ಮಂಗಳವಾರ, ಏಪ್ರಿಲ್ 29, 2025
HomeNationalRepublic Day 2022 Airshow: ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ದೆಹಲಿಯಲ್ಲಿ ನಡೆದ ಆಕರ್ಷಕ ವೈಮಾನಿಕ ಪ್ರದರ್ಶನದಲ್ಲಿ...

Republic Day 2022 Airshow: ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ದೆಹಲಿಯಲ್ಲಿ ನಡೆದ ಆಕರ್ಷಕ ವೈಮಾನಿಕ ಪ್ರದರ್ಶನದಲ್ಲಿ ರೇವಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಭಾಗಿ

- Advertisement -

ಬೆಂಗಳೂರು, 26 ಜನವರಿ 2022: ದೆಹಲಿಯಲ್ಲಿ ಬುಧವಾರ (ಜ.26) ನಡೆದ ವೈಮಾನಿಕ ಪ್ರದರ್ಶನ (Republic Day Flypast) “75”ರಲ್ಲಿ ರೇವಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯೊಬ್ಬರು ಪಾಲ್ಗೊಂಡಿದ್ದರು. ತನ್ನ ಹಳೆಯ ವಿದ್ಯಾರ್ಥಿಯ ಈ ಸಾಧನೆಯಿಂದ ದೇಶದ ಪ್ರಮುಖ ವಿದ್ಯಾಸಂಸ್ಥೆಗಳಲ್ಲೊಂದಾದ ರೇವಾ ವಿಶ್ವವಿದ್ಯಾಲಯ (Rewa University) ಇಂದು ಹೆಮ್ಮೆಯಿಂದ ಬೀಗುತ್ತಿದೆ.

ಕೆ.ನಿತೀಶ್‌ ಕುಮಾರ್ ಎಂಬ ಸಂಸ್ಥೆಯ ಹಳೆಯ ವಿದ್ಯಾರ್ಥಿಯೊಬ್ಬರು ಇಂದು ದೆಹಲಿಯಲ್ಲಿ ನಡೆದ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ಪ್ರದರ್ಶನದಲ್ಲಿ ಭಾರತೀಯ ವಾಯುಸೇನೆಯ ಯುದ್ಧವಿಮಾನಗಳು “75” ಅಂಕಿಯ ಆಕಾರದ ರಚನೆ (Formation) ಮಾಡಿದ್ದವು. ಈ ತಂಡದಲ್ಲಿ ನಿತೀಶ್​ ಕುಮಾರ್ ಸಹ ವಿಮಾನವೊಂದರ ಪೈಲಟ್‌ ಆಗಿದ್ದರು. ಇವರು 2016ರಲ್ಲಿ ಸಂಸ್ಥೆಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಶಿಕ್ಷಣವನ್ನು ಮುಗಿಸಿದ್ದರು.

ಕಳೆದ ವರ್ಷ ನಮ್ಮದೇ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಸ್ಕ್ವಾಡ್ರನ್‌ ಲೀಡರ್ ನೇಹಾ ಯಾದವ್ (Neha Yadav) ಹಾಗೂ ಕುಟ್ಟಪ್ಪ (Kuttappa) ರವರು ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿದ್ದರೆಂದು ತಿಳಿಸಲು ನಮಗೆ ಬಹಳ ಹೆಮ್ಮೆಯಾಗುತ್ತದೆಂದು ರೇವಾ ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಹಳೆಯ ವಿದ್ಯಾರ್ಥಿಗಳ ಇಂತಹ ಹೆಮ್ಮೆಯ ಸಾಧನೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ರೇವಾ ಸಂಸ್ಥೆಯ ಗೌರವಾನ್ವಿತ ಕುಲಪತಿಗಳಾದ ಡಾ.ಪಿ.ಶ್ಯಾಮರಾಜು, ಇದು ನಮ್ಮ ಇಡೀ ಸಂಸ್ಥೆಗೆ ಅತ್ಯಂತ ಹೆಮ್ಮೆಯ ಕ್ಷಣ ಎಂದರಲ್ಲದೇ ಇಂತಹ ಹಳೆಯ ವಿದ್ಯಾರ್ಥಿಗಳು ಪ್ರಸ್ತುತ ಸಂಸ್ಥೆಯಲ್ಲಿ ಕಲಿಯುತ್ತಿರುವ ಹಾಗೂ ಮುಂದಿನ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ತಮ್ಮ ಆಸಕ್ತಿಯ ವಲಯಗಳಲ್ಲಿ ತಮ್ಮ ಕನಸು ಹಾಗೂ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ನಾವು ನಮ್ಮ ವಿದ್ಯಾರ್ಥಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತೇವೆಂದು ಅವರು ತಿಳಿಸಿದರು. ದೃಢವಾದ ಬದ್ಧತೆ ಹಾಗೂ ಸಮರ್ಪಣಾ ಮನೋಭಾವಗಳಿದ್ದರೆ ಯಾವುದೇ ಕನಸೂ ದೊಡ್ಡದಲ್ಲವೆಂದು ನಮ್ಮ ವಿದ್ಯಾರ್ಥಿಗಳು ಸಾಧಿಸಿ ತೋರಿಸಿದ್ದಾರೆಂದೂ ಅವರು ತಿಳಿಸಿದ್ದಾರೆ.

ನಮ್ಮ ರೇವಾ ವಿಶ್ವವಿದ್ಯಾಲಯದಲ್ಲಿ ಓದಿದ ವಿದ್ಯಾರ್ಥಿಗಳು ಇನ್ನೂ ಮಹತ್ತರವಾದ ಸಾಧನೆಗಳನ್ನು ಮಾಡಲೆಂದು ನಾವು ಆಶಿಸುತ್ತೇವೆ ಹಾಗೂ ನಾವು ಯಾವಾಗಲೂ ನಮ್ಮ ವಿದ್ಯಾರ್ಥಿಗಳ ಸಾಧನೆಗಳ ಸ್ವಚ್ಛಂದ ಹಾರಾಟಕ್ಕೆ ಅವರ ರೆಕ್ಕೆಗಳಡಿಯ ಗಾಳಿಯಾಗಿ ಕಾರ್ಯನಿರ್ವಹಿಸಲು ನಾವು ಸದಾ ಸಿದ್ಧರಿದ್ದು ಅದು ನಮಗೆ ಹೆಮ್ಮೆಯೆನಿಸುತ್ತದೆ ಎಂದು ಡಾ.ಪಿ.ಶ್ಯಾಮರಾಜು ತಿಳಿಸಿದ್ದಾರೆ.

ಇದನ್ನೂ ಓದಿ: Amazon Republic Day Sale 2022: ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಆರಂಭ; ಸ್ಮಾರ್ಟ್‌ಫೋನ್, ಟಿವಿ, ಪವರ್ ಬ್ಯಾಂಕ್ ಗೇಮಿಂಗ್ ಲ್ಯಾಪ್‌ಟಾಪ್ ಮೇಲಿನ ಆಫರ್ ವಿವರ ಇಲ್ಲಿದೆ

ಇದನ್ನೂ ಓದಿ: Republic Day 2022 Special: ಜನವರಿ 26 ರಂದೇ ಗಣರಾಜ್ಯೋತ್ಸವ ದಿನವನ್ನು ಆಚರಿಸುವುದೇಕೆ?

(Rewa University Alumni in Republic Day Airshow)

RELATED ARTICLES

Most Popular