Bird flu outbreak confirmed : ಕೇರಳದ ವಿವಿಧೆಡೆ ಹಕ್ಕಿ ಜ್ವರದ ಪ್ರಕರಣಗಳು ದೃಢ : 20 ಸಾವಿರಕ್ಕೂ ಅಧಿಕ ಪಕ್ಷಿಗಳ ಮಾರಣಹೋಮ

ಕೇರಳ : Bird flu outbreak confirmed : ಕೇರಳದ ಅಲಪ್ಪುಳ ಜಿಲ್ಲೆಯ ಹರಿಪಾಡ್​ನಲ್ಲಿ ಹಕ್ಕಿ ಜ್ವರದ ಪ್ರಕರಣ ಏಕಾಏಕಿ ಧೃಡಪಟ್ಟ ಬಳಿಕ ಜಿಲ್ಲಾಡಳಿತವು ಇಂದು ಈ ಪ್ರದೇಶದಲ್ಲಿ ಸುಮಾರು 20 ಸಾವಿರ ಪಕ್ಷಗಳನ್ನು ಕೊಲ್ಲಲು ಆದೇಶ ನೀಡಿದೆ. ಹರಿಪಾದ್​ನ ವಝುತಾನಂ ಪಡಿಂಜಾರೆ ಹಾಗೂ ವಝುತಾನಂ ವಡಕ್ಕೆಯಲ್ಲಿ ಸತ್ತ ಬಾತುಕೋಳಿಗಳಲ್ಲಿ ಜ್ವರ ಪತ್ತೆಯಾಗಿದೆ. ಈ ಬಾತುಕೊಳಿಗಳಲ್ಲಿ ಇನ್​ಫ್ಲುಯೆಂಜಾ ಎ ವೈರಸ್​​ನ ಹೆಚ್​5ಎನ್​1 ಉಪವಿಭಾಗ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವಿ. ಆರ್​ ಕೃಷ್ಣತೇಜ ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಕಳೆದ ವಾರ ರೈತರು ಹಕ್ಕಿ ಜ್ವರದ ಕಾರಣದಿಂದಾಗಿ 1500 ಬಾತುಕೋಳಿಗಳನ್ನು ಕಳೆದುಕೊಂಡಿದ್ದಾರೆ. ಸತ್ತ ಬಾತುಕೋಳಿಗಳ ಮಾದರಿಗಳನ್ನು ಭೋಪಾಲ್​ನಲ್ಲಿರುವ ರಾಷ್ಟ್ರೀಯ ಹೈ ಸೆಕ್ಯೂರಿಟಿ ಅನಿಮಲ್​ ಡಿಸೀಸ್​​ಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷೆಯ ಫಲಿತಾಂಶದಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ.


ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕಿ ಬಿಂದು ಈ ವಿಚಾರವಾಗಿ ಮಾತನಾಡಿದ್ದು, ಸರಿ ಸುಮಾರು 20 ಸಾವಿರ ಬಾತುಕೋಳಿಗಳನ್ನು ಕೊಲ್ಲಲು ಆದೇಶ ನೀಡಲಾಗಿದೆ. ಇಂದು ಬೆಳಗ್ಗೆಯಿಂದ ಹಕ್ಕಿಗಳನ್ನು ಕೊಲ್ಲುವ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಈ ನಡುವೆ ಜಿಲ್ಲಾಧಿಕಾರಿಗಳು ಹಕ್ಕಿ ಜ್ವರ ಪೀಡಿತ ಪ್ರದೇಶದಿಂದ ಯಾವುದೇ ಹಕ್ಕಿಗಳನ್ನು ಸ್ಥಳಾಂತರಿಸುವುದನ್ನು ನಿಷೇಧಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್​ ತಿಂಗಳಲ್ಲಿ ಆಲಪ್ಪುಳ, ಕೊಟ್ಟಾಯಂ ಹಾಗೂ ಪತ್ತನಂತಿಟ್ಟ ಪ್ರದೇಶಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿತ್ತು. ಇದಕ್ಕೂ ಮುನ್ನ ಜುಲೈ ತಿಂಗಳಲ್ಲಿ ಕೋಝಿಕೋಡದಲ್ಲಿ ಹಕ್ಕಿ ಜ್ವರ ಪ್ರಕರಣ ವರದಿಯಾಗಿತ್ತು,ಜ್ವರದಿಂದಾಗಿ 300ಕ್ಕೂ ಹೆಚ್ಚು ಪಕ್ಷಿಗಳು ಮೃತಪಟ್ಟಿದ್ದವು.


ವೈದ್ಯಕೀಯ ತಜ್ಞರ ಹೇಳಿಕೆ ಪ್ರಕಾರ ಹೆಚ್​5 ಎನ್​ 1 ಅಥವಾ ಹೆಚ್​​8ಎನ್​8 ಸಾಮಾನ್ಯವಾಗಿ ಹಕ್ಕಿ ಜ್ವರ ಎಂದು ಕರೆಯಲಾಗುತ್ತದೆ. ಈ ಸೋಂಕು ಪಕ್ಷಿಗಳ ಹಿಕ್ಕೆಗಳು, ಲಾಲಾರಸ ಹಾಗೂ ಸ್ರವಿಸುವಿಕೆಯ ಮೂಲಕ ಹರಡುತ್ತದೆ. ಆದರೆ ಹೆಚ್​​5 ಎನ್​8 ವೈರಸ್​ನಿಂದ ಮನುಷ್ಯರಿಗೆ ಸೋಂಕು ತಗಲುವ ಸಾಧ್ಯತೆ ಕಡಿಮೆ. 2016ರ ವರದಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಇಲ್ಲಿಯವರಗೆ ಹೆಚ್​​5 ಎನ್​​8ನ ಯಾವುದೇ ಮಾನವ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ : Head Bush issue solved: ‘ಹೆಡ್ ಬುಶ್’ ವಿವಾದ ಅಂತ್ಯ; ಕ್ಷಮೆ ಕೋರಿ ಆಕ್ಷೇಪಾರ್ಹ ಪದ ತೆಗೆಯಲು ಒಪ್ಪಿದ ಚಿತ್ರತಂಡ

ಇದನ್ನು ಓದಿ : murder:ಅನೈತಿಕ ಸಂಬಂಧಕ್ಕೆ ಶುರುವಾದ ಅನುಮಾನ ಕೊಲೆಯಲ್ಲಿ ಅಂತ್ಯ: ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ

Bird flu outbreak confirmed in Kerala’s Haripad, 20000 ducks to be culled

Comments are closed.