MS Dhoni Turns 41: ಅಭಿಮಾನಿಗಳಿಂದ ನಿರ್ಮಾಣವಾಯಿತು 41 ಅಡಿಯ ಧೋನಿ ಕಟೌಟ್‌

ಎಂಎಸ್ ಧೋನಿ (MS Dhoni )ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರಬಹುದು ಆದರೆ ಅವರ ಕ್ರೇಜ್ ಆಟದ ತೀವ್ರ ಅಭಿಮಾನಿಗಳಲ್ಲಿ ಇನ್ನೂ ಜೀವಂತವಾಗಿದೆ. ಮಾಜಿ ಭಾರತೀಯ ನಾಯಕನಿಗೆ 41 ವರ್ಷವಾಗಿದ್ದು ,ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಅಭಿಮಾನಿಗಳು (Fans in Andhra Pradesh’s Vijaywada) ಧೋನಿ ಅವರ ಟ್ರೇಡ್‌ಮಾರ್ಕ್ ಹೆಲಿಕಾಪ್ಟರ್ ಶಾಟ್ (Helicopter shot) ಫೋಟೋದ 41 ಅಡಿ ಕಟೌಟ್ ನ ನಿರ್ಮಿಸಿದ್ದಾರೆ. 2011 ರ ವಿಶ್ವಕಪ್‌ನ ಅಂತಿಮ ಎಸೆತದಲ್ಲಿ ಧೋನಿ ತಮ್ಮ ಟ್ರೇಡ್‌ಮಾರ್ಕ್ ‘ಹೆಲಿಕಾಪ್ಟರ್ ಶಾಟ್’ ಜನಪ್ರಿಯವಾಗಿದೆ. ಕಟೌಟ್‌ನ ಫೋಟೋ ಇದೀಗ ವೈರಲ್ ಆಗಿದೆ.

ಭಾರತ ತಂಡದ ಅತೀ ಶ್ರೇಷ್ಠ ನಾಯಕ ಎಂಬ ಖ್ಯಾತಿಯನ್ನು ಹೊಂದಿರುವಂತಹ ಮಹೇಂದ್ರ ಸಿಂಗ್ ಧೋನಿ ಇಂದು ಹುಟ್ಟಿದ ದಿನ.ತಮ್ಮ ಮೆಚ್ಚಿನ ನಾಯಕ ಅಥವಾ ನಟ ಹುಟ್ಟಿದ ದಿನದಂದು ಅಭಿಮಾನಿಗಳ ವಿವಿಧ ರೀತಿಯಲ್ಲಿ ಅವರ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ ಆದರೆ ಎಂಎಸ್ ಧೋನಿ ವಿಶಿಷ್ಟವಾಗಿ ಹಾಗೂ ದಾಖಲೆಯನ್ನು ಕೂಡ ಮಾಡಿದ್ದಾರೆ , ಇನ್ನು ಅಪಾರವಾದ ಅಭಿಮಾನಿ ಬಳಗವಿದೆ. ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ ದೂರ ಸರಿದು 3 ವರ್ಷಗಳು ಆಗುವ ಸನಿಹಕ್ಕೆ ಬಂದಿದ್ದರೂ ಸಹ ಎಂಎಸ್ ಧೋನಿ ಅಭಿಮಾನಿಗಳ ಸಂಖ್ಯೆಯಲ್ಲಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.

2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ, ಧೋನಿ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಒಟ್ಟು 4 ಬಾರಿ ಟ್ರೋಫಿಯನ್ನು ಗೆಲ್ಲಿಸಿ ಯಶಸ್ವಿ ನಾಯಕನಾಗಿರುವ ಎಂಎಸ್ ಧೋನಿ 234 ಐಪಿಎಲ್ ಪಂದ್ಯಗಳನ್ನಾಡಿ 4978 ರನ್ ಕಲೆಹಾಕಿದ್ದಾರೆ.

ಹುಟ್ಟುಹಬ್ಬಕ್ಕಾಗಿ ಕಟ್ ಔಟ್ ನಿಲ್ಲಿಸುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. 2018ರಲ್ಲಿ ಎಂಎಸ್ ಧೋನಿ ಹುಟ್ಟುಹಬ್ಬಕ್ಕಾಗಿ ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಧೋನಿಯ ಕಟ್ ಔಟ್ ನಿಲ್ಲಿಸಲಾಗಿತ್ತು. ಕೇರಳದಲ್ಲಿ 35 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗಿತ್ತು ಹಾಗೂ ತಮಿಳುನಾಡಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೆರ್ಸಿ ತೊಟ್ಟಿದ್ದ ಎಂಎಸ್ ಧೋನಿಯ 30 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗಿತ್ತು. ಈ ಬಾರಿ ಆ ಎರಡೂ ಕಟ್ ಔಟ್‌ಗಳಿಗಿಂತ 41 ಅಡಿ  ಕಟ್ ಔಟ್ ನಿಲ್ಲಿಸಲಾಗಿದೆ.

ವರದಿಯ ಪ್ರಕಾರ ತಮ್ಮ ಕುಟುಂಬದೊಂದಿಗೆ ಲಂಡನ್ನಿನಲ್ಲಿ 41 ನೇ ಹುಟ್ಟುಹಬ್ಬವನ್ನ ಆಚರಿಸುತ್ತಿದ್ದಾರೆ. IPL ನಿಂದ CSK ಆರಂಭಿಕ ನಿರ್ಗಮನದ ನಂತರ, 2023 ರಲ್ಲಿ ತಂಡದ ಭವಿಷ್ಯದ ನಾಯಕನ ಬಗ್ಗೆ ಊಹಾಪೋಹಗಳು ಇದ್ದವು. ಆದಾಗ್ಯೂ, ಮುಂಬರುವ ಆವೃತ್ತಿಯಲ್ಲೂ ಅವರು ತಂಡವನ್ನು ಮುನ್ನಡೆಸುತ್ತಾರೆ ಎಂದು ಧೋನಿ ಖಚಿತಪಡಿಸುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದರು.

ಇದನ್ನೂ ಓದಿ :India Vs England T20 : ಇಂದು ಇಂಡಿಯಾ Vs ಇಂಗ್ಲೆಂಡ್ ಮೊದಲ ಟಿ20: ಹೀಗಿದೆ ಭಾರತ Playing XI

ಇದನ್ನೂ ಓದಿ :Shikhar Dhawan Captain: ಮತ್ತೆ ಕ್ಯಾಪ್ಟನ್ ಚೇಂಜ್, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಶಿಖರ್ ಧವನ್ ಟೀಮ್ ಇಂಡಿಯಾ ನಾಯಕ

ಇದನ್ನೂ ಓದಿ :MS Dhoni 41st birthday : ಎಂಎಸ್ ಧೋನಿಗೆ 41ನೇ ಹುಟ್ಟುಹಬ್ಬ: ವಿಶೇಷ ಗಿಫ್ಟ್‌ ಕೊಟ್ಟ ಪತ್ನಿ ಸಾಕ್ಷಿ, ರಿಷಬ್ ಪಂತ್

MS Dhoni turns 41: Fans celebrate MSD birthday with 41-feet high cutout

Comments are closed.