ಚಂಡೀಗಢ :Punjab CM Bhagwant Mann : ಪಂಜಾಬ್ ಸಿಎಂ ಭಗವಂತ್ ಮಾನ್ ಚಂಡೀಗಢದ ತಮ್ಮ ನಿವಾಸದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಡಾ. ಗುರುಪ್ರೀತ್ ಕೌರ್ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. 2015ರಲ್ಲಿ ತಮ್ಮ ಮೊದಲ ಪತ್ನಿಗೆ ಭಗವಂತ್ ಮಾನ್ ವಿಚ್ಚೇದನ ನೀಡಿದ್ದರು. 1993ರಲ್ಲಿ ಜನಿಸಿರುವ ಗುರುಪ್ರೀತ್ ಕೌರ್ 48 ವರ್ಷದ ಭಗವಂತ್ ಮಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ತಾಯಿ, ಸಹೋದರಿ , ಸಂಬಂಧಿಗಳು ಹಾಗೂ ಕೆಲವು ಅತಿಥಿಗಳು ಮಾತ್ರ ಹಾಜರಾಗಿದ್ದರು. ದೆಹಲಿ ಸಿಎಂ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹಾಗೂ ಅವರ ಕುಟುಂಬ ಮತ್ತು ಆಪ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಈ ಕಾರ್ಯಕ್ರಮದಲ್ಲಿ ಹಾಜರಿದ್ದು ನವಜೋಡಿಗಳಿಗೆ ಶುಭಹಾರೈಸಿದರು.
ಪಂಜಾಬ್ ಸಿಎಂ ಭಗವಂತ್ ಮಾನ್ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಡಾ. ಗುರುಪ್ರೀತ್ ಕೌರ್ ಬಗ್ಗೆ ಇಲ್ಲಿದೆ ಮಾಹಿತಿ :
ಡಾ.ಗುರುಪ್ರೀತ್ ಕೌರ್ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಹರಿಯಾಣ ಕುರುಕ್ಷೇತ್ರದ ಪೆಹೋವಾದಲ್ಲಿ ಜನಿಸಿದ ಗುರುಪ್ರೀತ್ ಕೌರ್ ಮುಲ್ಲಾನದ ಮಹಾರಾಜ ಮಾರ್ಕಂಡೇಶ್ವರ ವಿಶ್ವವಿದ್ಯಾಲಯದಲ್ಲಿ (ಎಂಎಂಯು) ಅಧ್ಯಯನ ಮಾಡಿದರು. ಗುರ್‌ಪ್ರೀತ್ ಚಿಕ್ಕಪ್ಪ, ಗುರ್ಜಿಂದರ್ ಸಿಂಗ್ ನಟ್ ಆಪ್ ಸದಸ್ಯರಾಗಿದ್ದಾರೆ.. ಮದುವೆ ಕುರಿತು ಮಾತನಾಡಿದ ಅವರು, ಸುಮಾರು ಎರಡು ವರ್ಷಗಳಿಂದ ಕುಟುಂಬಗಳ ನಡುವೆ ಮದುವೆ ಮಾತುಕತೆ ನಡೆಯುತ್ತಿತ್ತು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ. ಗುರುಪ್ರೀತ್ ಕೌರ್ 32 ವರ್ಷ ಪ್ರಾಯದವರಾಗಿದ್ದು ನಾಲ್ಕು ವರ್ಷಗಳ ಹಿಂದೆ ಎಂಬಿಬಿಎಸ್ ವ್ಯಾಸಂಗವನ್ನು ಪೂರ್ಣಗೊಳಿಸಿದ್ದಾರೆ. ಗುರುಪ್ರೀತ್ ತಂದೆ ಇಂದರ್ಜೀತ್ ಸಿಂಗ್ ನತ್ ಮಡನಾಪುರ ಗ್ರಾಮದ ಸರಪಂಚ್ ಆಗಿದ್ದರು.
ಗುರುಪ್ರೀತ್ ವೈದ್ಯಕೀಯ ವೃತ್ತಿಯನ್ನು ಅಭ್ಯಾಸ ಮಾಡುತ್ತಾ ಮೊಹಾಲಿಯಲ್ಲಿ ತಮ್ಮ ಸ್ವಂತ ಮನೆಯಲ್ಲಿ ಕುಟುಂಬಸ್ಥರ ಜೊತೆ ನೆಲೆಸಿದ್ದಾರೆ. ಗುರುಪ್ರೀತ್ ಇಂದರ್ಜೀತ್ ಸಿಂಗ್ರ ಮೂರನೆಯ ಮಗಳು ಎನ್ನಲಾಗಿದೆ. ಭಗವಂತ್ ಮಾನ್ ಪಂಜಾಬ್ನ ಸಿಎಂ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಗುರುಪ್ರೀತ್ ಕೌರ್ ಕೂಡ ಹಾಜರಾಗಿದ್ದರು. ಇದೇ ಕಾರ್ಯಕ್ರಮದಲ್ಲಿ ಭಗವಂತ್ ಮಾನ್ಗೆ ಮೊದಲ ಪತ್ನಿಯಿಂದ ಜನಿಸಿದ ಇಬ್ಬರು ಮಕ್ಕಳು ಕೂಡ ಆಗಮಿಸಿದ್ದರು. ಭಗವಂತ್ ಮಾನ್ಗೆ ಮದುವೆಯಾಗಲು ಅವರ ತಾಯಿ ಹಾಗೂ ಸಹೋದರಿ ಸೇರಿ ಗುರುಪ್ರೀತ್ ಕೌರ್ರನ್ನು ಆಯ್ಕೆ ಮಾಡಿದ್ದರು ಎನ್ನಲಾಗಿದೆ.
ಇದನ್ನು ಓದಿ : section 144 imposed : ಕೆರೂರಿನಲ್ಲಿ ಅನ್ಯಕೋಮಿನ ಸಂಘರ್ಷದ ವೇಳೆ ಚಾಕು ಇರಿತ : ನಿಷೇಧಾಜ್ಞೆ ಜಾರಿ
ಇದನ್ನೂ ಓದಿ : murdering Chandrasekhar Guruji : ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
Punjab CM Bhagwant Mann got married in a private ceremony today; lesser-known facts about his wife Gurpreet Kaur