Ritu Karidhal : ಚಂದ್ರಯಾನ-3 ಹಿಂದಿದೆ ಭಾರತದ ರಾಕೆಟ್ ಮಹಿಳೆಯ ಶಕ್ತಿ : ಯಾರು ಈ ರಿತು ಕರಿದಾಲ್ ?

ನವದೆಹಲಿ : Ritu Karidhal : ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಹೊಸ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ಈಗಾಗಲೇ 3,897.89 ಕೆಜಿ ತೂಕದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಹೊತ್ತ ಭಾರತದ ಹೆವಿ ಲಿಫ್ಟ್ ರಾಕೆಟ್-LVM3 ನಭದತ್ತ ಚಿಮ್ಮಿದೆ. ಶುಕ್ರವಾರ ಮಧ್ಯಾಹ್ನ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ ಚಂದ್ರನತ್ತ ಹೊರಟಿದೆ. ಚಂದ್ರಯಾನ 3 ನೇತೃತ್ವವನ್ನು ವಹಿಸಿದ್ದು, ಭಾರತದ ರಾಕೆಟ್‌ ಮಹಿಳೆ ರಿತು ಕರಿದಾಲ್.

ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿದೆ. ಆದರೆ ಸಂಪೂರ್ಣಯಾಗಿ ಯಶಸ್ವಿಯಾಗಲಿದೆ ಅನ್ನೋ ವಿಶ್ವಾಸವನ್ನು ಭಾರತೀಯ ವಿಜ್ಞಾನಿಗಳು ಹೊಂದಿದ್ದಾರೆ. ಚಂದ್ರಯಾನ ೨ನಲ್ಲಿ ಆಗಿರುವ ವೈಫಲ್ಯಗಳನ್ನು ಸರಿ ಪಡಿಸಿ, ಇದೀಗ ಚಂದ್ರಯಾನ ೩ ಚಂದ್ರನತ್ತ ಪಯಣ ಬೆಳೆಸಿದೆ ಎನ್ನುತ್ತಾರೆ ಇಸ್ರೋ ಮಾಜಿ ಅಧ್ಯಕ್ಷ ಜಿ ಮಾಧವನ್ ನಾಯರ್. ಬಾಹ್ಯಾಕಾಶ ಲೋಕದಲ್ಲಿ ಇಂತಹ ಮಹತ್ವದ ಮೈಲಿಗಲ್ಲು ಸಾಧಿಸಲು ನಿಂತಿರೋದು ರಿತು ಕರಿದಾಲ್ ಶ್ರೀವಾಸ್ತವ.

ರಿತು ಕರಿಧಾಲ್ ಇಸ್ರೋ ವಿಜ್ಞಾನಿ. ಅವರು ಚಂದ್ರಯಾನ 3 ಮಿಷನ್‌ನ ಮಿಷನ್ ನಿರ್ದೇಶಕರಾಗಿದ್ದಾರೆ.ಉತ್ತರ ಪ್ರದೇಶದ ಲಕ್ನೋ ಮೂಲದವರಾಗಿರುವ ರಿತು ಕರಿದಾಲ್ ಕೂಡ ಮಂಗಳಯಾನ ಮಿಷನ್‌ನ ಭಾಗವಾಗಿದ್ದರು. ಮಂಗಳಯಾನದ ಉಪ ನಿರ್ದೇಶಕಿಯಾಗಿದ್ದರು. ಈಗ ಅವರು ಪ್ರಮುಖ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದಾರೆ.

ರಿತು ಕರಿಧಾಲ್ ಲಕ್ನೋದಲ್ಲಿ ಹುಟ್ಟಿ ಬೆಳೆದವರು. ಭೌತಶಾಸ್ತ್ರದಲ್ಲಿ ಲಕ್ನೋ ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿಯನ್ನು ಪಡೆದುಕೊಂಡಿದ್ದಾರೆ. ನಂತರ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದಾರೆ. ಅಲ್ಲದೇ ಭಾರತದ ಬಾಹ್ಯಾಕಾಶ ಸಂಸ್ಥೆ ISRO ಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅವಳು ಏರೋಸ್ಪೇಸ್‌ನಲ್ಲಿ ಪರಿಣಿತಿ. ಆಕೆಯನ್ನು ಭಾರತದ ರಾಕೆಟ್ ವುಮನ್ ಎಂದೂ ಕರೆಯುತ್ತಾರೆ. ಅವರು 1997 ರಿಂದ ಇಸ್ರೋ ಜೊತೆ ಕೆಲಸ ಮಾಡುತ್ತಿದ್ದಾರೆ.

ರಿತು ಕರಿದಾಲ್ ಅವರು ಯುವ ವಿಜ್ಞಾನಿ ಪ್ರಶಸ್ತಿ, ಇಸ್ರೋ ತಂಡ ಪ್ರಶಸ್ತಿ, ಎಎಸ್‌ಐ ತಂಡ ಪ್ರಶಸ್ತಿ, ಸೊಸೈಟಿ ಆಫ್ ಇಂಡಿಯಾ ಏರೋಸ್ಪೇಸ್ ಟೆಕ್ನಾಲಜಿ ಮತ್ತು ಇಂಡಸ್ಟ್ರೀಸ್‌ನ ಏರೋಸ್ಪೇಸ್ ವುಮನ್ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಂದ್ರಯಾನ 3 ಈ ಬಾರಿ ಒಯ್ಯುವುದಿಲ್ಲ ಮತ್ತು ಕಕ್ಷೆ ಸೇರುವುದಿಲ್ಲ. ವಿಜ್ಞಾನಿಗಳು ಸ್ಥಳೀಯ ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಕಳುಹಿಸುತ್ತಿದ್ದಾರೆ. 615 ಕೋಟಿ ವೆಚ್ಚದ ಚಂದ್ರಯಾನ 3 50 ದಿನಗಳಲ್ಲಿ ಚಂದ್ರನ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. ಇದು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ.

ಇದನ್ನೂ ಓದಿ : Chandrayaan-3 : ಶ್ರೀಹರಿಕೋಟಾದಿಂದ ಚಂದ್ರನೂರಿಗೆ ಪಯಣ ಬೆಳೆಸಿದ ಚಂದ್ರಯಾನ-3 : 40 ದಿನಗಳಲ್ಲಿ ಚಂದ್ರನನ್ನು ತಲುಪುವ ಗುರಿ ಹೊಂದಿದ ಇಸ್ರೋ

ಇದನ್ನೂ ಓದಿ : Tomato price : ಟೊಮ್ಯಾಟೋ ಬೆನ್ನಲ್ಲೇ ಏರಿಕೆ ಕಂಡ ಬೆಳ್ಳುಳ್ಳಿ : ಪ್ರತೀ ಕೆಜಿಗೆ 230 ರೂ.

Comments are closed.