜಬ್‌, ಕೇಸರಿ ಶಾಲೆಗೆ ಮಹತ್ವ ನೀಡುತ್ತಿರುವುದು ನಿಜಕ್ಕೂ ದುರಂತ. ಜನ ಸಾಮಾನ್ಯರು ಕೂಡ ಕಾಲೇಜಿಗಳಲ್ಲಿ ನಡೆಯುತ್ತಿರುವ ವಿವಾದದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ : ನೀವು ಕಾಲೇಜು ವಿದ್ಯಾರ್ಥಿಯೇ? ಕಲಿಕೆ ಜೊತೆ ಹಣ ಗಳಿಸಲು ಹೀಗೊಂದು ಆ್ಯಪ್ ಇದೆ

ಇದನ್ನೂ ಓದಿ : ಬಿಜೆಪಿಯಲ್ಲಿ ರೇಣುಕಾಚಾರ್ಯ ಹವಾ : ಡಿಕೆ ಸುರೇಶ್ ಗೆ ಟ್ವೀಟ್ ತಿರುಗೇಟಿಗೆ ಹೈಕಮಾಂಡ್ ಮೆಚ್ಚುಗೆ

(Hijab Saffron Shawl issue Continues in Byndoor Near Kundapur)

Comments are closed.