ನವದೆಹಲಿ:Rajnath Singh: ಕಾಶ್ಮೀರದ ವಿಚಾರದಲ್ಲಿ ಭಾರತದ ಜೊತೆಗೆ ಸದಾ ಕ್ಯಾತೆ ತೆಗೆಯುವ ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡ ಬಳಿಕವೇ 2019ರ ಆ.5ರಂದು ಆರಂಭಗೊಂಡಿರುವ ಜಮ್ಮು-ಕಾಶ್ಮೀರ ಇಂಟಿಗ್ರೇಷನ್ ಪೂರ್ಣಗೊಳ್ಳಲಿದೆ ಎಂದಿದ್ದಾರೆ.
ಶೌರ್ಯ ದಿವಸ್ ಆಚರಣೆಯಲ್ಲಿ ಮಾತನಾಡಿದ ಅವರು ಪಾಕ್ ಆಕ್ರಮಿತ ಕಾಶ್ಮೀರದ ಜನರು ಪಾಕಿಸ್ತಾನದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ, ಇನ್ನೊಂದೆಡೆ ಕಾಶ್ಮೀರ, ಲಡಾಕ್ ಜನರು 2019ರಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಾರೆ. ನಾವು ಜಮ್ಮು, ಕಾಶ್ಮೀರ. ಲಡಾಕ್ ಗಳ ಅಭಿವೃದ್ಧಿಯ ಪಯಣವನ್ನು ಈಗಷ್ಟೇ ಪ್ರಾರಂಭಿಸಿದ್ದೇವೆ. ಗಿಲ್ಗಿಟ್, ಬಾಲ್ಟಿಸ್ತಾನ್ ತಲುಪಿದಾಗ ನಮ್ಮ ಗುರಿಯನ್ನು ಸಾಧಿಸುತ್ತೇವೆ. ಇದು ಕೇವಲ ಆರಂಭವಷ್ಟೆ. ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್, ಬಾಲ್ಟಿಸ್ತಾನ್, ಮತ್ತು ಪಿಒಕೆ ಪ್ರದೇಶಗಳು ಭಾರತದೊಂದಿಗೆ ವಿಲೀನಗೊಳ್ಳುವ ದಿನಗಳು ದೂರವಿಲ್ಲ. 1947ರ ನಿರಾಶ್ರಿತರು ತಮ್ಮ ಜಮೀನು ಮತ್ತು ಮನೆಗಳನ್ನು ಹಿಂಪಡೆಯಲಿದ್ದಾರೆ ಎಂದರು.
Attended the ‘Shaurya Diwas’ celebrations in Srinagar to commemorate 75th year of air landed operations of Indian Army in Kashmir. ⁰
— Rajnath Singh (@rajnathsingh) October 27, 2022
J&K has entered a new era of peace & prosperity following abrogation of Article 370.https://t.co/RIdpPr1i4V pic.twitter.com/c0pM3VcXcG
ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಭಾರತವನ್ನು ಟಾರ್ಗೆಟ್ ಮಾಡುವುದೇ ಭಯೋತ್ಪಾದಕರ ಗುರಿ ಆಗಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನವು ಮಿತಿ ಮೀರಿ ವರ್ತಿಸುತ್ತಿದೆ. ಪಾಕ್ ಆಕ್ರಮಿಕ ಕಾಶ್ಮೀರದಲ್ಲಿರುವ ಜನರಿಗೆ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಇದಕ್ಕೆ ನೀವೇನು ಹೇಳುತ್ತೀರಿ ಎಂದು ಮಾನವ ಹ್ಕುಗಳ ಉಲ್ಲಂಘನೆ ಕುರಿತು ಮೊಸಳೆ ಕಣ್ಣೀರು ಸುರಿಸುವ ಪಾಕಿಸ್ತಾನಕ್ಕೆ ನಾನು ಕೇಳಲು ಬಯಸುತ್ತೇನೆ. ಪಾಕಿಸ್ತಾನವು ಈ ಪ್ರದೇಶಗಳನ್ನು ಅಕ್ರಮ ರೀತಿಯಲ್ಲಿ ವಶಪಡಿಸಿಕೊಂಡು ದ್ವೇಷವನ್ನು ಬಿತ್ತುವ ಕೆಲಸ ಮಾಡಿದೆ. ಪಿಒಕೆ ಜನರ ಮೇಲೆ ನಡೆಸಿಕೊಂಡು ಬಂದಿರುವ ದೌರ್ಜನ್ಯ, ದಮನಕಾರಿ ನೀತಿಗೆ ಪಾಕಿಸ್ತಾನವು ತಕ್ಕ ಬೆಲೆಯನ್ನು ತೆರುವ ದಿನಗಳು ದೂರವಿಲ್ಲ ಎಂದು ರಾಜನಾಥ್ ಸಿಂಗ್ ಖಡಕ್ ವಾರ್ನಿಂಗ್ ನೀಡಿದರು. ಈ ಮೂಲಕ ಪಿಒಕೆಯನ್ನು ಮರಳಿ ಸ್ವಾಧೀನ ಮಾಡಿಕೊಳ್ಳುವುದಾಗಿ 1994ರಲ್ಲಿ ಸಂಸತ್‍ನಲ್ಲಿ ಅಂಗೀಕರಿಸಿದ ನಿರ್ಣಯವನ್ನು ರಾಜನಾಥ್ ಸಿಂಗ್ ಉಲ್ಲೇಖಿಸಿದರು.
Rajnath Singh: Rajnath Singh hints at taking back Pakistan-occupied Kashmir