RCB vs PBKS : ಆರ್‌ಸಿಬಿ ಗೆದ್ರೆ ಪ್ಲೇ ಆಫ್‌, ಪಂಜಾಬ್‌ಗೆ ಮಾಡು ಇಲ್ಲಾ ಮಡಿ ಪಂದ್ಯ

ದುಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ( IPL2021 ) 14ನೇ ಆವೃತ್ತಿಯ ಪಂದ್ಯಾವಳಿ ತೀವ್ರ ಕುತೂಹಲ ಮೂಡಿಸಿದೆ. ಇಂದು ಶಾರ್ಜಾ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್‌ (PBKS) ತಂಡಕ್ಕೆ ನಿರ್ಣಾಯಕವಾಗಲಿದೆ. ಇನ್ನೊಂದೆಡೆ ಆರ್‌ಸಿಬಿ (RCB) ಗೆದ್ರೆ ಫ್ಲೇ ಆಪ್‌ ಪ್ರವೇಶಿಸಲಿದೆ.

ವಿರಾಟ್‌ ಕೊಯ್ಲಿ ನಾಯಕತ್ವದ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡ ಆಡಿದ 11 ಪಂದ್ಯಗಳ ಪೈಕಿ ೪ ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದು, 7 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಸದ್ಯ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮೈನರ್‌ ರನ್‌ರೇಟ್‌ ಹೊಂದಿರುವ ಹಿನ್ನೆಲೆಯಲ್ಲಿ ಆರ್‌ಸಿಬಿಗೆ ಇಂದಿನ ಪಂದ್ಯ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.

ಇನ್ನೊಂದೆಡೆಯಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌ ನಾಯಕತ್ವದ ಪಂಜಾಬ್‌ ತಂಡಕ್ಕೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಇದುವರೆಗೆ ಒಟ್ಟು 12 ಪಂದ್ಯಗಳನ್ನು ಆಡಿರುವ ಪಂಜಾಬ್‌ ಕಿಂಗ್ಸ್‌ ತಂಡ ಒಟ್ಟು 5 ಪಂದ್ಯಗಳಲ್ಲಿ ಗೆಲುವು ಕಂಡಿದ್ರೆ 7 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಹೀಗಾಗಿ ಮುಂದಿನ ಹಂತಕ್ಕೆ ತೇರ್ಗಡೆ ಆಗಲು, ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇ ಬೇಕಾಗಿದೆ.

ಬೆಂಗಳೂರು ರಾಯಲ್‌ ಚಾಲೇಂಜರ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಳು ಐಪಿಎಲ್‌ನಲ್ಲಿ ಒಟ್ಟು 27 ಬಾರಿ ಮುಖಾಮುಖಿಯಾಗಿದ್ದ, ಪಂಜಾಬ್‌ ಕಿಂಗ್ಸ್‌ ತಂಡ 15 ಬಾರಿ ಗೆಲುವು ಕಂಡಿದ್ರೆ, ಆರ್‌ಸಿಬಿ 12 ಬಾರಿ ಗೆದ್ದಿದೆ. ಸದ್ಯದ ಸ್ಥಿತಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡಲ್ಲಿ ಕೋಚ್‌ ಅನಿಲ್‌ ಕುಂಬ್ಳೆ, ನಾಯಕ ರಾಹುಲ್‌, ಮಯಾಂಕ್‌ ಅಗರ್‌ವಾಲ್‌ ಸೇರಿದಂತೆ ಕನ್ನಡಿಗರೇ ತುಂಬಿಕೊಂಡಿದ್ದಾರೆ. ಬೆಂಗಳೂರು ವಿರುದ್ದ ಪಂದ್ಯದಲ್ಲಿಯೂ ರಾಹುಲ್‌ ಪಡೆ ಉತ್ತಮ ಪ್ರದರ್ಶನವನ್ನು ನೀಡಿದೆ. ರಾಹುಲ್‌ ಹಾಗೂ ಮಯಾಂಕ್‌ ಇಂದು ಸ್ಪೋಟಕ ಆಟದ ಪ್ರದರ್ಶನವನ್ನು ನೀಡಿದ್ರೆ ಪಂಜಾಬ್‌ ಗೆಲ್ಲೋದು ಖಚಿತ.

ಇದನ್ನೂ ಓದಿ : ನೀರಜ್ ಚೋಪ್ರಾ ಸ್ಕೂಬಾ ಡೈವ್ : ನೀರಿನಲ್ಲಿ ಜಾವೆಲಿನ್‌ ಎಸೆದ ಚಿನ್ನದ ಹುಡುಗನ ವಿಡಿಯೋ ವೈರಲ್‌

ಇನ್ನೊಂದೆಡೆಯಲ್ಲಿ ಆರ್‌ಸಿಬಿ ಕೂಡ ಹೆಚ್ಚು ಬಲಿಷ್ಠವಾಗಿದೆ. ನಾಯಕ ಕೊಯ್ಲಿ, ದೇವದತ್ತ ಪಡಿಕ್ಕಲ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇನ್ನೊಂದೆಡೆಯಲ್ಲಿ ಹರ್ಷಲ್‌ ಪಟೇಲ್‌, ಆಡೆನ್‌ ಮರ್ಕ್ರಮ್‌ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಆರ್‌ಸಿಬಿ ಹಾಗೂ ಪಂಜಾಬ್‌ ಕಿಂಗ್ಸ್‌ ನಡುವೆ ಹೈ ಓಲ್ಟೇಜ್‌ ಪಂದ್ಯ ನಡೆಯೋದು ಗ್ಯಾರಂಟಿ.

ಇದನ್ನೂ ಓದಿ : ಹೊಸ ದಾಖಲೆ ನಿರ್ಮಿಸಿದ ಹರ್ಷಲ್‌ ಪಟೇಲ್‌ : ಆರ್‌ಸಿಬಿ ಪರ ಹೆಚ್ಚು ವಿಕೆಟ್‌ ಪಡೆದ ಸಾಧನೆ

(Punjab Kings PBKS Clash Against Royal Challenges Bangalore RCB Today IPL 2021)

Comments are closed.