Best 365 Day Plans: ಯಾವ ಸಿಮ್‌ನ ಯಾವ ರೀಚಾರ್ಜ್ ಬೆಸ್ಟ್? ಕಡಿಮೆ ದುಡ್ಡಿಗೆ ಹೆಚ್ಚು ಲಾಭ ಕೊಡುವ ಇಂಟರ್‌ನೆಟ್ ಪ್ಯಾಕ್‌ಗಳಿವು

ಏರ್‌ಟೆಲ್, ವೊಡಾಫೋನ್-ಐಡಿಯಾ ಮತ್ತು ರಿಲಯನ್ಸ್ ಜಿಯೋ ವಿವಿಧ ಆನ್‌ಲೈನ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತವೆ. ಈ ಕಂಪನಿಗಳು ತಮ್ಮ ಮೊಬೈಲ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು (Best Prepaid Plans) ಬದಲಾಯಿಸಿದ್ದವು. ನಿಮ್ಮ ಅವಶ್ಯಕತೆಗಳ ಆಧಾರದ ಮೇಲೆ ನೀವು ದೈನಂದಿನ ಟಾಪ್-ಅಪ್‌ಗಳು, ವೀಕ್ಲಿ ರೀಚಾರ್ಜ್ ಅಥವಾ ಮಾಸಿಕ ರೀಚಾರ್ಜ್‌ನೊಂದಿಗೆ ಆನ್‌ಲೈನ್ ಮೊಬೈಲ್ ರೀಚಾರ್ಜ್ (Online Mobile Recharge) ಮಾಡಬಹುದು. ಅಲ್ಲದೆ, ಈ ಕಂಪನಿಗಳು ಕಾಲ್ ಪ್ರಯೋಜನಗಳು, ಉತ್ತಮ ಪ್ರಮಾಣದ ಡೇಟಾ, ಉಚಿತ ಏಸ್ ಎಂ ಎಸ್ ಗಳು ಮತ್ತು ಹಲವಾರು ಇತರ ಪ್ರಯೋಜನಗಳನ್ನು ಒಳಗೊಂಡಿರುವ ವಾರ್ಷಿಕ ರೀಚಾರ್ಜ್ ಯೋಜನೆಗಳನ್ನು (Best 365 Day Plans) ನೀಡುತ್ತವೆ.

ಏರ್‌ಟೆಲ್, ವೊಡಾಫೋನ್ ಮತ್ತು ಜಿಯೋ ನೀಡುವ 365 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರಿಪೇಯ್ಡ್ ಯೋಜನೆಗಳನ್ನು ಕೆಳಗೆ ನೀಡಲಾಗಿದೆ.
ರಿಲಯನ್ಸ್ ಜಿಯೋ ರೂ 2,879 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ 2,879 ಬೆಲೆಯ ಈ ಜಿಯೋ ಪ್ರಿಪೇಯ್ಡ್ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಗ್ರಾಹಕರು 2ಜಿಬಿ ದೈನಂದಿನ ಡೇಟಾವನ್ನು ಪಡೆಯುತ್ತಾರೆ. ಅಂದರೆ ಸಂಪೂರ್ಣ ಮಾನ್ಯತೆಯ ಅವಧಿಗೆ ಒಟ್ಟು 730ಜಿಬಿ ಡೇಟಾ, ದಿನಕ್ಕೆ 100 ಎಸ್ ಎಂ ಎಸ್, ಅನ್ ಲಿಮಿಟೆಡ್ ಕಾಲ್ಸ್ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಫ್ರೀ ಲಾಗಿನ್ ಆಗಬಹುದು.

ರಿಲಯನ್ಸ್ ಜಿಯೋ ರೂ 4,199 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ
ರೂ 4,199 ಜಿಯೋ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಡಿಯಲ್ಲಿ, ಗ್ರಾಹಕರು ಪ್ರತಿದಿನ 3ಜಿಬಿ ಡೇಟಾವನ್ನು ಪಡೆಯುತ್ತಾರೆ, ಅಂದರೆ ಒಟ್ಟು 1,095ಜಿಬಿ ಡೇಟಾವನ್ನು ಪಡೆಯುತ್ತಾರೆ. ಇದು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆಗಳನ್ನು ಮತ್ತು 100 ದೈನಂದಿನ ಎಸ್ ಎಂ ಎಸ್ ಸಹ ಒಳಗೊಂಡಿದೆ. ಅಲ್ಲದೆ, ಜಿಯೋ ಟಿವಿ, ಜಿಯೋ ಚಾಟ್ ಮತ್ತು ಹೆಚ್ಚಿನವುಗಳಂತಹ ಜಿಯೋ ಅಪ್ಲಿಕೇಶನ್‌ಗಳಿಗೆ ಸಬ್ಸ್ಕ್ರಿಪ್ಶನ್ ಸಿಗಲಿದೆ.

ರೂ 1,799 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ
ಏರ್‌ಟೆಲ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 356 ದಿನಗಳ ಮಾನ್ಯತೆಯನ್ನು ನೀಡುತ್ತದೆ ಮತ್ತು ಇದರ ಬೆಲೆ 1,799 ರೂ. ಈ ಯೋಜನೆಯಡಿಯಲ್ಲಿ, ಏರ್‌ಟೆಲ್ ಒಂದು ವರ್ಷಕ್ಕೆ ಅನಿಯಮಿತ ಕರೆಗಳೊಂದಿಗೆ 2ಜಿಬಿ ದೈನಂದಿನ ಡೇಟಾವನ್ನು ಮತ್ತು ಒಟ್ಟು 3600 ಎಸ್‌ಎಂಎಸ್ ಅನ್ನು ನೀಡುತ್ತದೆ.

ಏರ್‌ಟೆಲ್ ರೂ 2,999 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ
ಏರ್‌ಟೆಲ್‌ನಿಂದ ರೂ 2,999 ಯೋಜನೆಯು ದಿನಕ್ಕೆ 2ಜಿಬಿ ಡೇಟಾವನ್ನು 100 ದೈನಂದಿನ ಎಸ್ ಎಂ ಎಸ್ ಮತ್ತು 365 ದಿನಗಳವರೆಗೆ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ ಪ್ರಯೋಜನಗಳನ್ನು ನೀಡುತ್ತದೆ. ಯೋಜನೆಯು ಡಿಸ್ನಿ+ ಹಾಟ್‌ಸ್ಟಾರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, ಅಮೆಜಾನ್ ಪ್ರೈಮ್ ಮೊಬೈಲ್ ಎಡಿಷನ್ ಉಚಿತ ಸಬ್ಸ್ಕ್ರಿಪ್ಶನ್ ಉಚಿತ ಹಲೋ ಟ್ಯೂನ್ಸ್, ರೂ 100 ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್ ಮತ್ತು ಶಾ ಅಕಾಡೆಮಿಯಲ್ಲಿ ಒಂದು ವರ್ಷಕ್ಕೆ ಆನ್‌ಲೈನ್ ಕೋರ್ಸ್‌ಗಳಿಗೆ 1 ವರ್ಷದ ವಿಐಪಿ ಚಂದಾದಾರಿಕೆಯನ್ನು ಒಳಗೊಂಡಿದೆ.

ವೊಡಾಫೋನ್-ಐಡಿಯಾ ರೂ 1,799 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ
ಈ ರೂ 1,799 ಯೋಜನೆಯು 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಗ್ರಾಹಕರು 24ಜಿಬಿ ಡೇಟಾ, ಅನಿಯಮಿತ ಕರೆ ಪ್ರಯೋಜನಗಳು ಮತ್ತು 3600 ಎಸ್ ಎಂಎಸ್ಅನ್ನು ಪಡೆಯುತ್ತಾರೆ. ಯೋಜನೆಯ ಹೆಚ್ಚುವರಿ ಪ್ರಯೋಜನಗಳು ವಿ ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶವನ್ನು ಒಳಗೊಂಡಿವೆ.

ವೊಡಾಫೋನ್ ಐಡಿಯಾ ರೂ 2,899 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ
ವೊಡಾಫೋನ್ ನಿಂದ ರೂ 2,899 ಪ್ರಿಪೇಯ್ಡ್ ಯೋಜನೆಯು 365 ದಿನಗಳವರೆಗೆ ಪ್ರತಿದಿನ 1.5ಜಿಬಿಡೇಟಾವನ್ನು ನೀಡುತ್ತದೆ. ವೊಡಾಫೋನ್ ನ ಈ ವಾರ್ಷಿಕ ಯೋಜನೆಯು ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ ಪ್ರಯೋಜನಗಳನ್ನು, 100 ದೈನಂದಿನ ಎಸ್ ಎಂ ಎಸ್ ಮತ್ತು ವಿ ಮೂವೀಸ್ ಮತ್ತು ಟಿವಿಗೆ ಪ್ರವೇಶವನ್ನು ನೀಡುತ್ತದೆ.

ವೊಡಾಫೋನ್ ಐಡಿಯಾ ರೂ 3,099 ಪ್ರಿಪೇಯ್ಡ್ ರೀಚಾರ್ಜ್ ಯೋಜನೆ
ಈ ಯೋಜನೆಯು 1.5ಜಿಬಿ ದೈನಂದಿನ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು 100 ದೈನಂದಿನ ಎಸ್ ಎಂ ಎಸ್ ನೀಡುತ್ತದೆ. ಅಲ್ಲದೆ, ಚಂದಾದಾರರು ಡಿಸ್ನಿ+ ಹಾಟ್ ಸ್ಟಾರ್, ವಿ ಮೂವೀಸ್ ಮತ್ತು ವಿ ಕ್ಲಾಸಿಕ್ ಒಂದು ವರ್ಷದ ವಿಐಪಿ ಸಬ್ಸ್ಕ್ರಿಪ್ಶನ್ ಪಡೆಯುತ್ತಾರೆ.

ಇದನ್ನೂ ಓದಿ: Nokia G21: ನೋಕಿಯಾದ ಹೊಸ ಸ್ಮಾರ್ಟ್‌ಫೋನ್ ಜಿ21; 50-ಮೆಗಾಪಿಕ್ಸೆಲ್ ಕ್ಯಾಮೆರಾ, ಫೆಬ್ರವರಿಯಲ್ಲಿ ಬಿಡುಗಡೆ

ಇದನ್ನೂ ಓದಿ: Nexzu Bazinga E Cycle: ನೆಕ್ಸ್‌ಝು ಭಜಿಂಗಾ ಎಲೆಕ್ಟ್ರಿಕ್ ಸೈಕಲ್; ಇದು ಸಖತ್ ಗಟ್ಟಿಮುಟ್ಟು

(Best 365 Day Plans for recharge jio airtel BSNL Vi)

Comments are closed.