Punjab CM Bhagwant Mann : ನಾಳೆ ಎರಡನೇ ವಿವಾಹವಾಗಲಿದ್ದಾರೆ ಪಂಜಾಬ್​ ಸಿಎಂ ಭಗವಂತ್​ ಮಾನ್​

ಚಂಡೀಗಢ : Punjab CM Bhagwant Mann : ಪಂಜಾಬ್​ ಸಿಎಂ ಭಗವಂತ್​ ಮಾನ್​ ಅಧಿಕಾರವಹಿಸಿಕೊಂಡಾಗಿನಿಂದ ವಿಐಪಿ ಸಂಸ್ಕೃತಿಗೆ ರಾಜ್ಯದಲ್ಲಿ ಬ್ರೇಕ್​ ಹಾಕುವ ಮೂಲಕ ಸುದ್ದಿಯಾಗಿದ್ದಾರೆ. ಇದೀಗ ಪಂಜಾಬ್​ನ ಮುಖ್ಯಮಂತ್ರಿ ಹಾಗೂ ಆಮ್​ ಆದ್ಮಿ ಪಕ್ಷದ ನಾಯಕ ಭಗವಂತ್​ ಮಾನ್​​ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಾಳೆ ಪಂಜಾಬ್​ನ ಮುಖ್ಯಮಂತ್ರಿ ಭಗವಂತ್​ ಮಾನ್​ ಡಾ. ಗುರುಪ್ರೀತ್​ ಕೌರ್​ ಜೊತೆಯಲ್ಲಿ ಎರಡನೇ ವಿವಾಹವಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಚಂಡೀಘಡ್​ನಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಸೇರಿದಂತೆ ಹಲವು ನಾಯಕರು ಭಾಗಿಯಾಗುವ ನಿರೀಕ್ಷೆಯಿದೆ.


ಈ ಮೊದಲೇ ತಿಳಿಸಿದಂತೆ ಭಗವಂತ್​ ಮಾನ್​ಗೆ ಇದು ಎರಡನೇ ಮದುವೆ. ಆರು ವರ್ಷಗಳ ಹಿಂದೆ ಭಗವಂತ್​ ಮಾನ್​ ತಮ್ಮ ಮಾಜಿ ಪತ್ನಿ ಇಂದರ್​ಜೀತ್​ ಕೌರ್​ಗೆ ವಿಚ್ಛೇದನ ನೀಡುವ ಮೂಲಕ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದರು. ಪತಿಯಿಂದ ವಿಚ್ಛೇದನ ಪಡೆದ ಇಂದರ್​ಜೀತ್​ ಕೌರ್​ ತಮ್ಮ ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅಮೆರಿಕದಲ್ಲಿ ನೆಲೆಸಿದ್ದಾರೆ .


2015ರಲ್ಲಿ ಇಂದರ್ಜೀತ್​​ ಕೌರ್​ಗೆ ವಿಚ್ಛೇದನ ನೀಡುವ ಸಂದರ್ಭದಲ್ಲಿ ಭಗವಂತ್​ ಮಾನ್​ ಲೋಕಸಭಾ ಸಂಸದರಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ತಮ್ಮ ವಿಚ್ಛೇದನದ ವಿಚಾರವಾಗಿ ಮಾತನಾಡಿದ್ದ ಇಂದರ್​ಜೀತ್​ ಕೌರ್​, ಸಂಗ್ರೂರ್​​ ಲೋಕಸಭಾ ಕ್ಷೇತ್ರದಿಂದ ಚುನಾಯಿತನಾಗಿರುವ ನಾನು ಸಾರ್ವಜನಿಕರ ಪ್ರತಿನಿಧಿಯಾಗಿರುವುದರಿಂದ ನನಗೆ ಅಮೆರಿಕಕ್ಕೆ ಹೋಗಿ ನೆಲೆಸಲು ಸಾಧ್ಯವಾಗುವುದಿಲ್ಲ. ಇಂದರ್​ಜಿತ್​ ಕೌರ್​ಗೆ ಅಮೆರಿಕವನ್ನು ಬಿಟ್ಟು ಭಾರತಕ್ಕೆ ಬಂದು ನೆಲೆಸಲು ಒಪ್ಪಿಗೆಯಿಲ್ಲ. ಹೀಗಾಗಿ ನಾವು ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ಹೇಳಿದ್ದರು.

ವಿಚ್ಛೇದನದ ಬಳಿಕವೂ ಭಗವಂತ್​ ಮಾನ್​ ತಮ್ಮ ಮಾಜಿ ಪತ್ನಿಯ ತಾಯಿ ಹಾಗೂ ತನ್ನಿಬ್ಬರು ಮಕ್ಕಳ ಜೊತೆಯಲ್ಲಿ ಅನ್ಯೋನ್ಯ ಸಂಬಂಧವನ್ನು ಹೊಂದಿದ್ದಾರೆ. ಪಂಜಾಬ್​ನ ಮುಖ್ಯಮಂತ್ರಿಯಾಗಿ ಭಗವಂತ್​ ಮಾನ್​ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಇಬ್ಬರು ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದನ್ನು ಓದಿ : Racist Abuse : ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತೀಯರಿಗೆ ಇಂಗ್ಲೀಷರಿಂದ ಜನಾಂಗೀಯ ನಿಂದನೆ !

ಇದನ್ನೂ ಓದಿ : Chandrasekhar Guruji : ಚಂದ್ರಶೇಖರ್​ ಗುರೂಜಿ ಯಾರು : ಇವರ ಹಿನ್ನೆಲೆ ಏನು, ಇಲ್ಲಿದೆ ಮಾಹಿತಿ

Punjab CM Bhagwant Mann set to tie the knot for second time in private ceremony tomorrow

Comments are closed.