ಸೋಮವಾರ, ಏಪ್ರಿಲ್ 28, 2025
HomeNationalRave Party Raid :ಸಮುದ್ರ ಮಧ್ಯೆ ಕ್ರೂಸ್‌ನಲ್ಲಿ ರೇವ್ ಪಾರ್ಟಿ : ಸ್ಟಾರ್‌ ನಟ ಪುತ್ರ,...

Rave Party Raid :ಸಮುದ್ರ ಮಧ್ಯೆ ಕ್ರೂಸ್‌ನಲ್ಲಿ ರೇವ್ ಪಾರ್ಟಿ : ಸ್ಟಾರ್‌ ನಟ ಪುತ್ರ, 10 ಮಂದಿ ಬಂಧನ

- Advertisement -

ಮುಂಬೈ : ಸಮುದ್ರದ ಮಧ್ಯದಲ್ಲಿ ಕ್ರೂಸ್‌ನಲ್ಲಿ ರೇವ್‌ ಪಾರ್ಟಿ ನಡೆಸುತ್ತಿದ್ದ ಸ್ಟಾರ್‌ ನಟನ ಮಗ ಹಾಗೂ 10 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಮುಂಬೈನ ಪಶ್ಚಿಮ ಕರಾವಳಿಯಲ್ಲಿ ನಡೆದಿದಿದೆ.

ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಕ್ರೂಸ್‌ನಲ್ಲಿ ಡ್ರಗ್ಸ್‌ ಪಾರ್ಟಿ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಮುಂಬೈನ ಎನ್‌ಸಿಬಿ ಅಧಿಕಾರಿಗಳ ತಂಡ ದಾಳಿಯನ್ನು ನಡೆಸಿದೆ. ದಾಳಿಯ ವೇಳೆಯಲ್ಲಿ ಅಪಾರ ಪ್ರಮಾಣದ ಕೊಕೇನ್, ಹಶಿಶ್, ಗಾಂಜಾ, ಎಂಡಿ ಮತ್ತು ಇತರ ಮಾದಕ ದ್ರವ್ಯಗಳನ್ನು ದಾಳಿಯ ವೇಳೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪಾರ್ಟಿ ಯಲ್ಲಿ ಭಾಗಿಯಾಗಿದ್ದ 10 ಮಂದಿಯ ಪೈಕಿ ಸ್ಟಾರ್‌ ನಟ ಮಗನನ್ನೂ ಕೂಡ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಕ್ರೂಸ್‌ನಲ್ಲಿ ಡ್ರಗ್ಸ್‌, ರೇವ್‌ ಪಾರ್ಟಿ ಮಾಡುತ್ತಿದ್ದ ಕೆಲವು ವ್ಯಕ್ತಿಗಳನ್ನು ಬಂಧಿಸಿದ್ದೇವೆ. ಈ ವೇಳೆಯಲ್ಲಿ ಡ್ರಗ್ಸ್‌ ಪತ್ತೆಯಾಗಿದೆ. ಈ ಕುರಿತು ಹಲವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದೇವೆ ಎಂದು ಎನ್‌ಐಸಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಹೇಳಿದ್ದಾರೆ. ಆದರೆ ಡ್ರಗ್ಸ್‌ ವಿರೋಧಿ ಏಜೆನ್ಸಿ ಅಥವಾ ಯಾವುದೇ ಬಾಲಿವುಡ್‌ ಸೆಲೆಬ್ರಿಟಿಗಳನ್ನು ಬಂಧಿಸಿದ್ದಾರೆಯೇ ಅನ್ನೋ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ : Good News : ಕೋವಿಡ್-19ನಿಂದ ಕೆಲಸ ಕಳೆದು ಕೊಂಡವರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್

ಕಳೆದೊಂದು ವರ್ಷದಿಂದಲೂ ಮುಂಬೈನಲ್ಲಿ ಮಾಧಕವಸ್ತು ಜಾಲದ ಬೆನ್ನು ಬಿದ್ದಿರುವ ಎನ್‌ಸಿಬಿ ಅಧಿಕಾರಿಗಳು ಹಲವು ನಟ, ನಟಿಯರನ್ನು ಅರೆಸ್ಟ್‌ ಮಾಡಿದ್ದಾರೆ. ಕ್ರೂಸ್‌ನಲ್ಲಿ ಪಾರ್ಟಿ ನಡೆಸಿರುವ ಹಿನ್ನೆಲೆಯಲ್ಲಿ ಕ್ರೂಸ್‌ ಸಿಬ್ಬಂದಿಗಳನ್ನು ಕೂಡ ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : Weather Report : ಭಾರತದ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ತೀವ್ರಗೊಳ್ಳುವ ನಿರೀಕ್ಷೆ

( Rave Party Raided by NCB on Cruise Near Mumbai, Bollywood Star Son and 10 Arrest )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular